ಚನ್ನರಾಯಪಟ್ಟಣದಲ್ಲಿ ಪುರಸಭೆಯಿಂದ ಗಿಡ ನೆಡುವ ಕಾರ್ಯ

KannadaprabhaNewsNetwork |  
Published : Jul 20, 2024, 12:50 AM IST
ಪುರಸಭೆಯಿಂದ ಗಿಡನೆಡುವ ಕಾರ್ಯ | Kannada Prabha

ಸಾರಾಂಶ

ಚನ್ನರಾಯಪಟ್ಟಣದ 9ನೇ ವಾರ್ಡ್‌ನ, ನಾಗಸಮುದ್ರ ರಸ್ತೆ ಬಳಿ ಹತ್ತಾರು ವರ್ಷಗಳಿಂದ ಕಸ ಎಸೆಯುವ ಬ್ಲಾಕ್‌ಸ್ಪಾಟ್ ಆಗಿತ್ತು. ಆ ಭಾಗದಲ್ಲಿ ಇಂದು ಕಸವನ್ನು ತೆರವು ಮಾಡಿ, ಗಿಡಗಳನ್ನು ನೆಟ್ಟಿದ್ದಾರೆ ಎಂದು ಪುರಸಭೆ ಮುಖ್ಯ ಅಧಿಕಾರಿ ಹೇಮಂತ್ ಹೇಳಿದರು. ಚನ್ನರಾಯಪಟ್ಟಣದಲ್ಲಿ ಪುರಸಭೆಯಿಂದ ಹಮ್ಮಿಕೊಂಡ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪುರಸಭೆ ಅಧಿಕಾರಿ ಹೇಮಂತ್ ಮಾಹಿತಿ । ಸ್ವಚ್ಛತೆ ಬಗ್ಗೆ ಅರಿವು

ಚನ್ನರಾಯಪಟ್ಟಣ: ಪುರಸಭೆ ಸ್ವಚ್ಛತೆ ಕಾರ್ಯದ ಬಗ್ಗೆ ಸದಾ ದೂರುವ ನಾವು, ಅವರು ಮಾಡುವ ಸ್ವಚ್ಛತೆ, ಹಸಿರು ಗಿಡ ನೆಡುವ ಕಾರ್ಯದ ಬಗ್ಗೆ ಪ್ರಶಂಸೆ ಮಾಡಬೇಕು. ಪಟ್ಟಣದ 9ನೇ ವಾರ್ಡ್‌ನ, ನಾಗಸಮುದ್ರ ರಸ್ತೆ ಬಳಿ ಹತ್ತಾರು ವರ್ಷಗಳಿಂದ ಕಸ ಎಸೆಯುವ ಬ್ಲಾಕ್‌ಸ್ಪಾಟ್ ಆಗಿತ್ತು. ಆ ಭಾಗದಲ್ಲಿ ಇಂದು ಕಸವನ್ನು ತೆರವು ಮಾಡಿ, ಗಿಡಗಳನ್ನು ನೆಟ್ಟಿದ್ದಾರೆ ಎಂದು ಪುರಸಭೆ ಮುಖ್ಯ ಅಧಿಕಾರಿ ಹೇಮಂತ್ ಹೇಳಿದರು.

ಚನ್ನರಾಯಪಟ್ಟಣದ 9ನೇ ವಾರ್ಡ್‌ನ, ನಾಗಸಮುದ್ರ ರಸ್ತೆ ಬಳಿ ಹತ್ತಾರು ವರ್ಷಗಳಿಂದ ಕಸ ಎಸೆಯುವ ಬ್ಲಾಕ್‌ಸ್ಪಾಟ್ ಆಗಿತ್ತು. ಆ ಭಾಗದಲ್ಲಿ ಇಂದು ಕಸವನ್ನು ತೆರವು ಮಾಡಿ, ಗಿಡಗಳನ್ನು ನೆಟ್ಟಿದ್ದಾರೆ ಎಂದು ಪುರಸಭೆ ಮುಖ್ಯ ಅಧಿಕಾರಿ ಹೇಮಂತ್ ಹೇಳಿದರು. ಚನ್ನರಾಯಪಟ್ಟಣದಲ್ಲಿ ಪುರಸಭೆಯಿಂದ ಹಮ್ಮಿಕೊಂಡ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಗರದಲ್ಲಿ ಪುರಸಭೆಯಿಂದ ಹಮ್ಮಿಕೊಂಡ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಪಟ್ಟಣದ 23 ವಾರ್ಡ್‌ಗಳಲ್ಲಿ ಹೆಚ್ಚು ಕಸ ಎಸೆಯುವ ಸ್ಥಳಗಳನ್ನು ಗುರುತಿಸಿ, ಕಸವನ್ನು ರಸ್ತೆಗೆ ಹಾಗೂ ಚರಂಡಿಗೆ ಹಾಕಬಾರದು ಎಂಬ ಉದ್ದೇಶದಿಂದ ಮಾಡಲಾಗಿದೆ. ಇಂತಹ ಬ್ಲಾಕ್ ಸ್ಟಾಟ್ ಗಳನ್ನು ಗುರುತಿಸಿ ಗಿಡಗಳನ್ನು ನೆಡುವುದು, ರಿಪೇಯಿಂಟ್ ಮಾಡಿದ ಪದಾರ್ಥಗಳನ್ನು ಇಡುವುದು ಹಾಗೂ ಮಹಾತ್ಮರ ಭಾವ ಚಿತ್ರಗಳನ್ನು ಇರಿಸುವ ನಿಟ್ಟಿನಲ್ಲಿ ಕಾರ್ಯ ನಡೆದಿದೆ ಎಂದು ತಿಳಿಸಿದರು. ಆರೋಗ್ಯ ಇಲಾಖೆಯ ಡಾ.ಶೀತಲ್ ಮಾತನಾಡಿ, ಡೆಂಘೀ ನಿಯಂತ್ರಣ ಮಾಡಬೇಕು, ಇದಕ್ಕಾಗಿ ವಾರದಲ್ಲಿ ಒಂದು ದಿನವಾದರೂ ಸ್ವಚ್ಛತೆಗೆ ಆದ್ಯತೆ ನೀಡಿ ಕಾರ್ಯವನ್ನು ನಿರ್ವಹಣೆ ಮಾಡಬೇಕು ಎಂದರು. 9ನೇ ವಾರ್ಡಿನ, ಹಿರಿಯ ನಾಗರಿಕ ಹಾಗೂ ನಿವೃತ್ತ ಶಿಕ್ಷಕ ಅಣ್ಣಪ್ಪ ಮಾತನಾಡಿ, ಸಾರ್ವಜನಿಕರು ಪರಿಸರ ರಕ್ಷಣೆ, ಸ್ವಚ್ಛತೆ ಬಗ್ಗೆ ಅರಿಯಬೇಕು, ಡೆಂಘೀ ನಿಯಂತ್ರಣ ಮಾಡಬೇಕು ಎಂದರು.

ಪುರಸಭೆ ಕಾರ್ಮಿಕರು, ಆರೋಗ್ಯ ಅಧಿಕಾರಿ ರಾಜು, ಲೋಟರಿ ಸಂಸ್ಥೆ ಅಧ್ಯಕ್ಷ ಬಿ.ವಿ ವಿಜಯ್, ಆರೋಗ್ಯ ಇಲಾಖೆಯ ಪುಷ್ಪ, ಎಂಜಿನಿಯರ್ ಕಾವ್ಯ, ಪುರಸಭೆ ಸಿಇಒ ಶಾರದಮ್ಮ, 9ನೇ ವಾರ್ಡಿನ ಪುನೀತ್, ರವಿ, ರಾಜು, ಉದೀಪ್ ಅವರು ಸ್ವಚ್ಛತಾ ಕಾರ್ಯದ ಸಂಗಡ ಗಿಡಗಳನ್ನು ನೆಡುವ ಕಾರ್ಯದಲ್ಲಿ ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ