ಹಳೆಯ ದೇವಾಲಯಗಳ ಜೀರ್ಣೋದ್ಧಾರ ಪುಣ್ಯದ ಕೆಲಸ: ಶ್ರೀ

KannadaprabhaNewsNetwork |  
Published : Apr 20, 2024, 01:06 AM IST
ಫೋಟೋ 19 ಎ, ಎನ್, ಪಿ 1 ಆನಂದಪುರ ಎಲ್ಲಿಗೆ ಸಮೀಪದ ಹೊಸಗುಂದ  ಉಮಾಮಹೇಶ್ವರ ದೇವಾಲಯದ ಆವರಣದಲ್ಲಿ  ಮಹಾ ರುದ್ರ ಹವನ ಪೂರ್ಣಾವತಿ ಮತ್ತು ಆಂಜನೇಯ ಸ್ವಾಮಿಯ  ಬಾಲಾಲಯ ಪ್ರತಿಷ್ಠಾಪನ ಕಾರ್ಯಕ್ರಮಕ್ಕೆ   ಗುರುವಾರ  ಆಗಮಿಸಿದಂತ ಶೃಂಗೇರಿ ಜಗದ್ಗುರು ಶ್ರೀ  ವಿಧುಶೇಖರ ಭಾರತೀ ಸ್ವಾಮಿ ಹಾಗು ಅಶ್ವಿನ್ ಕುಮಾರ್, ಡಾ. ಗೌರಿಶಂಕರ್ , ಸಿ ಎಮ್. ಎನ್  ಶಾಸ್ತ್ರಿ  ಇತರರಿದ್ದರು. | Kannada Prabha

ಸಾರಾಂಶ

ಆನಂದಪುರ ಸಮೀಪದ ಹೊಸಗುಂದ ಉಮಾಮಹೇಶ್ವರ ಆವರಣದಲ್ಲಿ ಮಹಾರುದ್ರ ಹವನ ಪೂರ್ಣಾವತಿ ಹಾಗೂ ಆಂಜನೇಯ ಸ್ವಾಮಿಯ ಬಾಲಾಲಯ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು.

ಹೊಸಗುಂದ ಉಮಾಮಹೇಶ್ವರ ದೇವಳದಲ್ಲಿ ಮಹಾರುದ್ರ ಹವನ ಪೂರ್ಣಾಹುತಿ, ಆಂಜನೇಯ ಬಾಲಾಲಯ ಪ್ರತಿಷ್ಠಾಪನೆ

ಕನ್ನಡಪ್ರಭ ವಾರ್ತೆ ಆನಂದಪುರ

ಹಳೆಯ ದೇವಾಲಯಗಳ ಜೀರ್ಣೋದ್ಧಾರ ಅತ್ಯಂತ ಪುಣ್ಯದ ಕೆಲಸ. ಹೊಸಗುಂದ ಕ್ಷೇತ್ರ ಜೀರ್ಣೋದ್ಧಾರದಿಂದ ಈ ಕ್ಷೇತ್ರಕ್ಕೆ ಹೆಚ್ಚು ಬೆಳಕು ಬಂದಂತಾಗಿದೆ ಎಂದು ಶೃಂಗೇರಿಯ ಜಗದ್ಗುರು ವಿಧುಶೇಖರಭಾರತೀ ಶ್ರೀ ನುಡಿದರು.

ಅವರು ಇಲ್ಲಿಗೆ ಸಮೀಪದ ಹೊಸಗುಂದ ಉಮಾಮಹೇಶ್ವರ ದೇವಾಲಯದ ಆವರಣದಲ್ಲಿ ನಗರಿಯಲ್ಲಿ ಗುರುವಾರ ನಡೆದ ಮಹಾರುದ್ರ ಹವನ ಪೂರ್ಣಾಹುತಿ ಮತ್ತು ಆಂಜನೇಯಸ್ವಾಮಿ ಬಾಲಾಲಯ ಪ್ರತಿಷ್ಠಾಪನೆ ನೆರವೇರಿಸಿ ಮಾತನಾಡಿದರು. ಒಳ್ಳೆಯ ಕೆಲಸಕ್ಕೆ 108 ಸವಾಲುಗಳು ಎದುರಾದಾಗ ಅಂತಿಮವಾಗಿ ಉತ್ತಮ ಫಲಿತಾಂಶ ನೀಡುತ್ತದೆ. ಈಶ್ವರನ ಮನಸ್ಸಿನಲ್ಲಿ ಸಂಕಲ್ಪ ಮೂಡಿತು ಎಂದರೆ ಎಲ್ಲಾ ಕೆಲಸಗಳು ವ್ಯವಸ್ಥಿತವಾಗಿ ನಡೆಯುತ್ತವೆ. ದೇವರು ಯಾರ ಕೈಯಲ್ಲಿ ಕೆಲಸ ಮಾಡಿಸಬೇಕು ಎನ್ನುವ ಸಂಕಲ್ಪ ಕೈಗೊಳ್ಳುತ್ತಾರೋ ಅಂಥವರಿಂದಲೇ ಕೆಲಸ ಕಾರ್ಯಗಳು ಮುನ್ನಡೆಯುತ್ತವೆ. ಇದಕ್ಕೆ ಹೊಸಗುಂದ ಕ್ಷೇತ್ರದ ಜೀರ್ಣೋದ್ಧಾರವೇ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಹಳೆಯ ದೇವಾಲಯಗಳ ಜೀರ್ಣೋಧಾರ ಮಾಡುವುದು ಅತ್ಯಂತ ಪುಣ್ಯದ ಕೆಲಸ ಇದರ ಜೀರ್ಣೋದ್ಧಾರದಿಂದ ಈ ಪ್ರದೇಶಕ್ಕೆ ಬೆಳಕು ಬಂದಂತಾಗುತ್ತದೆ. ಎಲ್ಲಾ ಕೆಲಸ ಕಾರ್ಯಗಳು ಮುಂದಿನ ದಿನಗಳಲ್ಲಿ ಯಶಸ್ವಿಯಾಗಿ ನಡೆಯುತ್ತದೆ. ಧಾರ್ಮಿಕ ಕಾರ್ಯಕ್ರಮಗಳ ಆಚರಣೆ ಮತ್ತು ಆರಾಧನೆಗಳನ್ನು ವ್ಯವಸ್ಥಿತವಾಗಿ ನಾವು ನಡೆಸಿಕೊಂಡು ಹೋದಾಗನಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು.ಮ್ಯಾನೇಜಿಂಗ್ ಟಸ್ಟಿ ಸಿ.ಎಮ್.ಎನ್.ಶಾಸ್ತ್ರಿ ಮಾತನಾಡಿ, ಶೃಂಗೇರಿ ಜಗದ್ಗುರುಗಳವರ ಮಾರ್ಗದರ್ಶನ ಹಾಗೂ ಆಶೀರ್ವಾದದಿಂದ ಎಲ್ಲಾ ಕೆಲಸಗಳು ವ್ಯವಸ್ಥಿತ ವಾಗಿ ನಡೆದಿವೆ. ಈ ಕಾರ್ಯದಲ್ಲಿ ಸಾಕಷ್ಟು ಸಮಸ್ಯೆ ಸವಾಲುಗಳನ್ನು ಎದುರಿಸಿದ್ದು ಜಗದ್ಗುರುಗಳು ದಿವ್ಯ ಸನ್ನಿಧಾನದ ನಮ್ಮೆಲ್ಲ ಕೆಲಸಗಳಿಗೆ ಧೈರ್ಯ ತುಂಬಿದೆ ಎಂದು ತಿಳಿಸಿದರು.

ಗುರು ಸೇವಾ ಧರೀಣ ಶೃಂಗೇರಿಯ ಡಾ.ಗೌರಿಶಂಕರ್ ರವರನ್ನು ಸನ್ಮಾನಿಸಲಾಯಿತು. ವಿವಿಧ ಸಮುದಾಯದವರು. ಅನೇಕ ದೇವಾಲಯದ ಸಮಿತಿಯ ಸದಸ್ಯ ರುಗಳು ಶ್ರೀಗಳಿಗೆ ಫಲ ಸಮರ್ಪಿಸಿದರು. ಸಾಗರ ಶೃಂಗೇರಿ ಮಠದ ಅಶ್ವಿನ್ ಕುಮಾರ್, ಸ್ಥಳೀಯ ಶಾಖಾ ಮುಖ್ಯಸ್ಥ ಮಂಜುನಾಥ್, ಮ.ಸ. ನಂಜುಂಡ ಸ್ವಾಮಿ, ಶೇಷಗಿರಿ ಹೆಗಡೆ, ಶೋಭಾ ಶಾಸ್ತ್ರಿ, ಸೂರ್ಯ ಶಾಸ್ತ್ರಿ, ನಾಗೇಂದ್ರ, ಪಾಂಡುರಂಗ, ತಾರಾಮೂರ್ತಿ, ಗಿರಿಧರ್ ರಾವ್, ನಾಗೇಂದ್ರ ಕುಮಟ, ಜಯರಾಮ್, ಕೃಷ್ಣಮೂರ್ತಿ, ಜ್ಯೋತಿ ಕೋವಿ, ರಮೇಶ್, ಚಂದ್ರಶೇಖರ್ , ವಿನಾಯಕ್, ಲತಾ ಇದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌