ಕನ್ನಡಪ್ರಭ ವಾರ್ತೆ, ತುಮಕೂರು
ಬಿಜೆಪಿ ಯುವ ಮುಖಂಡ ಅರಕೆರೆ ರವೀಶ್ ಅವರು ಶುಕ್ರವಾರ ಸಿದ್ಧಗಂಗಾ ಮಠದ ದನಗಳ ಜಾತ್ರೆಯಲ್ಲಿ ಸೇರಿದ್ದ ಎಲ್ಲಾ ರಾಸುಗಳಿಗೆ ತಲಾ ಒಂದೊಂದು ಹೊರೆ ಹುಲ್ಲು, ಒಂದು ಚೀಲ ಬೂಸ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಉದ್ಯಮಿಯಾಗಿ, ಕೃಷಿಕರಾಗಿ ಅರಕೆರೆ ರವೀಶ್ ಅವರು ನಮ್ಮ ಕೃಷಿಪರಂಪರೆಗೆ ಉತ್ತೇಜನ ನೀಡಲು, ರೈತರು, ಹಸುಗಳ ಮೇಲಿನ ಪ್ರೀತಿಯಿಂದ ಪ್ರತಿ ವರ್ಷದ ಜಾತ್ರೆಗೆ ಬರುವ ರೈತರು ಹಾಗೂ ರಾಸುಗಳಿಗೆ ಇಂತಹ ಸೇವೆ ಮಾಡಲು ಆಸಕ್ತರಾಗಿದ್ದಾರೆ. ಹಸುಗಳು ಹೆಚ್ಚು ಇಷ್ಟಪಡುವ ರಾಗಿ ಹುಲ್ಲನ್ನೇ ವಿತರಣೆ ಮಾಡಿರುವುದು ವಿಶೇಷ ಎಂದು ಸ್ವಾಮೀಜಿ ಹೇಳಿದರು.ದೇಸಿ ತಳಿ ರಕ್ಷಣೆ ಪ್ರಯತ್ನ:ಕೃಷಿ ಮತ್ತು ರೈತರಿಗೆ ಪ್ರೋತ್ಸಾಹಿಸಿವ ಸಲುವಾಗಿ ಸಿದ್ದಗಂಗಾ ಮಠದಲ್ಲಿ ಪೂಜ್ಯರು ಹಲವಾರು ವರ್ಷಗಳಿಂದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ, ದನಗಳ ಜಾತ್ರೆ ಏರ್ಪಡಿಸಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ದೇಸಿ ತಳಿ ದನಗಳ ವಹಿವಾಟಿಗೆ ಈ ಜಾತ್ರೆ ಪ್ರಮುಖ ವೇದಿಕೆಯಾಗಿದೆ. ಅಲ್ಲದೇ, ಈ ಮೂಲಕ ದೇಶಿ ರಾಸುಗಳನ್ನು ಸಾಕುವ ರೈತರಿಗೆ ಉತ್ತೇಜನ ನೀಡುತ್ತಿದ್ದಾರೆ ಎಂದು ಮಠದ ಕಾರ್ಯ ಪ್ರಶಂಸಿಸಿದರು.
ಯುವ ಮುಖಂಡರ ರವೀಶ್ ಅವರು ರೈತರು ಮತ್ತು ಕೃಷಿಗೆ ನೆರವಾಗುವ ರಾಸುಗಳ ಬಗ್ಗೆ ಒಲವು ತೋರಿಸಿ ಜಾತ್ರೆಯ ಎಲ್ಲಾ ಸಾವಿರಾರು ರಾಸುಗಳಿಗೆ ಹುಲ್ಲು, ಬೂಸ ವಿತರಿಸಿ ರೈತರಿಗೆ ನೆರವಾಗುತ್ತಿದ್ದಾರೆ ಎಂದು ಅಭಿನಂದಿಸಿದರು.
ನಾಡಿಗೆ ಅನ್ನ ನೀಡುವ ಅನ್ನದಾತರಿಗೆ ನಾವೇನೂ ಕೊಡಲು ಸಾಧ್ಯವಿಲ್ಲ. ಆದರೆ ಅವರ ಶ್ರಮವನ್ನು ಗೌರವಿಸಬೇಕಾಗಿದೆ. ಇದೇ ಆಶಯದಲ್ಲಿ ತಾವು ಪ್ರತಿ ವರ್ಷ ರಾಸುಗಳಿಗೆ ಹುಲ್ಲು, ಬೂಸ ವಿತರಿಸುವುದಾಗಿ ರವೀಶ್ ಹೇಳಿದರು.
ಎಪಿಎಂಸಿ ಮಾಜಿ ಸದಸ್ಯ ನೇರಳಾಪುರು ಕುಮಾರ್, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಯಲ್ಲಾಪುರ ರಮೇಶ್, ಅರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನವಚೇತನ್, ಮಧುಗಿರಿ ಮಂಡಲ ಯುವ ಮೋರ್ಚಾ ಅಧ್ಯಕ್ಷ ಶಿವಕುಮಾರಸ್ವಾಮಿ, ಬೆಳಗುಂಬ ಗ್ರಾ.ಪಂ ಸದಸ್ಯ ಮಾರನಾಯಕನಪಾಳ್ಯ ಮಲ್ಲೇಶ್, ಮುಖಂಡರಾದ ಅನಿಲ್ ಪಟೇಲ್, ಆರೀಫ್ ಪಾಷಾ, ಸಾಗರ್, ರವಿಪ್ರಕಾಶ್, ವಿಲಾಸ್, ಮನು ಹರಳೂರು ಮೊದಲಾದವರು ಭಾಗವಹಿಸಿದ್ದರು.