ಹನೂರು: ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಕಾವೇರಿ ವನ್ಯಧಾಮದ ಕರಡಿ ಸೀಳು ಕಡಿದಾದ ಎತ್ತರದ ಗುಡ್ಡದಲ್ಲಿ ನಡೆದ ಮೂವರು ಬೇಟೆಗಾರರ ಎನ್‌ಕೌಂಟರ್ ಪ್ರಕರಣದ ನಂತರ ಅರಣ್ಯ ಇಲಾಖೆಯನ್ನೇ ಗುರಿಯಾಗಿಸಿಕೊಂಡು ಕಾಡುಗಳ್ಳರು ಬೂದಿಕೆರೆಯಿಂದ ತೋಮಿಯಾರ್‌ಪಾಳ್ಯದವರೆಗೆ ಅಟ್ಟಹಾಸ ಮೆರೆದಿದ್ದಾರೆ.
ಬೇಟೆಗಾರರ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಬೇಟೆಗಾರರು ದಾಳಿ ಮಾಡಲು ಮುಂದಾದ ಸಂದರ್ಭದಲ್ಲಿ
ರಕ್ಷಣೆಗಾಗಿ ಎನ್‌ಕೌಂಟರ್ ನಡೆದಿದೆ ಎನ್ನಲಾಗಿದೆ.ಎಲ್ಲೆಲ್ಲಿ ಏನೇನು?
1. ತೋಮಿಯಾರ್‌ಪಾಳ್ಯ ಸೋಲಾರ್ ಫೆನ್ಸಿಂಗ್ ಗೇಟ್ ಪುಡಿಪುಡಿ -ಇದೇ ಷಡ್ಯಂತ್ರದ ಮೊದಲ ಹೆಜ್ಜೆ: ಕಾಡಿನಿಂದ ನಾಡಿಗೆ ಕಾಡಾನೆಗಳು ಬರಬಾರದು ಎಂದು ಅರಣ್ಯ ಇಲಾಖೆ ತೊಮಿಯಾರ್‌ಪಾಳ್ಯ ಬಳಿ ಅಳವಡಿಸಿದ್ದ ಸೋಲಾರ್ ಫೆನ್ಸಿಂಗ್ ಕಬ್ಬಿಣದ ಗೇಟ್ ಅನ್ನು ದುಷ್ಕರ್ಮಿಗಳು ಧ್ವಂಸ ಮಾಡಿ ಪುಡಿಪುಡಿ ಮಾಡಿದ್ದಾರೆ. ಇದು ಕಾಡು ಮತ್ತು ನಾಡಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಗೇಟ್. ಈ ಗೇಟ್ ತೆರೆದರೆ ಕಾಡುಪ್ರಾಣಿಗಳು ನೇರವಾಗಿ ಹಳ್ಳಿಗಳಿಗೆ ನುಗ್ಗುತ್ತವೆ. ಆಗ ಅನಿವಾರ್ಯವಾಗಿ ಅರಣ್ಯ ಸಿಬ್ಬಂದಿ ಗ್ರಾಮದೊಳಗೆ ಬರಲೇಬೇಕು. ಹಾಗೆ ಬಂದಾಗ ಅವರ ಮೇಲೆ ದಾಳಿ ಮಾಡುವುದೇ ಇವರ ಹುನ್ನಾರ ವಾಗಿದೆ.
ಎನ್‌ಕೌಂಟರ್ ನಂತರ ದುಷ್ಕರ್ಮಿಗಳು ಗುಂಪು ಕಟ್ಟಿಕೊಂಡು ಬೂದಿಕೆರೆ ಅರಣ್ಯದ ಕಳ್ಳಬೇಟೆ ತಡೆ ಶಿಬಿರಕ್ಕೆ ನುಗ್ಗಿದ್ದಾರೆ. ಅಲ್ಲೇ ಮದ್ಯ ಸೇವಿಸಿ, ಕಂಠಪೂರ್ತಿ ಕುಡಿದು ಟೈಟ್ ಆಗಿ ವಸ್ತುಗಳನ್ನಲ್ಲ ನಾಶಪಡಿಸಿದ್ದಾರೆ.
ಬೂದಿಕೆರೆ ಕ್ಯಾಂಪ್ ನಲ್ಲಿ ಕರ್ತವ್ಯಕ್ಕೆ ಬಳಸುತ್ತಿದ್ದ ವಾಕಿ-ಟಾಕಿ, ಸೋಲಾರ್ ಟಾರ್ಚ್, ಬೆಂಕಿ ನಂದಿಸುವ ಉಪಕರಣಗಳನ್ನು ಸಂಪೂರ್ಣವಾಗಿ ಒಡೆದು ಹಾಕಿದ್ದಾರೆ.
4,. ಜಿಲೆಟಿನ್ ಬಳಸಿ ಸ್ಫೋಟ - ಲಕ್ಷಾಂತರ ರೂ. ನಷ್ಟ
ಮಾಜಿಸ್ಟ್ರೇಟ್ ತನಿಖೆ ಮತ್ತು ಪೊಲೀಸ್ ಕ್ರಮ:
ತನಿಖಾ ವರದಿಯಲ್ಲಿ ಏನಿದೆ ?
ದುಷ್ಕೃತ್ಯಗಳ ದಿನನಿತ್ಯ ಒಂದಲ್ಲ ಒಂದು ಕಡೆ ರಿವಿಲ್ ಆಗುತ್ತಿದೆ ಇದರಿಂದಾಗಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ತಲೆ ನೋವಾಗಿರುವ ಪ್ರಕರಣವನ್ನು ಸರ್ಕಾರ ಹಾಗೂ ಅರಣ್ಯ ಇಲಾಖೆ ಸಚಿವರು ಸೇರಿದಂತೆ ಜನಪ್ರತಿನಿಧಿಗಳು ಹಿರಿಯ ಅಧಿಕಾರಿಗಳು ಅರಣ್ಯದಂಚಿನ ಭಾಗಗಳಲ್ಲಿ ಶಾಂತಿ ಸಭೆ ನಡೆಸಿ ಪ್ರಕರಣಕ್ಕೆ ನಾಂದಿ ಹಾಡಿದರೆ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ. ಒಟ್ಟಾರೆ, ಮೂವರು ಬೇಟೆಗಾರರ ಎನ್‌ಕೌಂಟರ್ ನಂತರ ನಡೆಯುತ್ತಿರುವುದು ಕೇವಲ ಆಕ್ರೋಶದ ಜೊತೆಗೆ ಅರಣ್ಯದಲ್ಲಿ ಬೇಟೆ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಟಾರ್ಗೆಟ್ ಮಾಡಿಕೊಂಡು ನಡೆಸುತ್ತಿರುವ ವ್ಯವಸ್ಥಿತ ಷಡ್ಯಂತ್ರ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ.23ಸಿಎಚ್ಎನ್5
ಕಾವೇರಿ ವನ್ಯಧಾಮದಲ್ಲಿ ಆ. 15 ರಂದು ಅರಣ್ಯ ಇಲಾಖೆ ನಡೆಸಿದ ಎನ್‌ಕೌಂಟರ್ ನಡೆಸಿದ ಸ್ಧಳ.23ಸಿಎಚ್ಎನ್6
ಕಾವೇರಿ ವನ್ಯಧಾಮಲ್ಲಿ ಎನ್‌ಕೌಂಟರ್ ನಡೆದ ಕರಡಿಗುಡ್ಡ ಸೀಳು ಎತ್ತರದ ಅರಣ್ಯ ಪ್ರದೇಶದ ಚಿತ್ರಣ.