ಪ್ಲಾಸ್ಟಿಕ್ ಬಳಕೆ: ಹೋಟೆಲ್ ಮೇಲೆ ನಗರಸಭೆ ಅಧಿಕಾರಿಗಳ ದಾಳಿ

KannadaprabhaNewsNetwork |  
Published : Apr 26, 2025, 12:45 AM IST
ಚಿತ್ರ 2 | Kannada Prabha

ಸಾರಾಂಶ

Plastic use: Municipal officials attack hotel

-ಪೌರಾಯುಕ್ತ ವಾಸಿಂ ನೇತೃತ್ವದ ತಂಡ ಹೋಟೆಲ್‌ನವರಿಗೆ ಎಚ್ಚರಿಕೆ

-----

ಹಿರಿಯೂರು: ನಗರಸಭಾ ವ್ಯಾಪ್ತಿಯಲ್ಲಿನ ಹೋಟೆಲ್‌ ಗಳಲ್ಲಿ ಪ್ಲಾಸ್ಟಿಕ್ ಪೇಪರ್ ಬಳಸಿ ತಿಂಡಿ ತಯಾರಿಸುತ್ತಿದ್ದ ಹೋಟೇಲ್ ಮೇಲೆ ಪೌರಾಯುಕ್ತರು ಮತ್ತು ಸಿಬ್ಬಂದಿ ದಾಳಿ ನಡೆಸಿ ಹೋಟೆಲ್ ಬಂದ್ ಮಾಡಿಸಿದರು. ದಾಳಿ ನಡೆಸಿ ಹೋಟೆಲ್ ನವರಿಗೆ ಎಚ್ಚರಿಕೆ ನೀಡಿ ಮಾತನಾಡಿದ ಪೌರಾಯುಕ್ತರು ಕುಡಿವ ನೀರಿನ ಟ್ಯಾಂಕ್, ಫಿಲ್ಟರ್‌ ಶುದ್ಧೀಕರಣ ಮಾಡಿ ಜನರಿಗೆ ಶುದ್ಧ ನೀರನ್ನು ನೀಡಬೇಕು. ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಹೋಟೇಲ್ ನಲ್ಲಿ ಅಡುಗೆ ಕೋಣೆ ಹಾಗೂ ಸ್ಟೋರ್‌ ರೂಂಗಳಿಗೆ ಬಣ್ಣ ಬಳಿದು ಸ್ವಚ್ಚತೆ ಕಾಪಾಡುವಂತೆ ಹೇಳಲಾಗಿದೆ. ಯಾವುದೇ ಹೋಟೆಲ್ ಟೆಸ್ಟಿಂಗ್‌ ಪೌಡರ್ ಹಾಗೂ ಯಾವುದೇ ರೀತಿಯ ಬಣ್ಣ ಹಾಕದೆ ಶುಚಿಯಾದ ಆಹಾರ ತಯಾರಿಸಿ ನೀಡಬೇಕು. ನಗರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹೋಟೆಲ್‌ ಮಾಲೀಕರು, ಬೀದಿಬದಿ ವ್ಯಾಪಾರಿಗಳು, ಸಂಘದ ಅಧ್ಯಕ್ಷರಗಳಿಗೂ ಮನವಿ ಮಾಡಿ ಸ್ವಚ್ಛತೆ ಕಾಪಾಡಿಕೊಳ್ಳಲು ಕೋರಲಾಗಿದೆ. ಒಂದು ವೇಳೆ ನಿಯಮ ಮೀರಿದಲ್ಲಿ ಕರ್ನಾಟಕ ಪುರಸಭಾ ಕಾಯ್ದೆ ರೀತ್ಯಾ ಹೋಟೇಲ್ ಬಂದ್ ಮಾಡಿಸಿ ಕಾನೂನು ರೀತಿಯ ಕ್ರಮಕೈಗೊಳ್ಳಲಾಗುವುದು ಎಂದರು. ದಾಳಿ ವೇಳೆ ಪೌರಾಯುಕ್ತ ವಾಸಿಂ ಅವರ ಜೊತೆಗೆ ಆಹಾರ ನಿರೀಕ್ಷಕರು ಹಾಗೂ ನಗರಸಭೆ ಸಿಬ್ಬಂದಿ ಹಾಜರಿದ್ದರು.

----

ಫೋಟೊ: ಹಿರಿಯೂರಿನಲ್ಲಿ ಹೋಟೆಲ್ ಗಳಲ್ಲಿ ಪ್ಲಾಸ್ಟಿಕ್ ಪೇಪರ್ ಬಳಸಿ ಇಡ್ಲಿ ಮಾಡುತ್ತಿದ್ದ ಹೋಟೆಲ್ ಮೇಲೆ ಪೌರಾಯುಕ್ತ ವಾಸಿಂ ನೇತೃತ್ವದ ತಂಡ ದಾಳಿ ನಡೆಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ