ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದ ಪುರಸಭೆಯಿಂದ ಆಯೋಜಿಸಿದ್ದ ಏಕ್ ಪೇಡ್ ಮಾ ಕೆ ನಾಮ್ (ತಾಯಿ ಹೆಸರಿನಲ್ಲಿ ಒಂದು ಗಿಡ) ಘೋಷವಾಕ್ಯದ ರಾಷ್ಟ್ರೀಯ ವೃಕ್ಷಾರೋಹಣ ಅಭಿಯಾನಕ್ಕೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಸಸಿ ನೆಟ್ಟು ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಪ್ರಕೃತಿಯನ್ನು ನಾವು ಸಂರಕ್ಷಣೆ ಮಾಡಿ ಮುಂದುವರಿಸಿದರೆ ನಮ್ಮ ಮುಂದಿನ ಪೀಳಿಗೆ ಇಂತಹ ಸೌಂದರ್ಯ ಹೊಂದಿರುವ ವಾತಾವರಣ ನೋಡಲು ಸಾಧ್ಯವಾಗುತ್ತದೆ. ಪ್ರಕೃತಿ ಸುರಕ್ಷಿತವಾಗಿದ್ದರೆ ನಾವೂ ಕೂಡ ಸುರಕ್ಷಿತವಾಗಿರುತ್ತೇವೆ. ಹಾಗಾಗಿ ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಹೆಚ್ಚು ಗಿಡಮರಗಳನ್ನು ಬೆಳೆಸುವ ಕೆಲಸವಾಗಬೇಕು ಎಂದರು.ಏಕ್ ಪೇಡ್ ಮಾ ಕೆ ನಾಮ್ ಎನ್ನುವುದು ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯ ಹಾಗೂ ಪರಿಸರ ಉಪಕ್ರಮಗಳಡಿಯಲ್ಲಿ ತಾಯಿ ಹೆಸರಿನಲ್ಲಿ ಒಂದು ಸಸಿ ನೆಟ್ಟು ಪೋಷಿಸುವ ರಾಷ್ಟ್ರೀಯ ಅಭಿಯಾನವಾಗಿದೆ. ಜನ್ಮ ಕೊಟ್ಟ ತಾಯಿಯನ್ನು ನಾವು ಎಷ್ಟು ಗೌರವಿಸುತ್ತೇವೆಯೋ ಪರಿಸರವನ್ನೂ ಕೂಡ ಅಷ್ಟೇ ಗೌರವಿಸಬೇಕು. ಶಾಲಾ, ಕಾಲೇಜು ಹಾಗೂ ಸರ್ಕಾರಿ ಕಚೇರಿ ಆವರಣಗಳಲ್ಲಿ ಹೆಚ್ಚು ಗಿಡ ಮರಗಳನ್ನು ಬೆಳೆಸಿದರೆ ಸುಂದರ ಪರಿಸರದ ನಡುವೆ ಆರೋಗ್ಯವಂತ ಜೀವನ ನಡೆಸಬಹುದಾಗಿದೆ ಎಂದರು. ಈ ವೇಳೆ ಪುರಸಭೆ ಮುಖ್ಯಾಧಿಕಾರಿ ವೀಣಾ, ಪಟ್ಟಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಚ್.ಎಂ.ಶಿವಕುಮಾರ್ ಸೇರಿದಂತೆ ಹಲವರು ಇದ್ದರು.ಜಿಲ್ಲೆಯ ಪ್ರವಾಸಿ ತಾಣಗಳಿಗೆ ಜನರು ಲಗ್ಗೆ
ದಸರಾ ಹಬ್ಬದ ಹಿನ್ನೆಲೆಯಲ್ಲಿ ಈಗಾಗಲೇ ಬಹುತೇಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಾರದಲ್ಲಿ ಒಂದು ದಿನ ರಜೆ ಇರುವ ಹಿನ್ನೆಲೆಯಲ್ಲಿ ಭಾನುವಾರ ಕುಟುಂಬ ಸಮೇತ ಬಹುತೇಕ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಪ್ರವಾಸಿಗರು ಜಿಲ್ಲೆಯ ಶ್ರೀರಂಗಪಟ್ಟಣ, ಹಲಗೂರು, ಮಳವಳ್ಳಿ, ಕೆ.ಆರ್.ಪೇಟೆ, ಆದಿಚುಂಚನಗಿರಿ ಶ್ರೀ ಕ್ಷೇತ್ರ, ಮೇಲುಕೋಟೆಗೆ ಆಗಮಿಸಿದ್ದರು.ಐತಿಹಾಸಿಕ ಕ್ಷೇತ್ರ ಶ್ರೀರಂಗಪಟ್ಟಣದ ಕೆಆರ್ ಎಸ್ ಬೃಂದಾವನ, ರಂಗನತಿಟ್ಟು ಪಕ್ಷಿಧಾಮ, ನಿಮಿಷಾಂಬ ದೇಗುಲ, ಟಿಪ್ಪು ಬೇಸಿಗೆ ಅರಮನೆ, ಪಾಂಡವಪುರ ತಾಲೂಕು ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇಗುಲ, ನಾಗಮಂಗಲದ ಆದಿಚುಂಚನಗಿರಿ ಕ್ಷೇತ್ರ, ಮಳವಳ್ಳಿ ತಾಲೂಕು ಹಲಗೂರು ಮುತ್ತತ್ತಿ ಆಂಜನೇಯಸ್ವಾಮಿ ದೇಗುಲ, ಕೆ.ಆರ್.ಪೇಟೆಯ ಭೂವರಹನಾಥಸ್ವಾಮಿ ದೇಗುಲ ಸೇರಿದಂತೆ ಹಲವು ದೇಗುಲಗಳು, ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಕುಟುಂಬ ಸಮೇತ ಮಕ್ಕಳೊಂದಿಗೆ ಭೇಟಿ ನೀಡಿ ವೀಕ್ಷಣೆ ಮಾಡಿ ಮೊಬೈಲ್ ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮ ಪಟ್ಟರು.