ಇ.ಎಸ್.ಐ ಆಸ್ಪತ್ರೆಗೆ ಸಂಬಂಧಿಸಿದಂತೆ ಈಗಾಗಲೇ ಜಾಗ ಗುರುತಿಸಿದೆ, ಮುಂದಿನ ೩ ವಾರದ ಬಜೆಟ್ ಪೂರ್ವಭಾವಿಯ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು ಕೆ.ಜಿ.ಎಫ್ ಬಿಜಿಎಂಎಲ್ ಕೇಂದ್ರದ 12 ಸಾವಿರ ಎಕರೆ ಪ್ರದೇಶವನ್ನು ಕೈಗಾರಿಕೆಗಳ ಹಬ್ ಆಗಿ ಪರಿವರ್ತಿಸಲಾಗುವುದು.
ಕೋಲಾರ : ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಕಾಮಗಾರಿಗಳ ಮೇಲ್ದರ್ಜೆಗೆ ಸಂಬಂಧಿಸಿದಂತೆ ಈಗಾಗಲೇ ಮದನಪಲ್ಲಿಯಿಂದ ಹೊಸಕೋಟೆಯವರೆಗೆ ಹಾಗೂ ಕುಪ್ಪಂನಿಂದ ಬಾಗೇಪಲ್ಲಿಯವರೆಗೆ ಆವಿಭಜಿತ ಕೋಲಾರ ಜಿಲ್ಲೆಯ ಹಲವು ತಾಲೂಕುಗಳ ಮಾರ್ಗಗಳನ್ನು ಬಳಸಿಕೊಂಡು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಲು ಯೋಜನೆಯೊಂದನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಸಂಸದ ಎಂ.ಮಲ್ಲೇಶ್ ಬಾಬು ತಿಳಿಸಿದರು.
ನಗರದ ಹೊರವಲಯದ ಕುಂಬಾರಹಳ್ಳಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರೈಲ್ವೇ ಮಾರ್ಗಕ್ಕೆ ಸಂಬಂಧಿಸಿದಂತೆ ಕೋಲಾರದಿಂದ ಆಂಧ್ರ ಪ್ರದೇಶದ ಮಾದಘಟ್ಟದವರೆಗೆ ತಿರುಪತಿ ಮಾರ್ಗಕ್ಕೆ ಸಂರ್ಪಕಕ್ಕೆ ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆಯು ಕಳೆದ 2011- 12 ನೇ ಸಾಲಿನಲ್ಲಿ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿತ್ತು. ಆದರೆ ರಾಜ್ಯ ಸರ್ಕಾರದ ಇಚ್ಚಾ ಕೊರತೆಯಿಂದ ನನೆಗುದಿಗೆ ಬಿದ್ದಿದೆ, ರಾಜ್ಯ ಸರ್ಕಾರದ ಇಚ್ಚಾಶಕ್ತಿ ಅವಶ್ಯಕವಿದೆ ಎಂದರು. ಸೇತುವೆಗಳ ನಿರ್ಮಾಣ ಅಗತ್ಯ
ನಗರದ ಟೇಕಲ್ ರಸ್ತೆಯ ರೈಲ್ವೇ ಟ್ರಕ್ ಬಳಿ, ನಗರ ಹೊರವಲಯದ ಸ್ಯಾಂನಿಟ್ಯೋರಿಯಂ ಬಳಿ ಹಾಗೂ ಬಂಗಾರಪೇಟೆಯ ಎಸ್.ಎನ್.ರೆಸಾರ್ಟ್ಸ್ ಬಳಿ ಬ್ರಿಡ್ಜ್‌ಗಳ ನಿರ್ಮಾಣದ ಅವಶ್ಯಕತೆ ಇದೆ. ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ, ಬಂಗಾರಪೇಟೆ ಮಾರ್ಗಗಳಲ್ಲಿ ಚಲಿಸುವ ರೈಲು ಬಂಗಾರಪೇಟೆ ಜಂಕ್ಷನ್ ಮಾರ್ಗದಿಂದ ಭಾರತದ್ಯಂತ ವಿವಿಧ ರಾಜ್ಯಗಳಿಗೆ ಸಂರ್ಪಕ ಸಾಧಿಸಲು ಸುಲಭವಾಗುವುದರಿಂದ ಆ ಭಾಗದಲ್ಲಿ ರೈಲು ರಾತ್ರಿ ಹಾಲ್ಟ್ ಆಗಬೇಕು ಎಂದರು.
ಇಎಸ್‌ಐ ಆಸ್ಪತ್ರೆಗೆ ಜಾಗ ಗುರುತು
ಇ.ಎಸ್.ಐ ಆಸ್ಪತ್ರೆಗೆ ಸಂಬಂಧಿಸಿದಂತೆ ಈಗಾಗಲೇ ಜಾಗ ಗುರುತಿಸಿದೆ, ಮುಂದಿನ ೩ ವಾರದ ಬಜೆಟ್ ಪೂರ್ವಭಾವಿಯ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು ಕೆ.ಜಿ.ಎಫ್ ಬಿಜಿಎಂಎಲ್ ಕೇಂದ್ರದ 12 ಸಾವಿರ ಎಕರೆ ಪ್ರದೇಶವನ್ನು ಕೈಗಾರಿಕೆಗಳ ಹಬ್ ಆಗಿ ಪರಿವರ್ತಿಸುವ ಮೂಲಕ ಉದ್ಯೋಗಗಳ ಕ್ರಾಂತಿ ಸೃಷ್ಟಿಸಿ ಜಿಲ್ಲೆಯಲ್ಲಿ ನಿರುದ್ಯೋಗ ನಿವಾರಿಸಬಹುದಾಗಿದೆ, ಕೇಂದ್ರದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವರಾಗಿ ಹೆಚ್.ಡಿ.ಕುಮಾರಸ್ವಾಮಿ ನೇಮಕಗೊಂಡಿರುವುದು ನಮ್ಮ ಜಿಲ್ಲೆಗೆ ವರದಾನವಾಗಲಿದೆ ಎಂದು ಅಭಿಪ್ರಾಯಪಟ್ಟರು.