ಜೀವನಕ್ಕೆ ತಿರುವು ನೀಡವಲ್ಲಿ ನಾಟಕಗಳ ಪಾತ್ರ ಮಹತ್ತರ: ಗುರುಬಸವ

KannadaprabhaNewsNetwork |  
Published : Sep 30, 2026, 01:45 AM IST
ಚಿತ್ರ 29ಬಿಡಿಆರ್60 | Kannada Prabha

ಸಾರಾಂಶ

ಕಲೆ ಮತ್ತು ನಾಟಕಗಳು ಮನುಷ್ಯನ ಜೀವನಕ್ಕೆ ದೊಡ್ಡ ತಿರುವು ನೀಡುತ್ತವೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ನುಡಿದರು. ನಗರದ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕೃತಿಕ ಸಭಾಂಗಣದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಹಾಗೂ ಕರ್ನಾಟಕ ಸಾಹಿತ್ಯ ಸಂಘ ಮತ್ತು ವಿವಿಧ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಜರುಗಿದ ಮೂರು ದಿನಗಳ ನಾಟಕೋತ್ಸವ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೀದರ್

ಕಲೆ ಮತ್ತು ನಾಟಕಗಳು ಮನುಷ್ಯನ ಜೀವನಕ್ಕೆ ದೊಡ್ಡ ತಿರುವು ನೀಡುತ್ತವೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ನುಡಿದರು. ನಗರದ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕೃತಿಕ ಸಭಾಂಗಣದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಹಾಗೂ ಕರ್ನಾಟಕ ಸಾಹಿತ್ಯ ಸಂಘ ಮತ್ತು ವಿವಿಧ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಜರುಗಿದ ಮೂರು ದಿನಗಳ ನಾಟಕೋತ್ಸವ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ವೈದ್ಯಕೀಯ ಅಧ್ಯಯನದ ತೀವ್ರ ಒತ್ತಡದಲ್ಲಿರುವ ವಿದ್ಯಾರ್ಥಿಗಳಿಗೆ ಈ ನಾಟಕೋತ್ಸವವು ಹೊಸ ಚೈತನ್ಯ ಹಾಗೂ ಜೀವನಕ್ಕೆ ಮಾರ್ಗದರ್ಶನ ನೀಡಲಿದೆ. ಗಾಂಧಿಯವರು ಹರಿಶ್ಚಂದ್ರ ನಾಟಕ ನೋಡಿ ‘ಮಹಾತ್ಮ ಗಾಂಧಿ’ಯಾಗಿ ಬೆಳೆದರು. ‘ಜೈ ಜವಾನ್’ ಹಾಗೂ ದೇಶಭಕ್ತಿ: ಯಾವುದೇ ಕ್ಷೇತ್ರದಲ್ಲಿದ್ದರೂ ದೇಶಕ್ಕಾಗಿ ದುಡಿಯುವ ಹಾಗೂ ಸಮರ್ಪಣಾ ಭಾವ ಹೊಂದುವ ಸಂದೇಶವನ್ನು ನಾಟಕದಲ್ಲಿ ಉಲ್ಲೇಖಿಸಲಾಗಿದೆ. ಕಾರ್ಗಿಲ್ ಯುದ್ಧದ ಸಮಯದಲ್ಲಿ ತನ್ನೆಲ್ಲಾ ಮಕ್ಕಳನ್ನು ಕಳೆದುಕೊಂಡ ತಾಯಿಯೊಬ್ಬಳು, ‘ಇನ್ನೊಬ್ಬ ಮಗನಿದ್ದಿದ್ದರೆ ಅವನನ್ನೂ ದೇಶಕ್ಕಾಗಿ ಕಳುಹಿಸುತ್ತಿದ್ದೆ’ ಎಂದು ಹೇಳಿದ ನೈಜ ಹಾಗೂ ಭಾವುಕ ಘಟನೆ ಪ್ರತಿಯೊಬ್ಬರಲ್ಲಿ ರಾಷ್ಟ್ರಪ್ರೇಮ ಹೆಚ್ಚಿಸುತ್ತದೆ ಎಂದರು.ಬ್ರಿಮ್ಸ್ ವೈದ್ಯಕೀಯ ಕಾಲೇಜಿನ ಪ್ರಭಾರ ನಿರ್ದೇಶಕ ಡಾ.ಸುಮಂತ ಕಣಜಿಕರ್ ಉದ್ಘಾಟಿಸಿ ಮಾತನಾಡಿ, ವಿಜ್ಞಾನ ಕ್ಷೇತ್ರದಲ್ಲಿರುವವರು ಸಾಮಾನ್ಯವಾಗಿ ಕೇವಲ ಕಾರಣ ಮತ್ತು ಪರಿಣಾಮಗಳ ಬಗ್ಗೆ ಮಾತ್ರ ಗಮನ ಹರಿಸುತ್ತಾರೆ. ಆದರೆ, ಹೀಗೆ ಕೇವಲ ವಿಜ್ಞಾನದ ಬಗ್ಗೆಯೇ ಯೋಚಿಸುವ ಭರದಲ್ಲಿ, ಜೀವನದ ಮೃದುವಾದ ಹಾಗೂ ಸುಂದರವಾದ ಅಂಶಗಳಾದ ನಾಟಕ, ಸಾಹಿತ್ಯ ಮತ್ತು ಸಂಗೀತವನ್ನು ನಾವು ನಿರ್ಲಕ್ಷಿಸುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಪ್ರೊ.ಜಗನ್ನಾಥ ಹೆಬ್ಬಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, 1965ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪ್ರಧಾನಿಯಾಗಿದ್ದಾಗ ದೇಶವು ಎದುರಿಸಿದ ಆಹಾರದ ಕೊರತೆ ಮತ್ತು ಗಡಿ ರಕ್ಷಣೆಯ ಸವಾಲುಗಳನ್ನು ಹಾಗೂ ‘ಜೈ ಜವಾನ್, ಜೈ ಕಿಸಾನ್’ ಘೋಷಣೆಯ ಮಹತ್ವವನ್ನು ಈ ನಾಟಕ ಬಿಂಬಿಸುತ್ತದೆ ಎಂದು ಹೇಳಿದರು.ವೆಂಕಟೇಶ್ವರ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಉಮಾಕಾಂತ ಪಾಟೀಲ ಮಾತನಾಡಿ, ಹಳ್ಳಿಗಳಲ್ಲಿ ‘ನಾಟಕ’ ಎಂಬ ಪದವನ್ನು ನಕಾರಾತ್ಮಕವಾಗಿ ಬಳಸಿದರೂ, ನೈಜವಾಗಿ ಕಲೆ ಮತ್ತು ನಟನೆ ಎಂಬುದು ದೇವರಿಂದ ಮನುಷ್ಯನಿಗೆ ಸಿಕ್ಕ ಅಪರೂಪದ ಉಡುಗೊರೆಯಾಗಿದೆ ಎಂದು ವಿಶ್ಲೇಷಿಸಿದರು.ಇತ್ತಿಚೀಗೆ ಬೀದರ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೆಟ್ ಪಡೆದ ಡಾ.ಎಸ್.ಎಂ ಜನವಾಡಕರ್ ಅವರಿಗೆ ಇದೇ ವೇಳೆ ಗೌರವಿಸಲಾಯಿತು.ಈ ಸಂದರ್ಭದಲ್ಲಿ ದಿ.ಅಶೋಕ ಬಾದರದಿನ್ನಿ ನಿರ್ದೇಶನದ ಜೈ ಜವಾನ ಎಂಬ ನಾಟಕ ಪ್ರದರ್ಶನಗೊಂಡಿತ್ತು. ಕರಡ್ಯಾಳದ ಚನ್ನಬಸವ ಗುರುಕುಲದ ಮಕ್ಕಳು ಹಾಗೂ ಶಿಕ್ಷಕರು ನಾಟಕ ಪ್ರದರ್ಶಿಸಿದರು. ರಾಷ್ಟ್ರೀಯ ಜಾನಪದ ಬುಡಕಟ್ಟು ಹಾಗೂ ಕಲಾ ಪರಿಷತ್ ಕಾರ್ಯದರ್ಶಿ ರಾಜಹಕುಮಾರ ಹೆಬ್ಬಾಳೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ.ಸುನಿತಾ ಕೂಡ್ಲಿಕರ್ ನಿರೂಪಿಸಿದರೆ ನಿಜಲಿಂಗಪ್ಪ ತಗಾರೆ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬರಗಾಲದಲ್ಲಿ ಹನಿ ನೀರೂ ಬಂಗಾರ: ಸಿಇಒ
ಹಾಸನಾಂಬೆ ಜಾತ್ರೆ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ ಬಿಂಬಿಸುವಂತಿರಲಿ