ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಕ್ಷೇತ್ರ ವಿಂಗಡಣೆಯ ವಿಧೇಯಕವನ್ನು ಅಂಗೀಕರಿಸುವ ಸಲುವಾಗಿ ಕೇಂದ್ರ ಸರ್ಕಾರ ನ. 30ರಿಂದ 4 ದಿನಗಳ ಸಂಸತ್ತಿನ ತುರ್ತು ಅಧಿವೇಶನವನ್ನು ಕರೆದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವಿಧೇಯಕಗಳು ಜನರ ಅಭಿಪ್ರಾಯದ ಮೇಲೆ ನಿರ್ಣಯವಾಗಬೇಕೇ ಹೊರತು ಜನರ ಮೇಲೆ ಹೇರಿಕೆ ಮಾಡಕೂಡದು. ಕೇಂದ್ರ ಸರ್ಕಾರವನ್ನು ವಿಸರ್ಜನೆ ಮಾಡಿ ದೇಶಕ್ಕೆ ಮಾರಕವಾಗಿರುವ ವಿಧೇಯಕವನ್ನು ಜನತೆಯ ಮುಂದಿಡಬೇಕು. ಇದೇ ವಿಚಾರವನ್ನು ಇಟ್ಟುಕೊಂಡು ಚುನಾವಣೆ ಎದುರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸವಾಲೆಸೆದರು.
ಮಹಿಳಾ ಮೀಸಲಾತಿಗೆ ಕಾಂಗ್ರೆಸ್ಸಿನ ವಿರೋದವಿಲ್ಲ. ಸಂಸತ್ತಿನಲ್ಲಿ ಮೊದಲು ಮಹಿಳಾ ಮೀಸಲಾತಿಯನ್ನು ಮಂಡಿಸಿದ್ದು ಕಾಂಗ್ರೆಸ್. ಆದರೆ ತುಳಿತಕ್ಕೊಳಗಾದವರು ಇದರಿಂದ ವಂಚಿತರಾಗುತ್ತಾರೆ ಎಂಬ ಕಾರಣಕ್ಕೆ ಸಂಸತ್ತಿನಲ್ಲಿ ಕೆಲವು ಪಕ್ಷಗಳಿಂದ ವಿರೋದ ವ್ಯಕ್ತವಾದ ಹಿನ್ನೆಲೆಯಲ್ಲಿ ಇದಕ್ಕೆ ಸೋಲಾಗಿದೆ. ಹೀಗಾಗಿ ಮಹಿಳಾ ಮೀಸಲಾತಿಗೆ ನಮ್ಮ ವಿರೋದವಿಲ್ಲ. ಆದರೆ ಡಿಲಿಮಿಟೇಶನ್ ವಿಧೇಯಕವನ್ನು ವಿರೋದಿಸುತ್ತೇವೆ. ದೇಶದಲ್ಲಿ ಸಿದ್ದಾಂತಕ್ಕಾಗಿ ಹೋರಾಟ ಮಾಡುವವರ ಸಂಖ್ಯೆ ಕುಂಠಿತಗೊಳ್ಳುತ್ತಿರುವುದು ದುರಂತ ಎಂದು ವಿಷಾದ ವ್ಯಕ್ತಪಡಿಸಿದರು.2011ರಿಂದ ದೇಶದಲ್ಲಿ ಜನಗಣತಿಯೂ ಆಗಿಲ್ಲ. ಹಣಕ್ಕಾಗಿ ಮಾರಿಕೊಳ್ಳುವವರ ಬೆಂಬಲದಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೇ ವಿರುದ್ಧವಾಗಿರುವ ವಿಧೇಯಕ ಅಂಗೀಕಾರವಾಗುವ ಆತಂಕ ಇದೆ. ಎಷ್ಟು ಹಣ ಬೇಕಾದರೂ ಕೊಟ್ಟು ರಾಜಕೀಯ ಪಕ್ಷಗಳನ್ನೇ ಖರೀದಿಸುವ ಶಕ್ತಿ ಇರುವ ಬಿಜೆಪಿ ಈಗಾಗಲೇ ರಾಜಸ್ತಾನ ಗುಜರಾತಿನಲ್ಲಿ ಮಾಡಿ ತೋರಿಸಿದೆ. ಜಾತಿಗಣತಿ ಮಾಡುವ ಘೋಷಣೆಯನ್ನೂ ಮಾಡಿರುವ ಕೇಂದ್ರ ಸರ್ಕಾರ, ಆರ್ ಎಸ್ ಎಸ್‍ನ ಮೂಲ ಆಶಯದಂತೆ ಸಂವಿಧಾನವನ್ನೇ ಬದಲಾಯಿಸುವ ನಿರ್ಣಯಕ್ಕೆ ಬಂದಿದೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಕೆಸ್ತೂರು ಮಂಜುನಾಥ್, ಅಮರನಾಥ ಶೆಟ್ಟಿ, ಪೂರ್ಣೇಶ್, ಶ್ರೇಯಸ್ ರಾವ್, ವಿಲಿಯಂ ಮಾರ್ಟಿಸ್ ಇದ್ದರು.