ರಾಮಪುರ ಮುಖ್ಯ ರಸ್ತೆ ಅಗಲೀಕರಣಕ್ಕೆ ಸಹಕಾರ ನೀಡಿ

KannadaprabhaNewsNetwork |  
Published : Sep 08, 2025, 01:00 AM IST
7ಸಿಎಚ್‌ಎನ್‌51ಹನೂರು ರಾಮಪುರ ಗ್ರಾಮದಲ್ಲಿ ಶಾಸಕ ಎಂಆರ್ ಮಂಜುನಾಥ್ ರಸ್ತೆ ಅಭಿವೃದ್ಧಿ ಅಗಲೀಕರಣಕ್ಕಾಗಿ ವರ್ತಕರು ನಿವಾಸಿಗಳ ಜೊತೆ  ಸಭೆ ನಡೆಸಿದರು. | Kannada Prabha

ಸಾರಾಂಶ

ರಾಮಪುರ ಸುತ್ತಮುತ್ತಲನ ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿದ್ದು ಉತ್ತಮ ವ್ಯಾಪಾರ ವಹಿವಾಟು ನಡೆಯುವ ಸ್ಥಳ ಆಗಿರುವುದರಿಂದ ಮುಖ್ಯ ರಸ್ತೆ ಅಗಲೀಕರಣದ ಅಗತ್ಯವಿದೆ. ನಿವಾಸಿಗಳು ಅಭಿವೃದ್ಧಿಗೆ ಸಹಕಾರ ನೀಡುವಂತೆ ಶಾಸಕ ಎಂ. ಆರ್‌. ಮಂಜುನಾಥ್ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಹನೂರು ರಾಮಪುರ ಸುತ್ತಮುತ್ತಲನ ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿದ್ದು ಉತ್ತಮ ವ್ಯಾಪಾರ ವಹಿವಾಟು ನಡೆಯುವ ಸ್ಥಳ ಆಗಿರುವುದರಿಂದ ಮುಖ್ಯ ರಸ್ತೆ ಅಗಲೀಕರಣದ ಅಗತ್ಯವಿದೆ. ನಿವಾಸಿಗಳು ಅಭಿವೃದ್ಧಿಗೆ ಸಹಕಾರ ನೀಡುವಂತೆ ಶಾಸಕ ಎಂ. ಆರ್‌. ಮಂಜುನಾಥ್ ತಿಳಿಸಿದರು.

ತಾಲೂಕಿನ ರಾಮಪುರ ಗ್ರಾಮದಲ್ಲಿ ವರ್ತಕರು ಗ್ರಾಮಸ್ಥರು ಮುಖಂಡರ ಜೊತೆ ಮುಖ್ಯರಸ್ತೆ ಅಗಲೀಕರಣ ಸಂಬಂಧ ಕರೆಯಲಾಗಿದ್ದ ಸಭೆಯಲ್ಲಿ ರಸ್ತೆ ಅಗಲೀಕರಣ ಸಂಬಂಧ ಸುದೀರ್ಘವಾಗಿ ಚರ್ಚೆ ನಡೆಸಿ ಅವರು ನಿವಾಸಿಗಳ ಜೊತೆ ಮಾತನಾಡಿದರು.

ರಾಮಪುರ ಉತ್ತಮ ವ್ಯಾಪಾರ ಕೇಂದ್ರ ಸ್ಥಾನವಾಗಿದ್ದು, ಸುತ್ತಮುತ್ತಲಿನ ಗ್ರಾಮಗಳಿಂದ ವ್ಯಾಪಾರಸ್ಥರು ನಿವಾಸಿಗಳು ಬರುವುದರಿಂದ ರಸ್ತೆ ಅಭಿವೃದ್ಧಿ ಕಾಮಗಾರಿಯ ಜೊತೆಗೆ ಅಗಲೀಕರಣ ಮಾಡಲು ನಿವಾಸಿಗಳು ಸ್ಪಂದಿಸಬೇಕು. ಜೊತೆಗೆ ಇಲ್ಲಿನ ವ್ಯಾಪಾರಸ್ಥರು ನಿವಾಸಿಗಳು ರಸ್ತೆ ಅಭಿವೃದ್ಧಿ ಮತ್ತು ಅಗಲ ಕರಣಕ್ಕಾಗಿ ಸಂಪೂರ್ಣವಾಗಿ ಸಹಕಾರ ನೀಡಿದರೆ ರಸ್ತೆ ಅಭಿವೃದ್ಧಿಗೆ ಪೂರಕವಾಗುತ್ತದೆ. ಜೊತೆಗೆ ಇಲ್ಲಿನ ವ್ಯಾಪಾರ ವಹಿವಾಟು ದ್ವಿಗುಣಗೊಳಿಸಲು ಅನುಕೂಲದಾಯಕವಾಗುತ್ತದೆ. ಹೀಗಾಗಿ ವರ್ತಕರು ನಿವಾಸಿಗಳು ಸಹಕಾರ ನೀಡುವಂತೆ ತಿಳಿಸಿದರು.

ಸಭೆಯಲ್ಲಿ ಸುದೀರ್ಘವಾಗಿ ಚರ್ಚೆಯಾಗಿ ನಿವಾಸಿಗಳಿಂದ ಉತ್ತಮವಾಗಿ ಸ್ಪಂದನೆ ಸಕಾರಾತ್ಮಕವಾಗಿ ಬಂದಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿ ಅಗಲೀಕರಣಕ್ಕೆ ಸರ್ವೆ ನಡೆಸಬೇಕು. ರಸ್ತೆ ಅಭಿವೃದ್ಧಿ ಅಗಲೀಕರಣ ಸಭೆ ಕರೆಯಲಾಗಿದ್ದ ಸಭೆಯಲ್ಲಿ ವಿವಿಧ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಬಗ್ಗೆ ಸಾರ್ವಜನಿಕರಿಂದ ಶಾಸಕ ಎಂಆರ್ ಮಂಜುನಾಥ್ ಅವರ ಗಮನಕ್ಕೆ ತಂದಾಗ ಇದಕ್ಕೆ ಪೂರಕವಾಗಿ ಸ್ಪಂದಿಸಿದ ಶಾಸಕರು ಸಭೆಯಲ್ಲಿದ್ದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪುಷ್ಪಲತಾ ಅವರಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತಕ್ಷಣ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚನೆ ನೀಡಿದರು.

ರಾಮಪುರದಲ್ಲಿ ಕಸ ಸಂಗ್ರಹಣೆ ಮಾಡಲು ಈಗಾಗಲೇ ಭೂಮಾಪನ ಇಲಾಖೆ ಅಧಿಕಾರಿಗಳು ಸರ್ವೆ ನಡೆಸಿ ಸ್ಥಳ ಗುರುತು ಮಾಡಿದ್ದಾರೆ ಸದ್ಯದಲ್ಲಿಯೇ ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಜೊತೆಗೆ ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಸಹ ಕ್ರಮ ಕೈಗೊಳ್ಳಲಾಗಿದೆ ಎಂದರು.

ಸಭೆಯಲ್ಲಿ ಭೂಮಾಪನ ಇಲಾಖೆ ಎ ಡಿ ಎಲ್ ಆರ್ ನಟರಾಜ್ ಜೆಜೆ ಎಂಜಿನಿಯರ್ ಪೂರ್ಣಿಮಾ ರಾಮಪುರ ಪೊಲೀಸ್ ಇನ್ಸ್ಪೆಕ್ಟರ್ ಚಿಕ್ಕರಾಜ್ ಶೆಟ್ಟಿ ಸಬ್ ಇನ್ಸ್ಪೆಕ್ಟರ್ ಈಶ್ವರ್ ರಾಜಸ್ಥಾನ್ ನಿರೀಕ್ಷಕ ಶಿವಕುಮಾರ್ ಚೆಸ್ಕಾಂ ಇಂಜಿನಿಯರ್ ನವೀನ್ ಗ್ರಾಮ ಪಂಚಾಯತಿ ಪಿಡಿಒ ಪುಷ್ಪಲತಾ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಮುಖಂಡರು ರಾಮಪುರದ ವರ್ತಕರು ಉಪಸ್ಥಿತರಿದ್ದರು.

PREV

Recommended Stories

ಭಕ್ತರ ಸಹಕಾರದಿಂದ ದೇವಸ್ಥಾನದಲ್ಲಿ ಹೊಸತನ
ಪತ್ನಿ ಮೇಲೆ ಹಲ್ಲೆಗೈದು ಅರ್ಧ ತಲೆ ಬೋಳಿಸಿದ ಪತಿ