ಅಧಿಕಾರಸ್ಥರಿಗೆ ಅಭಿವೃದ್ಧಿ ಚಿಂತನೆ ಅಗತ್ಯ

KannadaprabhaNewsNetwork |  
Published : Oct 26, 2025, 02:00 AM IST
56 | Kannada Prabha

ಸಾರಾಂಶ

ತಾಲೂಕಿನ ಜನತೆಗೆ ಕರಡಿ ಲಕ್ಕನ ಕೆರೆ, 150 ಕೆರೆ ನೀರು ತುಂಬಿಸುವ ಯೋಜನೆ, ಕುಸುಮ್ ಯೋಜನೆ ಮೂಲಕ ನಿರಂತರ ವಿದ್ಯುತ್ ಸರಬರಾಜು ಮತ್ತು ಬೆಟ್ಟದಪುರ ರಸ್ತೆ ಮೆಟ್ಟಿಲು ಮಾಡಿಸಿದ್ದೇನೆ

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ

ಅಧಿಕಾರಕ್ಕೆ ಬಂದವರೆಲ್ಲ ಅಭಿವೃದ್ಧಿ ಕೆಲಸ ಮಾಡಲ್ಲ, ಅಭಿವೃದ್ಧಿಯ ಚಿಂತನೆ ಇರಬೇಕು ಎಂದು ರೇಷ್ಮೆ ಹಾಗೂ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ಆಯಿತನಳ್ಳಿ ಗ್ರಾಮದಲ್ಲಿ ಪ. ಜಾತಿ ಗ್ರಾಮದ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ತಾಲೂಕಿನ ಜನತೆಗೆ ಕರಡಿ ಲಕ್ಕನ ಕೆರೆ, 150 ಕೆರೆ ನೀರು ತುಂಬಿಸುವ ಯೋಜನೆ, ಕುಸುಮ್ ಯೋಜನೆ ಮೂಲಕ ನಿರಂತರ ವಿದ್ಯುತ್ ಸರಬರಾಜು ಮತ್ತು ಬೆಟ್ಟದಪುರ ರಸ್ತೆ ಮೆಟ್ಟಿಲು ಮಾಡಿಸಿದ್ದೇನೆ. ಅರಸು ಭವನ, ಡಾ.ಬಿ.ಆರ್. ಅಂಬೇಡ್ಕರ್ ಭವನ ಹಾಗೂ ಡಾ. ಬಾಬು ಜಗಜೀವನ್ ರಾಮ್ ಭವನ, ವಾಲ್ಮೀಕಿ ಭವನ ನಿರ್ಮಿಸಿದ್ದೇನೆ, ಆದರೆ ಹೊಟ್ಟೆ ಉರಿಗೆ ಇಲ್ಲಸಲ್ಲದ ಆರೋಪ ಮಾಡುತ್ತ ಮಾತನಾಡುತ್ತಾರೆ. ಅಧಿಕಾರ ಪಡೆದು ಕಾಲ ಕಳೆಯುವ ಅಭ್ಯಾಸ ನನಗಿಲ್ಲ, ಯಾವಾಗಲೂ ಅಭಿವೃದ್ಧಿ ಯೋಚನೆ ಮಾಡುತ್ತೇನೆ ಎಂದರು.

ಪಶುಪಾಲನ ಇಲಾಖೆಯ ಉಪ ನಿರ್ದೇಶಕ ಡಾ. ನಾಗರಾಜ್ ಮಾತನಾಡಿ, ಪಶು ಸಂಗೋಪನೆ ಸಚಿವರಾದ ಕೆ. ವೆಂಕಟೇಶ್ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಬಡ ಜನರಿಗೆ ಅನುಕೂಲವಾಗುವಂತೆ ಪಶು ಆಸ್ಪತ್ರೆಗಳನ್ನು ನಿರ್ಮಿಸಿದ್ದು, ಅಗತ್ಯವಿರುವ ಕಡೆ ನೌಕರರನ್ನು ಕೂಡ ನೇಮಕ ಮಾಡಿಕೊಂಡಿದ್ದಾರೆ, ಪ್ರತಿನಿತ್ಯ ಎರಡುವರೆ ಲಕ್ಷ ಹಾಲು ಹೆಚ್ಚಾಗಿ ಉತ್ಪಾದನೆ ಆಗುತ್ತಿದ್ದು, ಅದನ್ನು ಅನ್ಯ ಪದಾರ್ಥಗಳಿಗೆ ಉಪಯೋಗಿಸಲಾಗುತ್ತದೆ, ರೈತರ ಆರ್ಥಿಕ ಮಟ್ಟ ಹೆಚ್ಚಾಗಲೆಂದು ನಮ್ಮ ಸಚಿವರು ಶ್ರಮ ವಹಿಸುತ್ತಿದ್ದು, ಇದಕ್ಕಾಗಿ ಅನುಗ್ರಹ ಹಾಗೂ ಕಾಮಧೇನು ಎಂಬ ಆಪತ್ತು ನಿಧಿಯನ್ನು ಸ್ಥಾಪಿಸಲಾಗಿದೆ ಜಾನುವಾರುಗಳು ತೀರಿಕೊಂಡರೆ ಅವರಿಗೆ 15 ಸಾವಿರ ಹಾಗೂ ಅನುಗ್ರಹ ಸ್ಕೀಮಿನಲ್ಲಿ ಏಳುವರೆ ಸಾವಿರ ರು. ಉಚಿತವಾಗಿ ಸರ್ಕಾರದಿಂದ ನೀಡಲಾಗುತ್ತದೆ, ಹಾಗಾಗಿ ಸರ್ಕಾರಕ್ಕೆ ಕೋಟ್ಯಂತರ ರು. ವೆಚ್ಚವಾಗುತ್ತಿದ್ದು, ಸಚಿವರು ಮುತುವರ್ಜಿ ವಹಿಸಿ ಈ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.

ಜಿಲ್ಲಾ ಮೈಮುಲ್ ಸದಸ್ಯ ಬಿ.ಎ. ಪ್ರಕಾಶ್, ತಹಸೀಲ್ದಾರ್ ನಿಸರ್ಗ ಪ್ರಿಯಾ, ತಾಪಂ ಕಾರ್ಯ ನಿರ್ವಹಕಾಧಿಕಾರಿ ಸುನಿಲ್ ಕುಮಾರ್, ಜಿಪಂ ಮಾಜಿ ಸದಸ್ಯ ರಹಮತ್‌ ಜಾನ್ ಬಾಬು, ಪಿಎಲ್.ಡಿ ಬ್ಯಾಂಕ್ ಅಧ್ಯಕ್ಷ ಕೆ. ಹೊಲದಪ್ಪ, ಎಂಡಿಸಿಸಿ ಜಿಲ್ಲಾ ಬ್ಯಾಂಕ್ ನಿರ್ದೇಶಕ ಲೋಕೇಶ್, ಆಯಿತನಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಂಕರ್, ಕೆಡಿಪಿ ಸದಸ್ಯ ಮಹದೇವ್, ಎಂಜಿನಿಯರ್‌ ವೆಂಕಟೇಶ್, ವಿಜಯ್ ಕುಮಾರ್, ಸುಗಂಧ ರಾಜ್, ದಿನೇಶ್, ಮುಖಂಡರಾದ ಮಂಜು, ಗಣೇಶ್, ಡಿ.ಟಿ. ಸ್ವಾಮಿ, ಅನಿಲ್ ಕುಮಾರ್, ಪಿ. ಮಹದೇವ್, ಪರಮೇಶ್, ಶಿವಶಂಕರ ಇದ್ದರು.

PREV

Recommended Stories

ಅಸ್ಸಾಂನಲ್ಲಿ ಯಾವ ಪ್ರತಿಭೆ ಇದೆ ಎಂದು ಹೂಡಿಕೆ? : ಪ್ರಿಯಾಂಕ್‌
ಪ್ರಿಯಾಂಕ್‌ರಿಂದ ಅಸ್ಸಾಮಿ ಜನತೆಗೆ ಅವಮಾನ : ಸಿಎಂ ಶರ್ಮ