ಗದಗ: ಕುಮಾರವ್ಯಾಸನ ಗದುಗಿನ ಭಾರತ ಗಮಕಿಗಳಿಗೊಂದು ಹೃದ್ಯ ಕಾವ್ಯ, ಇದು ಭಾಮಿನಿ ಷಟ್ಪದಿಯಲ್ಲಿರುವುದು ಮತ್ತು ಕನ್ನಡ ನಾಡಿನ ಎಲ್ಲ ಪ್ರಾಂತ್ಯದ ಮತ್ತು ವರ್ಗದ ಶ್ರೀಸಾಮಾನ್ಯ ಜನರನ್ನು ಮುಟ್ಟುವ ಅವರ ಹೃದಯವನ್ನು ತಟ್ಟುವ ಕಾವ್ಯವಾಗಿದೆ. ಇಂದಿಗೂ ಸಾಂಸ್ಕೃತಿಕ ಪ್ರಸ್ತುತತೆಯ ಚಿರಂತನ ಕಾವ್ಯವಾಗಿ ಅಮರವಾಗಿದೆ ಎಂದು ವೀರನಾರಾಯಣ ಹಾಗೂ ತ್ರಿಕೂಟೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಡಾ. ಕುಶಾಲ ಗೋಡಖಿಂಡಿ ತಿಳಿಸಿದರು.
ಸಮಾರಂಭದಲ್ಲಿ ವಿಜಯನಗರ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಯತ್ನಳ್ಳಿ ಮಲ್ಲಯ್ಯ, ಹೊಸಪೇಟೆಯ ಖಜಾನೆ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಕೆ. ವೆಂಕಟೇಶಮೂರ್ತಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ನಿವೃತ್ತ ಪ್ರಾಧ್ಯಾಪಕ ಡಾ. ಆರ್.ಆರ್. ಜೋಶಿ, ಹಿರಿಯ ಸಾಂಸ್ಕೃತಿಕ ಚಿಂತಕ ಡಾ. ಜಿ.ಬಿ. ಪಾಟೀಲ, ಸಂಸ್ಕಾರ ಭಾರತಿ ಪ್ರಮುಖರಾದ ಶ್ರೀನಿವಾಸ ಜಿ. ವಿಶೇಷ ಆಮಂತ್ರಿತರಾಗಿ ಪಾಲ್ಗೊಂಡಿದ್ದರು. ಕುಮಾರವ್ಯಾಸ ಪ್ರತಿಷ್ಠಾನದ ಅಧ್ಯಕ್ಷ ಗುರುಮೂರ್ತಿ ದೇಶಪಾಂಡೆ, ವಿಜಯನಗರ ಜಿಲ್ಲೆಯ ಗಮಕ ಕಲಾ ಪರಿಷತ್ ಜಿಲ್ಲಾಧ್ಯಕ್ಷ ಪಲ್ಲವಿ ಭಟ್ ಉಪಸ್ಥಿತರಿದ್ದರು. ಐಶ್ವರ್ಯ ಹೂಲಿ ಪ್ರಾರ್ಥಿಸಿದರು. ನಂದಾ ಜಹಾಗೀರದಾರ ಸ್ವಾಗತಿಸಿದರು. ವಿಜಯನಗರ ಗಮಕ ಕಲಾ ಪರಿಷತ್‌ನ ಕಾರ್ಯದರ್ಶಿ ಡಿ. ವಿಶ್ವನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಪ್ರೊ. ಅನಿಲ ವೈದ್ಯ ವಂದಿಸಿದರು.
ದ್ರೋಣ ಪ್ರತಿಜ್ಞೆ ಪ್ರಸಂಗ ಕುರಿತು ಪಲ್ಲವಿ ಭಟ್ ವಾಚನ ಮತ್ತು ವಿದ್ಯಾಶ್ರೀ ಸಿದ್ದೇಶ ವ್ಯಾಖ್ಯಾನಗೈದರು ಕರ್ಣ ಜನನ ಪ್ರಸಂಗ ಕುರಿತು ಚಿತ್ರಾ ಶಾಸ್ತ್ರಿ ವಾಚನ ಮತ್ತು ರಂಗನಾಥ ಶಾಸ್ತ್ರಿ ವ್ಯಾಖ್ಯಾನಗೈದರು. ಉತ್ತರನ ಪೌರುಷ ಕುರಿತು ರೇಖಾ ಅಶ್ವಥ್ ವಾಚನ ಮತ್ತು ಲಕ್ಷ್ಮೀ ಕರಣಂ ವ್ಯಾಖ್ಯಾನಗೈದರು. ವಿಶ್ವರೂಪದರ್ಶನ ಪ್ರಸಂಗ ಕುರಿತು ವಿಧಾತ್ರಿ ಶಾಸ್ತ್ರಿ ಮತ್ತು ವಿಶ್ವನಾಥ ವ್ಯಾಖ್ಯಾನ ಮಾತನಾಡಿದರು. ಸಮಾರಂಭದಲ್ಲಿ ರವೀಂದ್ರ ಜೋಶಿ, ಆರ್.ಎಸ್. ಕುಲಕರ್ಣಿ, ಹೇಮಂತ ಕುಲಕರ್ಣಿ, ಕೃಷ್ಣಾ ನಾಡಿಗೇರ, ಸಂತೋಷ ಕುಲಕರ್ಣಿ, ಪ್ರಲ್ಹಾದ ಆಚಾರ್ಯ ನೀಲುಗಲ್ಲ, ಕಿಶೋರಬಾಬು ನಾಗರಕಟ್ಟಿ, ಡಿ.ಎಸ್. ಬಾಪುರೆ, ರಾಮಚಂದ್ರ ಮೋನೆ, ವಾಸುದೇವಾಚಾರ್ಯ ಹೂಲಿ, ಶ್ರೀಕಾಂತ ಹೂಲಿ, ಕಲಾವತಿ ಅಲಬೂರ, ಸುಮನ್ ಪಾಟೀಲ, ಗಿರೀಶ ಪಂತರ, ಸಿ.ಕೆ. ಕಡಣಿಶಾಸ್ತ್ರಿ, ಪ್ರಶಾಂತ ಪಾಟೀಲ, ಶ್ರೀಪಾದನಾಯ್ಕ ತಮ್ಮಣ್ಣವರ, ರಾಹುಲ ಗಿಡ್ನಂದಿ, ಎಸ್.ಎಲ್. ಕುಲಕರ್ಣಿ ಸೇರಿದಂತೆ ಅನೇಕರು ಇದ್ದರು.