ಲಕ್ಷ್ಮೇಶ್ವರ: ಸುಂದರ ಕವಿತೆಗಳು ಮನಸ್ಸಿನ ಭಾವನೆಗಳೇ ಆಗಿದೆ. ಭಾವನೆ, ವಿಡಂಬನೆ, ವಾಸ್ತವ ಮತ್ತು ಕಲ್ಪನೆಗಳ ಸಮ್ಮಿಲನವೇ ಕವಿತೆ ಹಾಗೂ ಕವಿತೆಯ ತಿರುಳು ಎಂದು ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ತಿಳಿಸಿದರು.
ಶಿಗ್ಗಾಂವಿಯ ವಿರಕ್ತಮಠದ ಸಂಗನಬಸವ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಕವಿತೆಗಳು ವ್ಯಕ್ತಿತ್ವವನ್ನು ಅಭಿವ್ಯಕ್ತಿಗೊಳಿಸುವ ಕಲೆಯಾಗಿದೆ. ಭಾವನೆಗಳಿಗೆ ಶಬ್ದಗಳ ಬಲೆ ಹೆಣಿದು ಸುಂದರವಾಗಿ ಕಾಣುವಂತೆ ಮಾಡಿ ಗೇಯತೆಗೆ ತೊಡಗಿಸುವ ಕಾರ್ಯ ಅದ್ಭುತ ಎಂದು ಹೇಳಿದರು.
ಸುಮಾ ಚೋಟಗಲ್ಲ ಸ್ವರಚಿತ ಕವನ ವಾಚನ ಮಾಡಿದರು. ಎಸ್.ಬಿ. ಮುಳ್ಳಳ್ಳಿ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಎಸ್.ಪಿ. ಬಳಿಗಾರ, ಸಿ.ಜಿ. ಹಿರೇಮಠ, ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ, ಫಕ್ಕಿರೇಶ ಮ್ಯಾಟಣ್ಣವರ, ಬಸವರಾಜ ದೊಡ್ಡಮನಿ, ಎಸ್.ಎಫ್. ಕೊಡ್ಲಿ, ರಾಜು ಪಾಟೀಲ್, ಸುವರ್ಣ ನಂದಿಕೋಲಮಠ, ಪುರ್ಣಾಜಿ ಕರಾಟೆ ಇದ್ದರು.ಸಾಹಿತಿ ಡಾ. ಮಂಜುನಾಥ ಬೊಮ್ಮನಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿರಾಜ ಶಿಗ್ಲಿ ಪ್ರಾರ್ಥನೆ ಸಲ್ಲಿಸಿದರು. ಬಸವರಾಜ ಬಾಳೇಶ್ವರಮಠ ಕಾರ್ಯಕ್ರಮ ನಿರ್ವಹಿಸಿದರು.