ಹೋಬಳಿಗೊಂದು ವಸತಿ ಶಾಲೆ ಸ್ಥಾಪಿಸಲು ಚಿಂತನೆ

KannadaprabhaNewsNetwork |  
Published : Sep 03, 2025, 01:00 AM IST
ಎಂಸಿಎಸ್ | Kannada Prabha

ಸಾರಾಂಶ

ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದು ೫೦೦ ಕರ್ನಾಟಕ ಪಬ್ಲಿಕ್ ಶಾಲಾ ಮಾದರಿಯ ಶಾಲೆಗಳನ್ನು ತೆರೆಯುವ ಚಿಂತನೆಯಲ್ಲಿದ್ದು ಆದರೆ ಕೆಪಿಎಸ್ ಶಾಲೆಗಳಿಗೆ ಬೇಕಾಗಿರುವಷ್ಟು ವಿದ್ಯಾರ್ಥಿಗಳು ಪ್ರೌಢಶಾಲೆಯಲ್ಲಿಲ್ಲ. ಇಲ್ಲಿ ದ್ವಿಭಾಷಾ ಪದ್ಧತಿಯ ಮೂಲಕ ಬೋಧನೆ ಮಾಡಲಾಗುವುದರಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಲಿದೆ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ದೇವಾಲಯ ನಿರ್ಮಾಣ ಮಾಡುವುದು ಮುಖ್ಯವಲ್ಲ ಜನರು ಸದಾ ದೇವಸ್ಥಾನಕ್ಕೆ ಬಂದು ಪೂಜೆ ಪುನಸ್ಕಾರಗಳಲ್ಲಿ ಭಾಗವಹಿಸುವುದು ಹಾಗೂ ನಿರಂತರ ದೈವಿಕ ಕಾರ್ಯಗಳು ನಡೆಯುವಂತೆ ಮಾಡುವುದು ಮುಖ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.

ತಾಲ್ಲೂಕಿನ ಕೋಟಗಲ್ ಮಜರ ಶಿಂಗರೇಪಲ್ಲಿ ಗ್ರಾಮದಲ್ಲಿ ಖಾದ್ರಿ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ನೂತನ ರಾಜಗೋಪುರ ಶಿಖರ ಕಳಶ ಪ್ರತಿಷ್ಠಾಪನೆ ಮತ್ತು ಮಹಾಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಿದ ಅ‍ವರು, ಇತ್ತೀಚೆಗೆ ತಾವು ಒಡಿಶಾದ ಕೋನಾರ್ಕ್ ದೇವಾಲಯಕ್ಕೆ ಭೇಟಿ ನೀಡಿದಾಗ ಅದರ ವಿನ್ಯಾಸ ಹಾಗೂ ಆಕಾರದ ಮತ್ತು ೧೮-೨೦ ಅಡಿ ಮೇಲ್ಭಾಗದಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ ಎಂದರು.

ಹೊಬಳಿಗೊಂದು ವಸತಿ ಶಾಲೆ

ಕೆ.ರಾಗುಟ್ಟಹಳ್ಳಿಯಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ ಪ್ರತಿ ಹೋಬಳಿಗೆ ಒಂದರಂತೆ ವಸತಿ ಶಾಲೆಯನ್ನು ಪ್ರಾರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ವಸತಿ ಶಾಲೆಯಲ್ಲಿ ಪ್ರಸ್ತುತ ವರ್ಷದಿಂದ ಪಿಯುಸಿ ತರಗತಿಗಳನ್ನು ಪ್ರಾರಂಭ ಮಾಡಿದ್ದು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಅದಕ್ಕೆ ಹೆಚ್ಚಿನ ಕಟ್ಟಡ ಮತ್ತು ಕೊಠಡಿಗಳ ಒದಗಿಸಲಾಗುವುದೆಂದರು.

ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದು ೫೦೦ ಕರ್ನಾಟಕ ಪಬ್ಲಿಕ್ ಶಾಲಾ ಮಾದರಿಯ ಶಾಲೆಗಳನ್ನು ತೆರೆಯುವ ಚಿಂತನೆಯಲ್ಲಿದ್ದು ಆದರೆ ಕೆಪಿಎಸ್ ಶಾಲೆಗಳಿಗೆ ಬೇಕಾಗಿರುವಷ್ಟು ವಿದ್ಯಾರ್ಥಿಗಳು ಪ್ರೌಢಶಾಲೆಯಲ್ಲಿಲ್ಲ. ಇಲ್ಲಿ ದ್ವಿಭಾಷಾ ಪದ್ಧತಿಯ ಮೂಲಕ ಬೋಧನೆ ಮಾಡಲಾಗುವುದರಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಲಿದೆ ಕಂಪ್ಯೂಟರ್ ಲ್ಯಾಬ್‌ಗಳನ್ನು ಪ್ರಾರಂಭಿಸಿದ್ದು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ವಸತಿ ಶಾಲೆಗೆ 10 ಎಕರೆ ಭೂಮಿ

ಕೋನಕುಂಟ್ಲುವಿನಲ್ಲಿ ಈಗಾಗಲೇ ೨೨ಕೋಟಿ ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆನಿರ್ಮಾಣ ಕಾಮಗಾರಿ ಚಾಲನೆಯಲ್ಲಿದೆ. ಮುರುಗಮಲ್ಲದ ಬಳಿ ೨೨ ಕೋಟಿ ವೆಚ್ಚದಲ್ಲಿ ಪರಿಶಿಷ್ಟ ವರ್ಗಕ್ಕೆ ಸಂಬಂಧಿಸಿದ ವಸತಿ ಶಾಲೆಯನ್ನು ನಿರ್ಮಿಸಲು ೧೦ ಎಕರೆ ಜಮೀನನ್ನು ಮಂಜೂರು ಮಾಡಿಸಲಾಗಿದೆಯೆಂದರು.

ಡಾ.ಬಿ.ಆರ್.ಅಂಬೇಡ್ಕರ್‌ರ ಕೋ-ಎಜುಕೇಷನ್ ವಸತಿ ಶಾಲೆಗೆ ಕೈವಾರದಲ್ಲಿ ಜಾಗ ಮಂಜೂರಾಗಬೇಕಿದೆ. ಎಲ್ಲಾ ಹೋಬಳಿಗಳಲ್ಲೂ ವಸತಿ ಶಾಲೆಗಳನ್ನು ಪ್ರಾರಂಭವಾಗುತ್ತದೆ. ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಓದಿಸುವ ಚಿಂತನೆಯಲ್ಲಿ ಪೋಷಕರಿದ್ದು ಎಲ್ಲಾ ಹೋಬಳಿಗಳಲ್ಲೂ ವಸತಿ ಶಾಲೆ ಪ್ರಾರಂಭವಾಗುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆಯೆಂದರು.

ಶೇ.70 ಸ್ಥಾನ ಸ್ಥಳೀಯ ಮಕ್ಕಳಿಗೆ

ವಸತಿ ಶಾಲೆಯಲ್ಲಿ ಶೇಕಡಾ ೭೦ರಷ್ಟು ಸ್ಥಳೀಯ ತಾಲೂಕಿನವರಿಗೆ ಮತ್ತು ಶೇಕಡಾ ೩೦ ರಷ್ಟು ಜಿಲ್ಲೆಯ ವಿವಿಧ ತಾಲ್ಲೂಕಿನಿಂದ ಬಂದವರಿಗೆ ಮೀಸಲಾತಿ ನಿಗದಿ ಪಡಿಸಲಾಗಿದೆ. ಪೂರ್ತಿ ಪ್ರಮಾಣದಲ್ಲಿ ಎಲ್ಲಾ ವಸತಿ ಶಾಲೆಗಳು ಪ್ರಾರಂಭವಾದರೆ ಒತ್ತಡ ಕಡಿಮೆಯಾಗಲಿದೆಯೆಂದರು. ಸ್ಮಾಟ್ ಕ್ಲಾಸ್ ತರಗತಿಗಳನ್ನು ನಡೆಸಲಾಗುತ್ತಿದೆಯೆಂದರು.

ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಕೆಲಕಾಲ ಶಿಕ್ಷಕರಾಗಿ ಪಾಠ ಬೋಧಿಸಿದರು. ಪಶು ವೈದ್ಯಕೀಯ ಶಿಕ್ಷಣ, ಡಾಕ್ಟರ್, ಡೆಂಟಲ್, ಇಂಜಿನಿಯರ್, ಕೃಷಿ ವಿಜ್ಞಾನ ಸೇರಿದಂತೆ ವಿವಿಧ ಕೋರ್ಸ್‌ಗಳ ಬಗ್ಗೆ ವಿವರಿಸಿದರು. ವಿದ್ಯಾರ್ಥಿಗಳು ಆಂಗ್ಲ ಭಾಷೆಯಲ್ಲಿ ಕಲಿಕೆಗೆ ಒತ್ತು ನೀಡಬೇಕೆಂದರು.

ರಾಜಕಾರಣ ನಿಂತ ನೀರಿಲ್ಲ

ರಾಜಕಾರಣದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ ಯಾರೂ ಶಾಶ್ವತ ಶತ್ರುಗಳು ಅಲ್ಲ, ರಾಜಕಾರಣ ನಿಂತ ನೀರಿಲ್ಲ ಬದಲಾಗಿ ನಿರಂತರ ಬದಲಾವಣೆಯಿಂದ ಕೂಡಿದ್ದು ಒಂದೊಮ್ಮೆ ಯಾರಾದರೂ ಪಕ್ಷಕ್ಕೆ ಸೇರ್ಪಡೆಗೊಳ್ಳುವಂತಿದ್ದರೆ ಅವರನ್ನು ಖಂಡಿತವಾಗಿಯೂ ಸೇರ್ಪಡೆ ಮಾಡಿಕೊಳ್ಳಲಾಗುವುದು. ಅದಕ್ಕೂ ಮೊದಲು ನಮ್ಮ ಕಷ್ಟಸುಖಗಳಲ್ಲಿ ನಿರಂತರವಾಗಿ ಜೊತೆಗಿರುವ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಸೇರ್ಪಡೆ ವಿಚಾರವನ್ನು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಸುದರ್ಶನ್ ಯಾದವ್, ತಾ.ಪಂ. ಇಒ ಎಸ್.ಆನಂದ್, ಪಿಡಿಒ ಭಾಗ್ಯಮ್ಮ ಉಪಸ್ಥಿತರಿದ್ದರು.

.

PREV

Recommended Stories

ಜಾಗತಿಕ ಮಟ್ಟದಲ್ಲಿ ಸಾಧನೆ ನಾರಿ ಶಕ್ತಿಗೆ ಸಾಕ್ಷಿ
ಮಕ್ಕಳ ಕಲಿಕೆಯನ್ನು ಸೃಜನಾತ್ಮಕವಾಗಿಸಲು ನಲಿ-ಕಲಿ