ಮನಸ್ಸಿಗೆ ತಟ್ಟುವ ಶಕ್ತಿ ಚುಟುಕು ಸಾಹಿತ್ಯಕ್ಕಿದೆ

KannadaprabhaNewsNetwork | Published : Feb 19, 2024 1:34 AM

ಸಾರಾಂಶ

ಚುಟುಕುಗಳೆಂಬ ನಿಗದಿತ ಸಾಲುಗಳಲ್ಲಿ ಪ್ರಾಸವಿಲ್ಲದಿದ್ದರೂ ಪರಿಣಾಮಕಾರಿಯಾಗಿ ಮನಸಿಗೆ ತಟ್ಟುತ್ತದೆ, ಆದರೂ, ಚುಟುಕುಗಳು ಹಲವರನ್ನು ಕುಟುಕಿದ ಕೊಂಡಿಯಾಗಿ ಸಮಾಜದ ಜಾಗೃತಿಗೆ ಕಾರಣವಾಗಿದೆ

ಕನ್ನಡಪ್ರಭ ವಾರ್ತೆ ಕೋಲಾರ

ಎಲ್ಲ ಸಾಹಿತ್ಯ ಪ್ರಾಕಾರಗಳ ಆರಂಭವೇ ‘ಚುಟುಕು’ ಎಂದು ಸಾಹಿತಿ ವಿಮರ್ಶಕ ಡಾ.ಎಚ್.ಎಸ್. ಸತ್ಯನಾರಾಯಣ ಹೇಳಿದರು.

ನಗರದ ಕನ್ನಡ ಭವನದ ಡಾ.ಕೆ.ಎಂ.ಜೆ.ಮೌನಿ ವೇದಿಕೆಯಲ್ಲಿ ೬ನೇ ಚುಟುಕು ಸಾಹಿತ್ಯ ಸಮ್ಮೇಳನ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಮನಸ್ಸಿಗೆ ತಟ್ಟುವ ಚುಟುಕುಚುಟುಕುಗಳೆಂಬ ನಿಗದಿತ ಸಾಲುಗಳಲ್ಲಿ ಪ್ರಾಸವಿಲ್ಲದಿದ್ದರೂ ಪರಿಣಾಮಕಾರಿಯಾಗಿ ಮನಸಿಗೆ ತಟ್ಟುತ್ತದೆ, ಚುಟುಕುಗಳಲ್ಲಿ ಎಲ್ಲ ಪ್ರಾಕಾರಗಳ ವಿಷಯ ಅಡಗಿರುತ್ತದೆ, ಹನಿಗವಿತೆಗಳಲ್ಲಿ ಪಂಚ್ ಹಾಗೂ ಫನ್ ಇರಬೇಕೆಂಬ ನಿಯಮವಿದೆ, ಆದರೂ, ಚುಟುಕುಗಳು ಹಲವರನ್ನು ಕುಟುಕಿದ ಕೊಂಡಿಯಾಗಿ ಸಮಾಜದ ಜಾಗೃತಿಗೆ ಕಾರಣವಾಗಿದೆಯೆಂದು ವಿವಿಧ ಸಾಹಿತಿಗಳ ಚುಟುಕುಗಳನ್ನು ಪ್ರಾಸ್ತಾಪಿಸಿದರು.

ಸಮ್ಮೇಳನಾಧ್ಯಕ್ಷ ಜಿ. ಶ್ರೀನಿವಾಸ್ ಮಾತನಾಡಿ, ಚುಟುಕುಗಳನ್ನು ಸಾಹಿತ್ಯ ಲೋಕ ಕಡೆಗಣ್ಣಿನಿಂದ ನೋಡುವುದು ಸರಿಯಲ್ಲ, ಪ್ರತಿ ಸಾಹಿತ್ಯ ಸಮ್ಮೇಳನದಲ್ಲಿಯೂ ಚುಟುಕು ವಾಚನಗಳಿಗೆ ಪ್ರತ್ಯೇಕ ಗೋಷ್ಠಿ ಇರಬೇಕು, ಯುವಪೀಳಿಗೆ ಸಾಹಿತ್ಯ ರಚನಗೆ ಪ್ರೇರೇಪಿಸಬೇಕು ಎಂದು ಪ್ರತಿಪಾದಿಸಿದರು.

ಪ್ರತಿಯೊಬ್ಬರೂ ಚುಟುಕು ಕವಿಗಳು

ಚಿತ್ರನಟಿ ಚೈತ್ರಾ ಕೋಟೂರು ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಚುಟುಕುಗಳನ್ನು ಬರೆದಿರುತ್ತಾನೆ, ಅದರಲ್ಲೂ ಅವರ ಮೊದಲ ಕವಿತೆ ಪ್ರೇಮಕವಿತೆಯೇ ಆಗಿರುತ್ತದೆ, ಕೋಲಾರದ ಚುಟುಕು ಸಾಹಿತ್ಯ ಪರಿಷತ್ ಅನೇಕ ಮೈಲಿಗಲ್ಲುಗಳನ್ನು ದಾಟಿ ಬಂದಿದೆಯೆಂದರು.

ಇದೇ ಸಂದರ್ಭದಲ್ಲಿ ಚುಟುಕು ಸಾಹಿತ್ಯ ಪರಿಷತ್ ಸಂಸ್ಥಾಪಕ ಡಾ.ಕೆ.ಎಂ.ಜೆ. ಮೌನಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಡಾ.ರಾಧಾ ಡಾ.ಪ್ರಕಾಶ, ಹಣಬೆ ನಾ. ಪಾಪೇಗೌಡ ಮತ್ತು ಕೃಪಾಕರ ರೆಡ್ಡಿ ಅವರ ಕೃತಿಗಳ ಲೋಕಾರ್ಪಣೆ ಮಾಡಿ, ಕೃತಿಕಾರರನ್ನು ಸನ್ಮಾನಿಸಲಾಯಿತು.ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪಿ. ನಾರಾಯಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್,

ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ಶಿವಕುಮಾರ್, ಅಂಚೆ ಇಲಾಖೆಯ ಎಸ್. ಶಶಿಕುಮಾರ್, ಕೋ.ನಾ. ಪರಮೇಶ್ವರನ್, ಡಿ. ಶಿವಶಂಕರ್, ಎಪಿಎಂಸಿ ಮಾರುಕಟ್ಟೆ ಕಾರ್ಯದರ್ಶಿ ವಿಜಯಲಕ್ಷ್ಮಿ, ಚಿಕ್ಕಬಳ್ಳಾಪುರ ಜಿಲ್ಲೆ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಚಲಪತಿ ಇದ್ದರು.

Share this article