-ಸ್ವಾತಂತ್ರ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ । ಕ್ರೀಡಾಪಟುಗಳಿಗೆ ಪ್ರಶಸ್ತಿ ಪ್ರದಾನ
ಕನ್ನಡಪ್ರಭ ವಾರ್ತೆ ದೇವದುರ್ಗ
ಹೋರಾಟಗಾರರ ತ್ಯಾಗ-ಬಲಿದಾನದ ಪ್ರತಿಫಲವಾಗಿ ಸ್ವಾತಂತ್ರ್ಯ ದೊರಕಿದೆ. ಆರೋಗ್ಯಕರ ದೇಶ ನಿರ್ಮಾಣ ಮಾಡುವ ಮೂಲಕ ಸ್ವಾತಂತ್ರ್ಯ ನೀಡಿರುವ ಮಹನೀಯರಿಗೆ ಗೌರವ ನೀಡಬೇಕಾಗಿದ್ದು, ಹೀಗಾಗಿ ವ್ಯಸನ ಮುಕ್ತ ದೇಶ ನಿರ್ಮಾಣ ಎಲ್ಲರ ಸಂಕಲ್ಪವಾಗಬೇಕೆಂದು ಶಾಸಕಿ ಕರೆಮ್ಮ ಜಿ. ನಾಯಕ ತಿಳಿಸಿದರು.ಪಟ್ಟಣದ ಸಾರ್ವಜನಿಕ ಕ್ಲಬ್ಬಿನಲ್ಲಿ ತಾಲೂಕು ಆಡಳಿತ ಶನಿವಾರ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಶಿಕ್ಷಣ ನೀಡುವ ವಾತಾವರಣ ನಿರ್ಮಿಸಲು ಎಲ್ಲರ ಸಹಕಾರ ಅಗತ್ಯ. ಹಾಗಾದಾಗ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಾಣಗೊಳ್ಳಲಿದೆ ಎಂದರು.
ತಾಪಂ ಇಒ ರಾಜೇಂದ್ರಕುಮಾರ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಶರಣಗೌಡ ಹಂಚಿನಾಳ, ತಾಲೂಕು ನೌಕರರ ಸಂಘದ ಅಧ್ಯಕ್ಷ ಹನುಮಂತ್ರಾಯ ಶಾಖೆ, ಸ್ವಾತಂತ್ರ್ಯ ಹೋರಾಟಗಾರ ಆದಿ ರಾಜಶೇಖರಪ್ಪ ಆದಿಯವರ ಪತ್ನಿ ಆದಿ ಕಮಲಮ್ಮ, ಪುರಸಭೆ ಮುಖ್ಯಧಿಕಾರಿ ಹಂಪಯ್ಯ ಕೆ., ಲೋಕೋಪಯೋಗಿ ಇಲಾಖೆ ಎಇಇ ಟಿ.ಶ್ರೀನಿವಾಸ, ಕೃಷಿ ಸಹಾಯಕ ನಿರ್ದೇಶಕ ಶ್ರೀನಿವಾಸ ನಾಯಕ, ಬಿಸಿಎಂ ಅಧಿಕಾರಿ ಬಾಬು ಹಾಗೂ ಇತರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ತಾಲೂಕಿ ಸಮಾಜ ಕಲ್ಯಾಣಧಿಕಾರಿ ರಾಜಕುಮಾರ ಡೋಣಿ, ಬಿಆರ್‌ಸಿ ಶಿವರಾಜ ಪೂಜಾರಿ, ದೈಹಿಕ ಶಿಕ್ಷಣಧಿಕಾರಿ ಬಾಲಪ್ಪ ಬಾವಿಮನಿ, ಶಿಕ್ಷಕರಾದ ರಂಗನಾಥ ಸಿ., ಮಮತಾ ಆದಿ, ರೇವಣಸಿದ್ದಪ್ಪ ನಿರೂಪಿಸಿದರು. ವಿವಿಧ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ವಿವಿಧೆಡೆ ಸ್ವಾತಂತ್ರ್ಯೋತ್ಸವ
ಬಾಲಕಿಯರ ಪ್ರೌಢಶಾಲೆ: ದೇವದುರ್ಗ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ ನಾಯಕ ಸೋಮಕರ ಮತ್ತು ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ ಅವರು ಜಂಟಿಯಾಗಿ ಧ್ವಜಾರೋಹಣವ ನೆರವೇರಿಸಿದರು.
--------ಫೋಟೊ-----------
ದೇವದುರ್ಗ ಪಟ್ಟಣದ ಸಾರ್ವಜನಿಕ ಕ್ಲಬ್‌ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕಿ ಕರೆಮ್ಮ ಜಿ.ನಾಯಕ ಮಾತನಾಡಿದರು. ತಹಸೀಲ್ದಾರ ನಾಗಮ್ಮ ಎಂ.ಕಟ್ಟೀಮನಿ, ಲಕ್ಷ್ಮಣ ಜ್ಯೋತಿ, ಬಿಇಒ ರಾಧಾದೇವಿ ಮತ್ತಿತರರು ಇದ್ದರು.