ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಆರ್ಥಿಕ ಸ್ವಾವಲಂಬನೆಗೆ ಸಹಕಾರಿಯಾಗಿವೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು,
ಕನ್ನಡಪ್ರಭ ವಾರ್ತೆ ಜಮಖಂಡಿ
ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಆರ್ಥಿಕ ಸ್ವಾವಲಂಬನೆಗೆ ಸಹಕಾರಿಯಾಗಿವೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು, ತಾಲೂಕಿನ ಶೂರಪಾಲಿ ಗ್ರಾಮದ ಪುನರ್ವಸತಿ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಲಾದ ಪಿಕೆಪಿಎಸ್‌ನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಸಹಕಾರಿ ಸಂಘಗಳು ಕಡಿಮೆ ಬಡ್ಡಿ ದರದ ಬೆಳೆ ಸಾಲ, ಸಕಾಲಿಕ ನೆರವು, ಉಳಿತಾಯ ಪ್ರವೃತ್ತಿ ಬೆಳೆಸುವ ಮೂಲಕ ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಹಕಾರ ನೀಡುತ್ತವೆ. ಪಕ್ಕದ ಮಹರಾಷ್ಟ್ರದಲ್ಲಿ ಸಹಕಾರ ಸಂಘಗಳು ಕ್ರಾಂತಿ ಮಾಡಿವೆ. ಕೃಷಿ ಆಧಾರಿತ ಎಲ್ಲ ಚಟುವಟಿಕೆಗಳಿಗೆ ರೈತರ ಬೆನ್ನೆಲುಬಾಗಿ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಶೂರಪಾಲಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಕಟ್ಟಡ ಸುಸಜ್ಜಿತವಾಗಿದೆ. ಹತ್ತಿರದ ನಾಲ್ಕು ಗ್ರಾಮಗಳ ರೈತರಿಗೆ ಇದರಿಂದ ಅನುಕೂಲವಾಗಲಿದೆ ಎಂದ ಅವರು, ಆಧುನಿಕ ತಂತ್ರಜ್ಞಾನ ಅಳವಡಿಕೆಯ ಜತೆಗೆ ಮಾದರಿಯ ಕಟ್ಟಡ ನಿರ್ಮಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು. ಸಾನ್ನಿಧ್ಯ ವಹಿಸಿದ್ದ ಪಂಚಯ್ಯ ಹಿರೇಮಠ, ಬಸಯ್ಯ ಮಠದ, ಈರಯ್ಯ ಹಿರೇಮಠ, ಸಾರಂಗ ಮಠದ ಸುನಂದಮ್ಮ ತಾಯಿಯವರು ಆಶೀರ್ವಚನ ನೀಡಿದರು. ಪಿಕೆಪಿಎಸ್‌ನ ಅಧ್ಯಕ್ಷ ರಾಮಪ್ಪ ಕಣಬೂರ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಮಾಜಿ ವಿಧಾನ ಪರಿಷತ್ ಸದಸ್ಯ ಜಿ.ಎಸ್. ನ್ಯಾಮಗೌಡ ಮಾತನಾಡಿದರು. ಪಿಡಿಓ ಸಂತೋಷ ಬಾಡಗಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎಸ್. ಲಾಯಣ್ಣವರ, ಗ್ರಾಮದ ಹಿರಿಯರಾದ ಬಿ.ಕೆ. ಗಲಗಲಿ, ಇಂದಿರಾಬಾಯಿ ಗಲಗಲಿ, ಸಾವಳಗಿಯ ಸುಶೀಲ ಕುಮಾರ ಬೆಳಗಲಿ ಹಾಗೂ ಶೊರಪಾಲಿ ಪಿಕೆಪಿಎಸ್ ಆಡಳಿತ ಮಂಡಳಿ ಉಪಾಧ್ಯಕ್ಷೆ ಅಶ್ವಿನಿ ರುದ್ರಗೌಡ, ನಿರ್ದೇಶಕರಾದ ಅನೀಲ ಕುಂಚನೂರ, ಬಿ.ಎಸ್. ಸಿಂಧೂರ, ಶಿವಗೊಂಡ ದಳವಾಯಿ, ಮಹಾಲಿಂಗಪ್ಪ ಕುಂಚನೂರ, ಗಿರಿಮಲ್ಲ ಅರಕೇರಿ, ಅಪ್ಪಾಸಾಹೇಬ ಬಾಲಪ್ಪನವರ, ನೀಲವ್ವ ಮಂಗೊಡ, ಮಹಬೂಬಿ ಶೇಖ, ಪರಶುರಾಮ ಶಿಂಗೆ, ಲಕ್ಕಪ್ಪ ದಳವಾಯಿ, ಬಿಡಿಸಿಸಿ ಬ್ಯಾಂಕ್ ಸಿಬ್ಬಂದಿ ಮಂಜುಶ್ರೀ ಮಠಪತಿ, ಶೂರಪಾಲಿ ಪಿಕೆಪಿಎಸ್‌ನ ಮುಖ್ಯಕಾರ್ಯನಿರ್ವಾಹಕ ದುಂಡಪ್ಪ ಕುಂಚನೂರ, ಸಿಬ್ಬಂದಿಗಳಾದ ಸದಾಶಿವ ಕುಂಬಾರ, ಸೇಲ್ಸಮ್ಯಾನ್ ಶಂಕರ ಅಲ್ಲವ್ವಗೋಳ, ದುಂಡಪ್ಪ ಬಲೊಳ, ಹಣಮಂತ ಬಿರಾದಾರ, ಶ್ರೀಶೈಲ ದಳವಾಯಿ, ಸುರೇಶ ಮಲಕಪ್ಪನವರ, ನರಸಿಂಹ ತೇಲಿ, ಹರೀಶ ಕರಬಸನವರ, ಮಹಾಂತೇಶ ಪಾಟೀಲ, ಗಂಗಪ್ಪ ಕುಂಬಾರ, ಬಸಪ್ಪ ಮಂಗರೋಳ, ಭಾರತಿ ಬಿರಾದಾರ, ಅಕ್ಷಯ ಕಡಪಿ, ರಮೇಶ ಬಿರಾದಾರ, ಸಿದ್ದಪ್ಪ ರಾಮಟ್ಟಿ, ಮಲ್ಲಿಕಾರ್ಜುನ ದಾಶಾಳ, ಲಾಲ್‌ಸಾಬ ನದಾಫ್ ಸೇರಿದಂತೆ ಗ್ರಾಮದ ಹಿರಿಯರು ಮುಖಂಡರು, ಸದಸ್ಯರು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.