ಮಂಗಳೂರು: ಮೈಸೂರಿನಲ್ಲಿ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿದ್ದ ನರೇಂದ್ರ ಮೋದಿ ಸುಮಾರು 7.15ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅಲ್ಲಿ ಅವರನ್ನು ಬಿಜೆಪಿ ಪದಾಧಿಕಾರಿಗಳು ಬರಮಾಡಿಕೊಂಡರು. ಅಲ್ಲಿಂದ ರಸ್ತೆ ಮಾರ್ಗವಾಗಿ ಕೆಪಿಟಿ ಮೂಲಕ ಕೊಟ್ಟಾರ ಚೌಕಿಯಾಗಿ ನಾರಾಯಣ ಗುರು ವೃತ್ತಕ್ಕೆ ಆಗಮಿಸಿದರು. 7.40ಕ್ಕೆ ರೋಡ್ ಶೋ ಆರಂಭ. ನವಭಾರತ್ ಸರ್ಕಲ್‌ನಲ್ಲಿ ರೋಡ್ ಶೋ ಮುಗಿಯುವಾಗ 8.40 ಗಂಟೆ. ಸರಿಯಾಗಿ ಒಂದು ಗಂಟೆ ಕಾಲ ಮಂಗಳೂರಿನಲ್ಲಿ ರೋಡ್ ಶೋ ನಡೆಸಿದ ನರೇಂದ್ರ ಮೋದಿ ರೋಡ್ ಶೋ ಮುಗಿದ ಕೂಡಲೆ ರಸ್ತೆ ಮಾರ್ಗವಾಗಿ ಹಂಪನಕಟ್ಟೆ, ಜ್ಯೋತಿ, ನಂತೂರು ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ತೆರಳಿದರು. ಬಿಜೆಪಿ ಮುಖಂಡರು, ಕಾರ್ಯಕರ್ತರು ಅವರನ್ನು ಬೀಳ್ಕೊಟ್ಟರು. 7.38ಕ್ಕೆ ರೋಡ್‌ಶೋಗೆ ಬಂದಿಳಿದ ಮೋದಿಪ್ರಧಾನಿ ನರೇಂದ್ರ ಮೋದಿ ಅವರು ಸರಿಯಾಗಿ 7.38ಕ್ಕೆ ನಾರಾಯಣಗುರು ವೃತ್ತಕ್ಕೆ ಬಂದಿಳಿದಾಗ ಸಾವಿರಾರು ಅಭಿಮಾನಿಗಳು ಮೋದಿ ಮೋದಿ.. ಎಂಬ ಉದ್ಗಾರ, ಜಯಘೋಷ ಕೂಗಿದರು. ಅಭಿಮಾನಿಗಳಿಗೆ ಕೈಬೀಸಿದ ಮೋದಿ ನೇರವಾಗಿ ನಾರಾಯಣ ಗುರು ವೃತ್ತಕ್ಕೆ ತೆರಳಿ ಗುರುಗಳ ಪ್ರತಿಮೆಗೆ ಹಾರಾರ್ಪಣೆ ಮಾಡಿ ನಮಸ್ಕರಿಸಿ ಗೌರವ ಸಲ್ಲಿಸಿದರು. ಬಳಿಕ ಜನರತ್ತ ಕೈಬೀಸಿದರು. ನರೇಂದ್ರ ಮೋದಿ ಅವರಿಗೆ ಇಬ್ಬರು ಅಭ್ಯರ್ಥಿಗಳಾದ ಕ್ಯಾ.ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ನಳಿನ್ ಕುಮಾರ್ ಹಾರ ಹಾಕಿ ರೋಡ್‌ಶೋಗೆ ಸ್ವಾಗತ ಕೋರಿದರು. ಸರಿಯಾಗಿ 7.40ಕ್ಕೆ ರೋಡ್ ಶೋ ಜನಸಾಗರದ ಮಧ್ಯೆ ಆರಂಭಗೊಂಡಿತು.
ಹರಿದುಬಂದ ಜನಸಾಗರಮಂಗಳೂರಿನಲ್ಲಿ ಆಯೋಜಿಸಿದ್ದ ಮೋದಿ ರೋಡ್‌ಶೋಗೆ ಕರಾವಳಿಯ ವಿವಿಧೆಡೆಗಳಿಂದ ಜನಸಾಗರವೇ ಹರಿದುಬಂದಿತ್ತು. ಮುಖ್ಯವಾಗಿ ಮಂಗಳೂರು ದಕ್ಷಿಣ, ಉತ್ತರ, ಮೂಡುಬಿದಿರೆಯ ಸಾವಿರಾರು ಮಂದಿ ವಾಹನಗಳಲ್ಲಿ ಆಗಮಿಸಿದ್ದರು. ರಾತ್ರಿ ರೋಡ್ ಶೋ ಆಯೋಜಿಸಲಾಗಿದ್ದರೂ, ಸಂಜೆಯಿಂದಲೇ ಜನಸಾಗರ ಹರಿದುಬಂದು ಮೋದಿ ಅವರನ್ನು ನೋಡಲು ಬ್ಯಾರಿಕೇಡ್ ಸುತ್ತಲೂ ಜಮಾಯಿಸಿದ್ದರು. ಸಂಜೆ 7 ಗಂಟೆ ವೇಳೆಗೆ ಸಾಗರೋಪಾದಿಯಲ್ಲಿ ಜನರು ಸೇರತೊಡಗಿದ್ದರು.ನೀರು, ಜ್ಯೂಸ್, ಮಜ್ಜಿಗೆ
ಸೆಕೆ ವಿಪರೀತ ಹೆಚ್ಚಿರುವ ಮಂಗಳೂರಿನಲ್ಲಿ ಮೋದಿ ರೋಡ್ ಶೋಗಾಗಿ ಜನರ ದಾಹ ತಣಿಸಲು ಅಲ್ಲಲ್ಲಿ ನೀರು, ಕಲ್ಲಂಗಡಿ ಜ್ಯೂಸ್, ಮಜ್ಜಿಗೆಯ ವ್ಯವಸ್ಥೆ ಮಾಡಲಾಗಿತ್ತು. ಜನರ ಆರೋಗ್ಯದಲ್ಲಿ ಏನಾದರೂ ಏರುಪೇರು ಆದರೆ ಚಿಕಿತ್ಸೆ ನೀಡಲು ಅಲ್ಲಲ್ಲಿ ಆರೋಗ್ಯ ಕೌಂಟರ್‌ಗಳ ವ್ಯವಸ್ಥೆ ಮಾಡಲಾಗಿತ್ತು. ರೋಡ್ ಶೋ ಆರಂಭಕ್ಕೂ ಮೊದಲೇ ಮಂತ್ರಘೋಷಗಳ ಜತೆಗೆ ಮೋದಿ, ಬಿಜೆಪಿ ಪರವಾದ ಘೋಷಣೆಗಳು ಸಾರ್ವಜನಿಕರಲ್ಲಿ ಹುಮ್ಮಸ್ಸು ತುಂಬಿಸಿತು.ಪ್ರಧಾನಿಗೆ ಬಿಗಿ ಭದ್ರತೆರೋಡ್ ಶೋನಲ್ಲಿ ಎಲ್ಲೂ ಅವಘಡ ಸಂಭವಿಸದಂತೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಎರಡು ಕಿ.ಮೀ. ಉದ್ದಕ್ಕೂ ರಸ್ತೆಯ ಎರಡು ಕಡೆಯಲ್ಲೂ ಪೂರ್ಣ ರೂಪದಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು. ರಸ್ತೆಯ ಆಚೆಕಡೆ ಒಮ್ಮೆ ಹೋದವರು ಈಚೆ ಕಡೆ ಬರುವಂತಿರಲಿಲ್ಲ. ರೋಡ್ ಶೋ ನಡೆಯುವ ಹಾದಿ ಸಂಪೂರ್ಣ ನಿರ್ಜನವಾಗಿತ್ತು. ಬ್ಯಾರಿಕೇಡ್ ಉದ್ದಕ್ಕೂ ಕೇಸರಿಮಯವಾಗಿತ್ತು. ಜನಸಂದಣಿಯನ್ನು ನಿಯಂತ್ರಣ ಮಾಡಲು ನೂರಾರು ಪೊಲೀಸರು ಕಾರ್ಯ ನಿರ್ವಹಿಸಿದರು. ಅಗತ್ಯವಿದ್ದ ಕಡೆಗಳಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿತ್ತು.ಪರದಾಡಿದ ವಾಹನ ಸವಾರರು
ಹುಲಿ ವೇಷ, ಯಕ್ಷಗಾನ ಮೆರುಗು