ಬೇಸಿಗೆಗೆ 500 ಎಕರೆಯಲ್ಲಿ ಮೇವು ಬೆಳೆಯಲು ಚಿಂತನೆ

KannadaprabhaNewsNetwork |  
Published : Sep 28, 2026, 01:15 AM IST
 | Kannada Prabha

ಸಾರಾಂಶ

ಚಿಕ್ಕಮಗಳೂರುತೀವ್ರ ಬರದ ಪರಿಸ್ಥಿತಿಯಿಂದ ಮುಂಬರುವ ಬೇಸಿಗೆ ಅವಧಿಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಕ್ರಮವಹಿಸುವುದಕ್ಕೆ ಜಿಲ್ಲೆಯಲ್ಲಿ ಬರೋಬ್ಬರಿ 500 ಎಕರೆ ಪ್ರದೇಶದಲ್ಲಿ ಮೇವು ಬೆಳೆಯಲು ಚಿಂತನೆ ನಡೆಸಲಾಗಿದೆ.

ಜಿಲ್ಲೆಯ 9 ತಾಲೂಕುಗಳ ಪೈಕಿ ಈಗಾಗಲೇ 5 ತಾಲೂಕುಗಳನ್ನು ಈಗಾಗಲೇ ಬರ ಪೀಡಿತ

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ತೀವ್ರ ಬರದ ಪರಿಸ್ಥಿತಿಯಿಂದ ಮುಂಬರುವ ಬೇಸಿಗೆ ಅವಧಿಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಕ್ರಮವಹಿಸುವುದಕ್ಕೆ ಜಿಲ್ಲೆಯಲ್ಲಿ ಬರೋಬ್ಬರಿ 500 ಎಕರೆ ಪ್ರದೇಶದಲ್ಲಿ ಮೇವು ಬೆಳೆಯಲು ಚಿಂತನೆ ನಡೆಸಲಾಗಿದೆ.ರಾಜ್ಯದಲ್ಲಿ ತೀವ್ರ ಬರ ಎದುರಾಗಿದೆ. ದಿನದಿಂದ ದಿನಕ್ಕೆ ಬರ ಪೀಡಿತ ತಾಲೂಕುಗಳ ಸಂಖ್ಯೆ ಹೆಚ್ಚಾಗುತ್ತಿವೆ. ಚಿಕ್ಕಮ ಗಳೂರು ಜಿಲ್ಲೆಯ 9 ತಾಲೂಕುಗಳ ಪೈಕಿ ಈಗಾಗಲೇ 5 ತಾಲೂಕುಗಳನ್ನು ಈಗಾಗಲೇ ಬರ ಪೀಡಿತ ತಾಲೂಕು ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಮುಂಗಾರು ಮಳೆ ಅವಧಿ ಸಹ ಬಹುತೇಕ ಮುಕ್ತಾಯಗೊಂಡಿದ್ದು, ಮುಂಗಾರು ಅವಧಿ ಮಳೆ ಭಾರೀ ನಿರಾಸೆ ಮೂಡಿಸಿದೆ. ಇನ್ನೂ ಅಕ್ಟೋಬರ್‌ನಿಂದ ಹಿಂಗಾರು ಮಳೆ ಆರಂಭಗೊಳ್ಳಲಿದೆ. ಭಾರೀ ಮಳೆ ನಿರೀಕ್ಷೆ ಇದೆ. ಆದರೆ, ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಹಿಂಗಾರು ಸಹ ನಿರೀಕ್ಷಿತ ಮಳೆ ಸುರಿವುದು ಅನುಮಾನ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಮುಂಬರುವ ಬೇಸಿಗೆ ನಿಭಾಯಿಸುವುದು ಹೇಗೆ ಎಂಬ ಪ್ರಶ್ನೆ ಈಗಾಗಲೇ ಉದ್ಭವಿಸಿದೆ. ಅದರಲ್ಲೂ ಕುಡಿಯುವ ನೀರು ಮತ್ತು ಜಾನುವಾರಿಗಳಿಗೆ ಮೇವಿನ ಕೊರತೆ ಉಂಟಾದಂತೆ ಕ್ರಮ ಕೈಗೊಳ್ಳುವುದು ಅತ್ಯಗತ್ಯ ಎಂದು ಮನಗಂಡಿರುವ ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಪಶುಪಾಲನೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ 500 ಎಕರೆ ಸಮುದಾಯ ಮೇವು ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಜತೆಗೆ ವಿಬಿಜಿ ರಾಮ್‌ ಜಿ ಅಡಿ 100 ಎಕರೆಯಲ್ಲಿ ಮೇವು ಬೆಳೆಯುವ ಪ್ಲಾನ್‌ ಮಾಡಲಾಗಿದೆ.

ಐದು ಅಮೃತ ಮಹಲ್‌ ಕಾವಲ್‌ ಆಯ್ಕೆ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಬರೋಬ್ಬರಿ 16 ಅಮೃತ್‌ ಮಹಲ್‌ ಕಾವಲ್‌ ಫಾರಂ ಗಳಿವೆ. ಈ ಪೈಕಿ ಮೇವು ಬೆಳೆಯಲು ಐದು ಪ್ರಮುಖ ಕಾವಲ್‌ ಗಳಾದ ಬೀರೂರು, ಅಜ್ಜಂಪುರ, ಲಿಂಗದಹಳ್ಳಿ, ಬಿಳುವಾಲು ಹಾಗೂ ಬಾಸೂರು ಆಯ್ಕೆ ಮಾಡಿಕೊಳ್ಳಲಾಗಿದೆ. ವಿಬಿಜಿ ರಾಮ್‌ಜಿ ಯೋಜನೆಯಡಿ ತಲಾ ಒಂದು ಅಮೃತ್‌ ಮಹಲ್‌ ಕಾವಲ್‌ ನಲ್ಲಿ 20 ಎಕರೆಯಂತೆ ಮೇವು ಬೆಳೆಯುವುದು. ಅದೇ ರೀತಿ ಪಶುಪಾಲನೆ ಇಲಾಖೆಯಿಂದ ತಲಾ 100 ಎಕರೆ ಪ್ರದೇಶದಲ್ಲಿ ಮೇವು ಬೆಳೆಯುವ ಚಿಂತನೆಇದೆ. -- ಬಾಕ್ಸ್‌ --

1500 ರಿಂದ 2500 ಮೆಟ್ರಿಕ್‌ ಟನ್‌ ಮೇವು:

500 ಎಕರೆ ಪ್ರದೇಶದಲ್ಲಿ ಸುಮಾರು 1500 ರಿಂದ 2500 ಮೆಟ್ರಿಕ್‌ ಟನ್‌ ನಷ್ಟು ಮೇವು ಬೆಳೆಯ ಬಹುದಾಗಿದೆ. ಈ ಮೇವನ್ನು ಸರ್ಕಾರಿ ಗೋ ಶಾಲೆಗಳಿಗೆ ಪೂರೈಕೆ ಮಾಡುವುದು ಜತೆಗೆ ಮೇವಿನ ಕೊರತೆ ಇರುವ ರೈತರ ಜಾನು ವಾರುಗಳಿಗೂ ನೀಡಬಹುದು.

500 ಎಕರೆ ಪ್ರದೇಶದಲ್ಲಿ ಬೆಳೆಯುವ ಮೇವಿನ ಮೌಲ್ಯ ಸದ್ಯದ ಮಾರುಕಟ್ಟೆ ದರದ ಪ್ರಕಾರ ಸುಮಾರು ₹5 ನಿಂದ ₹7 ಕೋಟಿ ಆಗಲಿದೆ. ಬರ ಪರಿಸ್ಥಿತಿ ಇರುವುದಿಂದ ಬೇಸಿಗೆ ಅವಧಿಯಲ್ಲಿ ಈ ಪ್ರಮಾಣ ಮೇವು ಖರೀದಿ ಮಾಡಲು ಸುಮಾರು ₹10 ರಿಂದ ₹14 ಕೋಟಿ ವೆಚ್ಚ ಮಾಡಬೇಕಾಗಲಿದೆ ಎಂದು ಅಧಿಕಾರಿಗಳು ಲೆಕ್ಕ ಹಾಕಿದ್ದಾರೆ. ----ಬಾಕ್ಸ್‌----

ಎಕರೆಗೆ 97 ಸಾವಿರ ರು. ವೆಚ್ಚ

ಜಿಲ್ಲಾ ಪಶುಪಾಲನೆ ಇಲಾಖೆ ಮೇವು ಬೆಳೆಯುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಕ್ರಿಯಾ ಯೋಜನೆ ಸಿದ್ಧಪಡಿಸಿದೆ. ಹಲವು ವರ್ಷದಿಂದ ಅಮೃತ್ ಮಹಲ್‌ ಕಾವಲ್‌ನ ಖಾಲಿ ಪ್ರದೇಶದಲ್ಲಿ ಬೆಳೆದಿರುವ ಜಂಗಲ್‌ ಸ್ವಚ್ಛಗೊಳಿಸಿ ನೀರಿನ ಸೌಲಭ್ಯ ಹಾಗೂ ತಂತಿ ಬೇಲಿ ಅಳವಡಿಕೆಗೆ ತಲಾ ಒಂದು ಎಕರೆಗೆ ₹82,400 ವೆಚ್ಚ ಮಾಡುವುದು. ಈ ಮೊತ್ತ ಒಂದು ಬಾರಿ ವೆಚ್ಚವಾಗಿದೆ. ಉಳಿದಂತೆ ಮೇವಿನ ಬಿತ್ತನೆ ಕಾರ್ಯಕ್ಕೆ, ಮೇವಿನ ಬೀಜ, ಗೊಬ್ಬರ ಸೇರಿದಂತೆ ಮೊದಲಾದವುಗಳಿಗೆ ಎಕರೆಗೆ ತಲಾ 14,600 ರು. ನಂತೆ ವೆಚ್ಚಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಒಟ್ಟಾರೆ, 500 ಎಕರೆ ಪ್ರದೇಶದಲ್ಲಿ ಮೇವು ಬೆಳೆಯವುದಕ್ಕೆ ಎಲ್ಲ ವೆಚ್ಚ ಸೇರಿ ಸಮಾರು ₹4.5 ಕೋಟಿ ಆಗಲಿದೆ ಎಂದು ಅಂದಾಜಿಸಲಾಗಿದೆ.-- ಕೋಟ್--

ಜಿಲ್ಲೆಯಲ್ಲಿ ಇರುವ ಐದು ಅಮೃತ್ ಮಹಲ್ ಕಾವಲ್ ನಲ್ಲಿ ಜಾನುವಾರುಗಳಿಗೆ ಮೇವು ಬೆಳೆಯುವುದಕ್ಕೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದೆ. ಸರ್ಕಾರ ಅನುಮೋದನೆ ನೀಡಿ, ಅನುದಾನ ನೀಡಿದರೆ ಬರಗಾಲದಲ್ಲಿ ಜಾನುವಾರುಗಳಿಗೆ ಮೇವು ವಿತರಣೆ ಮಾಡುವುದಕ್ಕೆ ಅನುಕೂಲವಾಗಲಿದೆ.

- ಡಾ.ಬಿ.ಜಿ.ಗುರುಶಾಂತಪ್ಪ, ಉಪ ನಿರ್ದೇಶಕರು, ಪಶುಪಾಲನೆ ಇಲಾಖೆ. (ಪೋಟೊ ಇದೆ)(ಮೇವು ಬೆಳೆದಿರುವ ಪ್ರದೇಶಕ್ಕೆ ಸಂಬಂಧಿಸಿದ ಸೂಕ್ತ ಪೋಟೋ ಬಳಸಿ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

೨೦೩೫ ಕ್ಕೆ ೪೦೦ ಕೋಟಿ ಜನರು ಬೊಜ್ಜಿನ ಸಮಸ್ಯೆ: ಕೆ.ಟಿ.ಹನುಮಂತು
ದೇಶಕ್ಕೆ ಮಾದರಿಯಾಗುವ ಸಂವಿಧಾನ ಭವನ: ಪಿ.ರವಿಕುಮಾರ್