ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬನಹಟ್ಟಿಯ ಜನತಾ ಶಿಕ್ಷಣ ಸಂಘದ ಎಸ್‌ಟಿಸಿ ಕಲಾ, ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯಡಿ ದತ್ತು ಗ್ರಾಮ ಯಲ್ಲಟ್ಟಿಯ ಶ್ರೀಕಾಡಸಿದ್ದೇಶ್ವರ ಸಭಾಂಗಣದಲ್ಲಿ ನಡೆದ ಶಿಬಿರಾರ್ಥಿಗಳ ಸಭೆಯಲ್ಲಿ ಮಾತನಾಡಿದ ಅವರು, ಸಸಿ ನೆಡುವುದಷ್ಟೇ ನಮ್ಮ ಜವಾಬ್ದಾರಿಯಲ್ಲ ಬದಲಿಗೆ ಸಸಿ ಪೋಷಿಸಿ ಹೆಮ್ಮರವಾಗಿಸುವ ಗುರುತರ ಹೊಣೆಗಾರಿಕೆಯನ್ನು ಪ್ರತಿಯೊಬ್ಬರೂ ಪಾಲಿಸಿದಲ್ಲಿ ಭಾರತ ನಿತ್ಯ ಹರಿದ್ವರ್ಣ ದೇಶವಾಗಿ ನೈಸರ್ಗಿಕ ಸಂಪತ್ತಿನಿಂದ ಕಂಗೊಳಿಸುವುದು. ಒಂದು ಬೆಳೆದ ಹೆಮ್ಮರ ₹೬ ಲಕ್ಷಕ್ಕೂ ಹೆಚ್ಚಿನ ಬೆಲೆಯ ಮೌಲ್ಯ ಹೊಂದಿದೆ. ಮರದಿಂದ ನಾವು ಬಿಡುವ ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಪ್ರಕೃತಿಯಲ್ಲಿ ಸೇರ್ಪಡೆಯಾಗದಂತೆ ತಡೆಯುವ ಮತ್ತು ಸಕಲ ಜೀವರಾಶಿಗಳಿಗೆ ಅಗತ್ಯ ಶುದ್ಧ ಆಮ್ಲಜನಕ ನೀಡುವ ವೃಕ್ಷ ಸಂಕುಲವನ್ನು ಬೆಳೆಸುವ ಮೂಲಕ ನಾವು ಇಡೀ ಮನುಕುಲವನ್ನೇ ಸಂರಕ್ಷಿಸಿದಂತಾಗುತ್ತದೆ ಎಂದು ಹೇಳಿದರು.
ಪ್ರೊ.ಮಹಾಂತೇಶ ರಡ್ಡೇರಟ್ಟಿ, ಪ್ರೊ.ರಾಹುಲ್ ಜಾಧವ, ಮುದ್ದೇಬಿಹಾಳದ ಎಂ.ಜೆ.ವಿ.ಸಿ ಮಹಾವಿದ್ಯಾಲಯದ ಡಾ.ಬಸವರಾಜ ಹಡಪದ ಸಸ್ಯರಾಶಿಯ ಸಮೃದ್ಧ ಬೆಳವಣಿಗೆಯಿಂದಾಗುವ ಮನುಕುಲದ ಮೇಲಿನ ಉತ್ತಮ ಪರಿಣಾಮಗಳನ್ನು ವಿವರಿಸಿದರು.ಜನತಾ ಶಿಕ್ಷಣ ಸಂಘದ ನಿರ್ದೇಶಕ ಶ್ರೀಶೈಲ ಯಾದವಾಡ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಮಹಾಮಥೇಸ ಮಾಳಗೌಡ, ಅಕ್ಕವ್ವ ಮನ್ನಿಕೇರಿ, ಸಿದ್ದು ತೇಲಿ, ವಿಜಯ ಇಂಗಳಗಾಂವಿ, ಕರೆಪ್ಪ ಅಮಜವ್ವಗೋಳ, ಪತ್ರಕರ್ತ ಶಿವಾನಂದ ಮಹಾಬಲಶೆಟ್ಟಿ, ಬಸವರಾಜ ಪಾಟೀಲ ವೇದಿಕೆಯಲ್ಲಿದ್ದರು. ೧೦೦ ಜನ ಶಿಬಿರಾರ್ಥಿಗಳು ಬೆಳಿಗ್ಗೆ ಸಸಿ ನೆಡುವ ಮತ್ತು ಸ್ವಚ್ಛತಾ ಶ್ರಮದಾನ ಮಾಡಿದರು. ಅಕ್ಷತಾ ಮೆಟಗುಡ್ಡ ಸ್ವಾಗತಿಸಿದರು. ಕವಿತಾ ದಳವಾಯಿ ನಿರೂಪಿಸಿದರು. ಸುಶ್ಮಿತಾ ಪಾಟೀಲ ವಂದಿಸಿದರು.
ಸಮಾರಂಭದಲ್ಲಿ ಡಾ.ಮನೋಹರ ಶಿರಹಟ್ಟಿ, ಡಾ.ಪ್ರಕಾಶ ಕೆಂಗನಾಳ, ಡಾ.ರೇಷ್ಮಾ ಗಜಾಕೋಶ, ಪ್ರೊ.ಸುರೇಶ ನಿಡೋಣಿ, ಪ್ರೊ.ಅವಿನಾಶ ಹಟ್ಟಿ, ವಿ.ಬಿ.ಕುಲಕರ್ಣಿ, ಶಿವು ಶಿಂಧೆ, ಮಹಾಂತ ಅಂಗಡಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.-----------