ಫ್ಲೋರೈಡ್‌ ಮುಕ್ತ ನೀರು ಪೂರೈಕೆಗೆ ಯೋಜನೆ

KannadaprabhaNewsNetwork |  
Published : Jun 13, 2025, 03:56 AM IST
12ಜಿಯುಡಿ1 | Kannada Prabha

ಸಾರಾಂಶ

ಗಾಯತ್ರಿ ಸೇವಾ ಟ್ರಸ್ಟ್ ರವರು ಗುಡಿಬಂಡೆ ಬೆಟ್ಟದ ತಪ್ಪಲಿನಲ್ಲಿ ಇದೀಗ ನಿರ್ಮಾಣ ಆಗಿರುವ ಧ್ಯಾನ ಮಂದಿರ ತುಂಬಾ ಅದ್ಬುತವಾಗಿ ನಿರ್ಮಾಣಗೊಂಡಿದೆ. ಇದರಿಂದ ಸರ್ವಧರ್ಮಗಳ ಸಮನ್ವಯ ಸಾಧ್ಯವಾಗಲಿದೆ. 5 ನಿಮಿಷಗಳ ಕಾಲ ದೇವರ ಧ್ಯಾನ ಮಾಡಿದರೇ ಸಾಕು ಗಂಟೆಗಳ ಕಾಲ ಪೂಜೆ ಮಾಡುವ ಅವಶ್ಯಕತೆಯಿಲ್ಲ

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಗುಡಿಬಂಡೆ ಜನತೆಗೆ ಪ್ಲೋರೈಡ್ ಹಾಗೂ ಶುದ್ದ ಕುಡಿಯುವ ನೀರನ್ನು ಒದಗಿಸುವ ಯೋಜನೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಗುಡಿಬಂಡೆ ಅಭಿವೃದ್ದಿಗೆ ಮತ್ತಷ್ಟು ಅನುದಾನ ತಂದು ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಸುಬ್ಬಾರೆಡ್ಡಿ ತಿಳಿಸಿದರು.

ಪಟ್ಟಣದ ಸುರಸದ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ಗುಡಿಬಂಡೆ ಶ್ರೀಮಾತಾ ಗಾಯತ್ರಿ ಸೇವಾ ಟ್ರಸ್ಟ್ ವತಿಯಿಂದ ನಿರ್ಮಾಣಗೊಂಡ ಸರ್ವಧರ್ಮ ಸಮನ್ವಯ ಗಾಯತ್ರಿ ವಿಶ್ವಧ್ಯಾನ ಮಂದಿರ ಸಮ್ಮುಚ್ಚಯ ಹಾಗೂ ಯಶೋಧಮ್ಮ ಮತ್ತು ರಾಮಚಂದ್ರರಾವ್ ಸ್ಮಾರಕ ವೇದವಿನ್ಯಾಸ ಪಾಠಶಾಲೆ, ಜ್ಞಾನಯಜ್ಞ ಮಂಟಪಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.

ದೇವರ ಧ್ಯಾನ ಮಾಡಿ

ಗಾಯತ್ರಿ ಸೇವಾ ಟ್ರಸ್ಟ್ ರವರು ಗುಡಿಬಂಡೆ ಬೆಟ್ಟದ ತಪ್ಪಲಿನಲ್ಲಿ ಇದೀಗ ನಿರ್ಮಾಣ ಆಗಿರುವ ಧ್ಯಾನ ಮಂದಿರ ತುಂಬಾ ಅದ್ಬುತವಾಗಿ ನಿರ್ಮಾಣಗೊಂಡಿದೆ. ಇದರಿಂದ ಸರ್ವಧರ್ಮಗಳ ಸಮನ್ವಯ ಸಾಧ್ಯವಾಗಲಿದೆ. 5 ನಿಮಿಷಗಳ ಕಾಲ ದೇವರ ಧ್ಯಾನ ಮಾಡಿದರೇ ಸಾಕು ಗಂಟೆಗಳ ಕಾಲ ಪೂಜೆ ಮಾಡುವ ಅವಶ್ಯಕತೆಯಿಲ್ಲ ಎಂದರು.

ಸುಮಾರು ಒಂದು ಕೋಟಿ ವೆಚ್ಚದಲ್ಲಿ ಗುಡಿಬಂಡೆ ಬೆಟ್ಟದ ತಪ್ಪಲಿನಲ್ಲಿ ಕಲ್ಯಾಣಿಯನ್ನು ಪುನಃಚ್ಚೇತನ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಬ್ರಾಹ್ಮಣರಹಳ್ಳಿ ಗ್ರಾಮದ ಬಳಿ ಡ್ಯಾಂ ನಿರ್ಮಾಣವಾಗಿದ್ದು, ಈ ಎರಡೂ ನೀರಿನ ಮೂಲಗಳಿಂದ ಗುಡಿಬಂಡೆ ಜನತೆಗೆ ಫ್ಲೋರೈಡ್ ಮುಕ್ತ ಶುದ್ದ ಕುಡಿಯುವ ನೀರನ್ನು ಒದಗಿಸುವ ಯೋಜನೆ ರೂಪಿಸಲಾಗಿದೆ ಎಂದರು.

ಸಮುದಾಯಕ್ಕೆ ಸೀಮಿತವಲ್ಲ

ಬಳಿಕ ಶ್ರೀಮಾತಾ ಗಾಯತ್ರಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಎಸ್.ಗಿರೀಶ್ ರಾವ್ ಮಾತನಾಡಿ, ಗುಡಿಬಂಡೆ ದೊಡ್ಡ ಆಧ್ಯಾತ್ಮಿಕ ಪುಣ್ಯಕ್ಷೇತ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇದೀಗ ನಿರ್ಮಾಣಗೊಂಡಿರುವ ಧ್ಯಾನ ಮಂದಿರ ಕೇವಲ ಒಂದು ಸಮುದಾಯ ಅಥವಾ ಒಂದು ಜಾತಿಗೆ ಸೀಮಿತವಲ್ಲ, ಇದರ ಹೆಸರೇ ಸರ್ವ ಧರ್ಮ ಧ್ಯಾನ ಮಂದಿರ. ಎಲ್ಲಾ ಧರ್ಮೀಯರು ಸೇರಿದಂತಹ ಮಂದಿರವಾಗಿದೆ. ಮುಂದಿನ ದಿನಗಳಲ್ಲಿ ಈ ಧ್ಯಾನ ಮಂದರಿ ವಿಶ್ವ ಮಟ್ಟದಲ್ಲಿ ಖ್ಯಾತಿ ಗಳಿಸಿಕೊಳ್ಳಲಿದೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀಮಾತಾ ಗಾಯತ್ರಿ ಸೇವಾ ಟ್ರಸ್ಟ್‌ನ ಸ.ನ.ನಾಗೇಂದ್ರ, ಅಖಿಲ ಭಾರತ ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ಎಸ್.ರಘುನಾಥ್ ರವರುಗಳು ಮಾತನಾಡಿದರು. ಈ ಸಮಯದಲ್ಲಿ ಪಪಂ ಅಧ್ಯಕ್ಷ ವಿಕಾಸ್, ಶ್ರೀ ಶಂಕರ ಆಸ್ಪತ್ರೆಯ ಶ್ರೀನಾಥ್, ಇಐ ಟೆಕ್ನಾಲಿಜೀಸ್ ಸಂಸ್ಥೆಯ ಎನ್.ರಂಗನಾಥ್, ಫಿಲಿಪ್ಸ್ ಕಂಪನಿಯ ಸಿಇಒ ಅರುಣ್ ಕುಮಾರ್, ಆರ್.ವಿ.ಡೆಂಟಲ್ ಕಾಲೇಜಿನ ಕೆ.ಎಸ್.ನಾಗೇಶ್, ವಾಹಿನಿ ಸುರೇಶ್, ಚಲಪತಿ ಸೇರಿದಂತೆ ಹಲವರು ಹಾಜರಿದ್ದರು.

PREV

Recommended Stories

ಮದ್ಯಪಾನ ಮಾಡಿ ಅಪಘಾತಕ್ಕೀಡಾದರೆ ವಿಮೆ ಬೇಡ : ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌
ಖರ್ಗೆ ಕುಟುಂಬದ ವಿರುದ್ಧ ಕೋರ್ಟ್‌ಗೆ ಖಾಸಗಿ ದೂರು