ಮನ್ ಕಿ ಬಾತ್‌ನಲ್ಲಿ ಕನ್ನಡ ಭಾಷಾ ಇತಿಹಾಸಕ್ಕೆ ಪ್ರಧಾನಿ ಮೆಚ್ಚುಗೆ

KannadaprabhaNewsNetwork |  
Published : Dec 29, 2025, 01:30 AM IST
ಪೋಟೋ 4 : ತ್ಯಾಮಗೊಂಡ್ಲು ಹೋಬಳಿಯ ಬೈರನಾಯಕನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ 129ನೇ ಮನ್ ಕೀ ಬಾತ್ ಕಾರ್ಯಕ್ರಮವನ್ನು ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷೆ ಭಾರತೀ ಮಲ್ಲಿಕಾರ್ಜುನ ಅಲ್ವಂಡೀ, ಜಿಲ್ಲಾಧ್ಯಕ್ಷ ಭೃಂಗೇಶ್ ಉದ್ಘಾಟಿಸಿದರು. | Kannada Prabha

ಸಾರಾಂಶ

ದಾಬಸ್‍ಪೇಟೆ: ಭಾರತದ ದಿಟ್ಟ ಪ್ರಧಾನಿ ನರೇಂದ್ರ ಮೋದಿಯವರು ಮನದ ಮಾತು 129ನೇ ಸರಣಿಯಲ್ಲಿ, ರಾಜ್ಯದ ಮಾತೃಭಾಷೆ ಕನ್ನಡದ ಬಗ್ಗೆ ಮಾತನಾಡಿರುವುದು ನಮ್ಮ ಹೆಮ್ಮೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷೆ ಭಾರತೀ ಮಲ್ಲಿಕಾರ್ಜುನ ಅಲ್ವಂಡಿ ಹೇಳಿದರು.

ದಾಬಸ್‍ಪೇಟೆ: ಭಾರತದ ದಿಟ್ಟ ಪ್ರಧಾನಿ ನರೇಂದ್ರ ಮೋದಿಯವರು ಮನದ ಮಾತು 129ನೇ ಸರಣಿಯಲ್ಲಿ, ರಾಜ್ಯದ ಮಾತೃಭಾಷೆ ಕನ್ನಡದ ಬಗ್ಗೆ ಮಾತನಾಡಿರುವುದು ನಮ್ಮ ಹೆಮ್ಮೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷೆ ಭಾರತೀ ಮಲ್ಲಿಕಾರ್ಜುನ ಅಲ್ವಂಡಿ ಹೇಳಿದರು.

ತ್ಯಾಮಗೊಂಡ್ಲು ಹೋಬಳಿಯ ಬೈರನಾಯಕನಹಳ್ಳಿ ಗ್ರಾಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ 129ನೇ ಮನ್ ಕೀ ಬಾತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಭಾರತದ ಪ್ರಧಾನಿಗಳು ಮನಕೀ ಬಾತ್ ಕಾರ್ಯಕ್ರಮದಲ್ಲಿ, ಕೇಂದ್ರ ಸರ್ಕಾರದ ಆತ್ಮ ನಿರ್ಭರ ಭಾರತ್, ವಿಕಸಿತ ಭಾರತ ಯೋಜನೆಗಳ ಬಗ್ಗೆ ತಿಳಿಸಿ, ಕನ್ನಡದ ಭಾಷೆಯ ಸುದೀರ್ಘ ಇತಿಹಾಸದ ಬಗ್ಗೆ ಮೆಚ್ಚುಗೆ ಮಾತನಾಡಿದ್ದಾರೆ. ಗುಡಿ ಕೈಗಾರಿಕೆ, ಸೌರಶಕ್ತಿ, ಎಐ ತಂತ್ರಜ್ಞಾನ, ಇತರ ಹತ್ತು ಹಲವು ವಿಚಾರಗಳ ಬಗ್ಗೆ ತಿಳಿಸಿದರು.

ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಕೆ.ಪಿ.ಭೃಂಗೇಶ್ ಮಾತನಾಡಿ, ಈ ವರ್ಷದ ಕೊನೆಯ 129ನೇ ಮನ್ ಕೀ ಬಾತ್ ಕಾರ್ಯಕ್ರಮ ಜಿಲ್ಲೆಯ ಒಂದು ಹಳ್ಳಿಯಲ್ಲಿ ಪದಾಧಿಕಾರಿಗಳು ರೈತರೊಂದಿಗೆ ವೀಕ್ಷಿಸಬೇಕೆಂಬುದು ಮೋದಿಜಿಯವರ ಅಪೇಕ್ಷೆಯಂತೆ ಬೈರನಾಯಕನಹಳ್ಳಿಯ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ. ಗ್ರಾಮೀಣ ಪ್ರದೇಶದ ರೈತರ ಜೀವನಾಡಿ ಕೃಷಿಯ ಬಗ್ಗೆ ಪ್ರಧಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಇಡೀ ಮಂಡಲದ ಎಲ್ಲಾ ರೈತರು ಮನ್‌ ಕೀ ಬಾತ್ ವೀಕ್ಷಿಸಿದ್ದೇವೆ. ಜಿಲ್ಲೆಯಲ್ಲಿ ರೈತ ಮೋರ್ಚಾ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗೇಶ್, ಜಿಲ್ಲಾ ಉಪಾಧ್ಯಕ್ಷ ನಟೇಶ್ ಖಜಾಂಜಿ ಮುನಿರಾಜು, ರೈತಮೊರ್ಚಾ ತಾಲೂಕು ಅಧ್ಯಕ್ಷ ಅರುಣ್ ಕುಮಾರ್, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳ ಸುರೇಶ್, ಪ್ರಧಾನ ಕಾರ್ಯದರ್ಶಿ ಶೀಲಾ, ಮಂಡಲ ಅಧ್ಯಕ್ಷ ಅರುಣ್ ಗೌಡ, ತಾಲೂಕು ಉಪಾಧ್ಯಕ್ಷ ಹನುಮಂತರಾಜು, ರವಿ, ನಾಗೇಶ್, ಮಹಿಳಾ ಮೋರ್ಚಾದ ಶಾಂತಕುಮಾರಿ, ಪ್ರಸಾದ್, ಅರುಣ್ ಇತರರಿದ್ದರು.

ಪೋಟೋ 4 : ತ್ಯಾಮಗೊಂಡ್ಲು ಹೋಬಳಿಯ ಬೈರನಾಯಕನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ 129ನೇ ಮನ್ ಕೀ ಬಾತ್ ಕಾರ್ಯಕ್ರಮವನ್ನು ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷೆ ಭಾರತೀ ಮಲ್ಲಿಕಾರ್ಜುನ ಅಲ್ವಂಡೀ, ಜಿಲ್ಲಾಧ್ಯಕ್ಷ ಭೃಂಗೇಶ್ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತ್ಯಾಗ, ಬಲಿದಾನ, ಆದರ್ಶಗಳ ಮೇಲೆ ಹುಟ್ಟಿದ ಕಾಂಗ್ರೆಸ್: ಎಸ್.ಆರ್. ಪಾಟೀಲ
ರೈತ ಸೃಷ್ಟಿಯ ಮೊದಲ ವಿಜ್ಞಾನಿ, ಜಮೀನು ಪ್ರಯೋಗಾಲಯ: ಮಾಜಿ ಸಚಿವ ನಿರಾಣಿ