ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಚಿಂತನೆ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

KannadaprabhaNewsNetwork |  
Published : Jan 09, 2025, 12:49 AM IST
ಸಮ್ಮೇಳನದ ಸರ್ವಾಧ್ಯಕ್ಷರಿಗೆ ಕನ್ನಡ ಭಾವುಟವನ್ನು ಹಸ್ತಾಂತರಿಸುತ್ತೀರುವ ಸಮ್ಮೇಳನದ ನಿಕಟ ಪೂರ್ವ ಅಧ್ಯಕ್ಷ ಡಾ.ಬಿ.ವಿ.ವಸಂತ್ ಕುಮಾರ್ | Kannada Prabha

ಸಾರಾಂಶ

ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸಲು ದಾವಣಗೆರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ಬಂದಾಗ ಜಿಲ್ಲಾ ಕ.ಸಾ.ಪ ದಿಂದ ಮನವಿ ಸಲ್ಲಿಸಿದ್ದಾರೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು. ಚನ್ನಗಿರಿ ತಾಲೂಕು ಮಟ್ಟದ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಸಿಎಂಗೆ ಈಗಾಗಲೇ ಮನವಿ ಸಲ್ಲಿಕೆ । ತಾಲೂಕು ಮಟ್ಟದ 17ನೇ ಕನ್ನಡ ಸಾಹಿತ್ಯ ಸಮ್ಮೇಳನ

ಕನ್ನಡಪ್ರಭ ವಾರ್ತೆ ಚನ್ನಗಿರಿ

ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸಲು ದಾವಣಗೆರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ಬಂದಾಗ ಜಿಲ್ಲಾ ಕ.ಸಾ.ಪ ದಿಂದ ಮನವಿ ಸಲ್ಲಿಸಿದ್ದಾರೆ. ಅಂತಹ ಸಮ್ಮೇಳನವನ್ನು ದಾವಣಗೆರೆಯಲ್ಲಿ ನಡೆಸುವ ಚಿಂತನೆ ಇದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಬುಧವಾರ ಚನ್ನಗಿರಿ ತಾಲೂಕು ಮಟ್ಟದ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ನಮ್ಮ ನಾಡಿನ ಕಲೆ, ಸಾಹಿತ್ಯ, ಸಂಗೀತ ಮತ್ತು ನಾಡು, ನುಡಿಯ ಬಗ್ಗೆ ನಮ್ಮ ಮಕ್ಕಳಲ್ಲಿ ಅಭಿಮಾನ ಬರುವಂತೆ ಬೆಳೆಸಬೇಕಾದ ಜವಾಬ್ದಾರಿ ಕನ್ನಡಿಗರಾದ ನಮ್ಮಗಳ ಮೇಲಿರಬೇಕು ಎಂದರು.

ಶಾಸಕ ಬಸವರಾಜ ವಿ.ಶಿವಗಂಗಾ ವಹಿಸಿ ಮಾತನಾಡಿ, ನಾಡಿನಲ್ಲಿರುವ ಕನ್ನಡಿಗರು ಮಮ್ಮಿ, ಡ್ಯಾಡಿ ಎಂಬ ಸಂಸ್ಕೃತಿಗೆ ಒಳಗಾಗಿದ್ದು ಕನ್ನಡ ಭಾಷೆಯಲ್ಲಿ ಅಪ್ಪ, ಅಮ್ಮ ಎಂದಾಗ ಸಿಗುವಂತಹ ಸಂತೋಷ ಹೇಳತೀರದು ಎಂದರು.

ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಕನ್ನಡನಾಡು ಎನ್ನುವುದು ಹೊನ್ನಿನ ಬೀಡಾಗಿದ್ದು ಮಧ್ಯಕರ್ನಾಟಕದಲ್ಲಿರುವ ದಾವಣಗೆರೆ ಜಿಲ್ಲೆಯಲ್ಲಿ ಅಚ್ಚ ಕನ್ನಡ ಭಾಷೆಯನ್ನು ಮಾತನಾಡುವವರಿದ್ದು ಭಾಷೆ ಎನ್ನುವುದು ಬಾಂಧವ್ಯಗಳನ್ನು ಬೆಸೆಯುವಂತಹ ಶಕ್ತಿ ಕನ್ನಡ ಭಾಷೆಗಿದೆ. ಎಂದರು.

ವಚನ ಸಾಹಿತ್ಯವು ಕನ್ನಡ ಭಾಷೆಗೆ ಮೆರಗು ನೀಡಿದ್ದು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಕನ್ನಡಿಗರಾದ ನಮ್ಮ ಕರ್ತವ್ಯಗಳು ಬಹಳಷ್ಟಿದೆ ಎಂದರು.

ಸಮಾರಂಭದಲ್ಲಿ ಸಮ್ಮೇಳನದ ಅಧ್ಯಕ್ಷರಾಗಿದ್ದ ಕೆ.ಸಿದ್ದಲಿಂಗಪ್ಪ ಇವರಿಗೆ ಕನ್ನಡ ಧ್ವಜದ ಹಸ್ತಾಂತರವನ್ನು ನಿಕಟ ಪೂರ್ವ ಸಮ್ಮೇಳನದ ಅಧ್ಯಕ್ಷರಾಗಿದ್ದ ಡಾ.ಬಿ.ವಿ.ವಸಂತಕುಮಾರ್ ಹಸ್ತಾಂತರಿಸಿದರು.

ಸಮಾರಂಭದಲ್ಲಿ ಬ್ರಹ್ಮಕುಮಾರಿ ಸಮಾಜದ 2025ರ ಕ್ಯಾಲೆಂಡರ್ ಗಳನ್ನು ಬಿಡುಗಡೆ ಗೊಳಿಸಲಾಯಿತು.

ಪ್ರಗತಿಪರ ಚಿಂತಕ ದಾದಾಪೀರ್ ನವೀಲೆಹಾಳ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಬಿ.ವಾಮದೇವಪ್ಪ, ತಾಲೂಕು ಕ.ಸಾ.ಪ ಅಧ್ಯಕ್ಷ ಎಲ್.ಜಿ.ಮಧುಕುಮಾರ್, ವರ್ತಕರ ಸಂಘದ ಅಧ್ಯಕ್ಷ ಕೆ.ಸಿರಾಜ್ ಅಹಮದ್, ಜನಪದ ಕಲಾವಿದ ಯುಗಧರ್ಮರಾಮಣ್ಣ, ಜನಪದ ತಜ್ಞ ಎಸ್.ಟಿ.ಶಾಂತಗಂಗಾಧರ್, ಗ್ರಾ.ಪಂ ಅಧ್ಯಕ್ಷೆ ರೇಣುಕಾ ಮೂರ್ತೆಪ್ಪ, ಉಪಾಧ್ಯಕ್ಷೆ ಮೀನಾಕ್ಷಮ್ಮಕರಿಯಪ್ಪ, ಎಂ.ಸಿದ್ದಪ್ಪ, ತಹಶೀಲ್ದಾರ್ ಶಂಕರಪ್ಪ, ತಾ.ಪಂ ಕಾರ್ಯನಿರ್ವಾಣಾಧಿಕಾರಿ ಬಿ,ಕೆ.ಉತ್ತಮ, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ, ಬಿ.ಸಿ.ಎಂ.ಅಧಿಕಾರಿ ರವೀಂದ್ರಕುಮಾರ್ ಅಥರ್ಗ, ಕಾಕನೂರು ಎಂ,ಬಿ.ನಾಗರಾಜ್ ಉಪಸ್ಥಿತರಿದ್ದರು.

ಸಮ್ಮೇಳನದ ನಿರ್ಣಯಗಳನ್ನು ಪಾಲಿಸಬೇಕು

ತಾಲೂಕು, ಜಿಲ್ಲೆ, ರಾಜ್ಯ ಮಟ್ಟಗಳಲ್ಲಿ ನಡೆಯುವಂತಹ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಳ್ಳುವಂತಹ ನಿರ್ಣಯಗಳನ್ನು ಸರ್ಕಾರವು ಪರಿಪಾಲನೆ ಮಾಡಬೇಕು ಎಂದು ಸಮ್ಮೇಳನದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಮಹಾಸ್ವಾಮಿಗಳು ಹೇಳಿದರು.

17ನೇ ಕನ್ನಡ ಸಾಹಿತ್ಯ ಸಮ್ಮೇಳನದ ರಾಜ ಕೆಂಗಪ್ಪ ನಾಯಕ ಮಹಾದ್ವಾರದ, ದಿವಂಗತ ಜಿ.ಸಿದ್ದಲಿಂಗಪ್ಪ ಗೌಡ್ರು ಮಹಾ ವೇದಿಕೆಯಿಂದ ಅವರು ಮಾತನಾಡಿದರು.

ಕನ್ನಡ ಭಾಷೆಯ ಹಿರಿಮೆ ಗರಿಮೆ ಇದರ ಪರಂಪರೆಯನ್ನು ಉಳಿಸಲು ತೆಗೆದುಕೊಳ್ಳುವಂತಹ ನಿರ್ಣಯಗಳು ನಿರ್ಣಯಗಳಾಗಿಯೇ ಉಳಿಯುತ್ತವೆ. ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿದ್ದರೂ ಸಹ ಕನ್ನಡ ಭಾಷೆಯ ಬೆಳವಣಿಗೆ ಕುಂಠಿತವಾಗುತ್ತಿದೆ ಎಂದರು.

PREV

Recommended Stories

ಬಿಆರ್‌ಎಲ್ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಿರಕಾಲ ಉಳಿಯುವ ಆಪ್ತಭಾವದ ಕವಿ
ದಸರಾ ವೇಳೆ ಬಾನುರಿಂದ 2023ರ ಘಟನೆ ಮರುಕಳಿಸಬಾರ್ದು : ಯದುವೀರ್‌