ಶ್ರೀರಂಗಪಟ್ಟಣ: ತಾಲೂಕಿನ ಬೆಳಗೊಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ಗ್ರಾಮದ ಭೈರವೇಶ್ವರ ದೇವಾಲಯದ ಬಳಿ ಬಿಜೆಪಿ ಕಾರ್ಯಕರ್ತರು, ಬಡಾವಣೆ ನಿವಾಸಿಗಳು ಸ್ವಚ್ಛತಾ ಆಂದೋಲನ ಹಾಗೂ ಸಸಿ ನೆಡುವ ಮೂಲಕ ಆಚರಿಸಿದರು.
ನಂತರ ಡಾ.ಸಿದ್ದರಾಮಯ್ಯ ಮಾತನಾಡಿ, ರಾಷ್ಟ್ರವ್ಯಾಪಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ 25ನೇ ವರ್ಷದ ಜನಸೇವಾ ಕೃತಜ್ಞತಾ ಸಂಕೇತವಾಗಿ ಸೇವಾ ಸಂಕಲ್ಪ ಅಭಿಯಾನದಡಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ನರೇಂದ್ರ ಮೋದಿ ಅವರ ದೂರ ದೃಷ್ಟಿಯಿಂದ ನಮ್ಮ ದೇಶ ಸುಭದ್ರವಾಗಿದೆ. ವಿಶ್ವದಲ್ಲಿ ಮೋದಿ ಅವರನ್ನು ಪ್ರೀತಿಸುವ ದೇಶಗಳು ಹೆಚ್ಚಾಗಿವೆ. ನಮ್ಮ ದೇಶದ ಸಂಸ್ಕೃತಿಗೆ ಹಾಗೂ ಆಡಳಿತದ ವೈಖರಿ ಮೆಚ್ಚಿ ವಿದೇಶಿಗರು ಮಾರು ಹೋಗುತ್ತಿದ್ದಾರೆ ಎಂದು ಶ್ಲಾಘಿಸಿದರು.ಜಿಪಂ ಮಾಜಿ ಸದಸ್ಯ ಎಸ್.ಎಲ್.ಲಿಂಗರಾಜು ಮಾತನಾಡಿ, ಇಡೀ ಜಗತ್ತು ಭಾರತವನ್ನು ಒಮ್ಮೆ ಕಣ್ಣು ತೆರೆದು ನೋಡುವಂತೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿಯವರು. ಅವರ ಜನ್ಮದಿನವನ್ನು ವಿವಿಧ ಜನ ಪರ ಯೋಜನೆಗಳ ಮೂಲಕ ಅಭಿಯಾನ ನಡೆಸಿ ಆಚರಣೆ ಮಾಡಲಾಗುತ್ತಿದೆ ಎಂದರು.
------------
ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ಭೈರವೇಶ್ವರ ದೇವಾಲಯದ ಬಳಿ ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಕಾರ್ಯಕರ್ತರು, ಬಡಾವಣೆ ನಿವಾಸಿಗಳಿಂದ ಸ್ವಚ್ಛತಾ ಆಂದೋಲನ ಹಾಗೂ ಸಸಿ ನೆಡುವ ಕಾರ್ಯಕ್ರಮ ನಡೆಯಿತು.