ಮಕ್ಕಳ ಹಿತಾಸಕ್ತಿ, ಒಳಿತಿಗಾಗಿ ಪೋಕ್ಸೋ ಕಾಯ್ದೆ

KannadaprabhaNewsNetwork |  
Published : Jul 18, 2024, 01:38 AM IST
ಪೋಕ್ಸೋ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಅಥಣಿ ಪೋಕ್ಸೋ ಕಾಯ್ದೆಯನ್ನು ಲೈಂಗಿಕ ಕಿರುಕುಳ ಮತ್ತು ಅಶ್ಲೀಲ ವರ್ತನೆಗಳಂತಹ ಕೃತ್ಯಗಳಿಂದ ಮಕ್ಕಳನ್ನು ರಕ್ಷಿಸುವುದಕ್ಕಾಗಿ, ಮಕ್ಕಳ ಹಿತಾಸಕ್ತಿ ಮತ್ತು ಒಳಿತಿನ ರಕ್ಷಣೆಗಾಗಿ ಈ ಕಾಯಿದೆಯನ್ನು ಜಾರಿಗೆ ತರಲಾಗಿದೆ ಎಂದು ಹಿರಿಯ ನ್ಯಾಯವಾದಿ ಬಾಹುಸಾಹೇಬ ಕಾಂಬಳೆ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಪೋಕ್ಸೋ ಕಾಯ್ದೆಯನ್ನು ಲೈಂಗಿಕ ಕಿರುಕುಳ ಮತ್ತು ಅಶ್ಲೀಲ ವರ್ತನೆಗಳಂತಹ ಕೃತ್ಯಗಳಿಂದ ಮಕ್ಕಳನ್ನು ರಕ್ಷಿಸುವುದಕ್ಕಾಗಿ, ಮಕ್ಕಳ ಹಿತಾಸಕ್ತಿ ಮತ್ತು ಒಳಿತಿನ ರಕ್ಷಣೆಗಾಗಿ ಈ ಕಾಯಿದೆಯನ್ನು ಜಾರಿಗೆ ತರಲಾಗಿದೆ ಎಂದು ಹಿರಿಯ ನ್ಯಾಯವಾದಿ ಬಾಹುಸಾಹೇಬ ಕಾಂಬಳೆ ಹೇಳಿದರು.

ಸ್ಥಳೀಯ ಕೆಎಲ್ಇ ಸಂಸ್ಥೆಯ ಸಿ.ಬಿ.ರಣಮೋಡೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪೋಕ್ಸೋ ಕಾಯ್ದೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಇಂದಿನ ಆಧುನಿಕ ಯುಗದಲ್ಲಿ ಯಾರೊಬ್ಬರೂ ಸುರಕ್ಷಿತರಲ್ಲ, ಮನೆಯಿಂದ ಹೊರಹೋದವರು ಮತ್ತೆ ಯಾವಾಗ ವಾಪಸ್ ಬರುತ್ತಾರೆ ಎನ್ನುವ ಭರವಸೆ ಇಲ್ಲ. ಇತ್ತ ಮನೆಯಲ್ಲೇ ಇದ್ದವರೂ ಸುರಕ್ಷಿತವಾಗಿರುತ್ತಾರೆ ಅಂತ ನಂಬುವುದಕ್ಕೂ ಆಗುವುದಿಲ್ಲ. ಇನ್ನು ಮಕ್ಕಳ ಸ್ಥಿತಿಯಂತೂ ಹೇಳಿಕೊಳ್ಳುವುದೇ ಬೇಡ. ಮಕ್ಕಳು ಹೊರಗಿನ ಅಪರಿಚಿತ ವ್ಯಕ್ತಿಗಳಿಂದಷ್ಟೇ ಅಲ್ಲ, ಮನೆಯೊಳಗೇ ಇರುವ ಪರಿಚಿತ ವ್ಯಕ್ತಿಗಳಿಂದಲೂ ವಿವಿಧ ರೀತಿಯ ದೌರ್ಜನ್ಯಕ್ಕೆ, ಮಾನಸಿಕ, ದೈಹಿಕ ಕಿರುಕುಳಕ್ಕೆ ಒಳಗಾಗುತ್ತಾರೆ. ಹೀಗೆ ಮಕ್ಕಳ ಮೇಲೆ ನಡೆಯುವ ಲೈಂಗಿಕ ಹಾಗೂ ಇತರೇ ಪ್ರಕಾರದ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ 2012ರಲ್ಲಿ ಜಾರಿಗೆ ಬಂದಿದ್ದೇ ಪೋಕ್ಸೋ ಕಾಯ್ದೆ. ಈ ಕಾಯ್ದೆಯು 18 ವರ್ಷಕ್ಕಿಂತ ಒಳಗಿನ ವಯಸ್ಸಿನ ವ್ಯಕ್ತಿಯನ್ನು ಮಗು ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಚಾರ್ಯ ಜಗದೀಶ ಹವಾಲ್ದಾರ ಮಾತನಾಡಿ, 2012 ರಲ್ಲಿ ಈ ಪೋಕ್ಸೋ ಕಾಯ್ದೆ ಜಾರಿಗೆ ಬಂದಿದ್ದು, ಅನೇಕ ಮಕ್ಕಳಿಗೆ ಈ ಕಾಯ್ದೆಯ ಬಗ್ಗೆ ಇನ್ನೂ ತಿಳುವಳಿಕೆ ಇಲ್ಲ. ಪ್ರತಿ ಮಕ್ಕಳಿಗೂ ಈ ಕಾಯ್ದೆಯ ಬಗ್ಗೆ ಅರಿವು ಮೂಡಿಸುವುದು ಈ ಜಾಗೃತಿ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.ಈ ವೇಳೆ ಶಾಲೆಯ ಶಿಕ್ಷಕರು, ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು ಮುಂತಾದವರು ಉಪಸ್ಥಿರಿದ್ದರು. ಸಿದ್ಧಾರೂಢ ಇಮಗೌಡರ ಸ್ವಾಗತಿಸಿ ನಿರೂಪಿಸಿದರು. ಅನೀಲ ಪಾಟೀಲ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!