ಕಾವ್ಯ ಎಂಬುದು ಓದುಗರು, ಸಮಾಜದ ವಸ್ತು: ಡಾ.ಗಿರಿಜಾಪತಿ

KannadaprabhaNewsNetwork |  
Published : Sep 01, 2025, 01:03 AM IST
31 HRR. 01& 01Aಹರಿಹರದ ಗಾಂಧಿ ಮೈದಾನದಲ್ಲಿ ಭಾನುವಾರ ಶ್ರೀ ಸಾರ್ವಜನಿಕ ವಿನಾಯಕ ಸಂಘದ ವತಿಯಿಂದ 63 ನೇ ವರ್ಷದ ಗಣೇಶೋತ್ಸವದಲ್ಲಿ ಸೌಹಾರ್ದ ಕವಿಗೊಷ್ಠಿ ಸಮಾರಂಭದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ ಕವಿಗಳು ಕವನ ವಾಚಿಸಿದರು. | Kannada Prabha

ಸಾರಾಂಶ

ಕಾವ್ಯವು ನೆಲ, ಜಲ, ಭಾಷೆ ಹಾಗೂ ಸಂಸ್ಕಾರ, ಸಂಸ್ಕೃತಿಯ ಚೈತನ್ಯವನ್ನು ಹೊಂದಿರಬೇಕು ಎಂದು ಹಿರಿಯ ಸಾಹಿತಿ ಡಾ. ಎಂ.ಎನ್. ಗಿರಿಜಾಪತಿ ಅಭಿಪ್ರಾಯಪಟ್ಟಿದ್ದಾರೆ.

ಶ್ರೀ ಸಾರ್ವಜನಿಕ ವಿನಾಯಕ ಸಂಘ ಗಣೇಶೋತ್ಸವದಲ್ಲಿ ಸೌಹಾರ್ದ ಕವಿಗೋಷ್ಠಿ

- - -

ಕನ್ನಡಪ್ರಭ ವಾರ್ತೆ ಹರಿಹರ

ಕಾವ್ಯವು ನೆಲ, ಜಲ, ಭಾಷೆ ಹಾಗೂ ಸಂಸ್ಕಾರ, ಸಂಸ್ಕೃತಿಯ ಚೈತನ್ಯವನ್ನು ಹೊಂದಿರಬೇಕು ಎಂದು ಹಿರಿಯ ಸಾಹಿತಿ ಡಾ. ಎಂ.ಎನ್. ಗಿರಿಜಾಪತಿ ಅಭಿಪ್ರಾಯಪಟ್ಟರು.

ನಗರದ ಗಾಂಧಿ ಮೈದಾನದಲ್ಲಿ ಭಾನುವಾರ ಶ್ರೀ ಸಾರ್ವಜನಿಕ ವಿನಾಯಕ ಸಂಘದ ವತಿಯಿಂದ 63ನೇ ವರ್ಷದ ಗಣೇಶೋತ್ಸವದಲ್ಲಿ ಸೌಹಾರ್ದ ಕವಿಗೋಷ್ಠಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕವಿಗೋಷ್ಠಿ ಎಂದರೆ ಕಾವ್ಯದ ಗಂಗೆ ಇದ್ದಂತೆ. ಕಾವ್ಯ ಎಂಬುದು ಕವಿಯ ಸೊತ್ತಲ್ಲ, ಅದು ಓದುಗರ ಮತ್ತು ಸಮಾಜದ ವಸ್ತುವಾಗಿದೆ. ಕಾವ್ಯ ಸೃಜನಶೀಲತೆಗೆ ಪ್ರೇರಣೆಯಾಗಿದೆ. ಎಲ್ಲ ಜೀವಾತ್ಮರ ಲೇಸನ್ನು ಬಯಸುವ ಹಂಬಲವನ್ನು ಕಾವ್ಯ ಹೊಂದಿದೆ. ಕವಿಗೆ ಸೂಕ್ಷ್ಮ ದೃಷ್ಟಿ ಇರಬೇಕು. ಜೀವನದಲ್ಲಿ ಯಶಸ್ವಿಯಾಗಲು ಉಪದ್ರವಗಳ ಮೇಲೆ ಸವಾರಿ ಮಾಡಬೇಕು. ಇದರಿಂದ ಜೀವನದ ಯಶಸ್ವಿ ಸೂತ್ರವಾಗತ್ತದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಸ್.ಎಚ್. ಹೂಗಾರ್ ಮಾತನಾಡಿ, ಗಣೇಶೋತ್ಸವ ಆಚರಣೆಯಲ್ಲಿ ಪ್ರಥಮ ಬಾರಿಗೆ ಕವಿಗೋಷ್ಠಿ ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಕವಿಗೋಷ್ಠಿ ಕಾರ್ಯಕ್ರಮ ಮಾಡಿದ್ದರಿಂದ ಸಾಹಿತಿಗಳು ಗಣೇಶೋತ್ಸವ ಸಮಾರಂಭದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಿದಂತಾಗಿದೆ. ಜೊತೆಗೆ ನಗರದ ಹಲವಾರು ಸಂಘಟಕರು ಇಂತಹ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರೇರಣೆಯಾಗಿದೆ ಎಂದರು.

ಸಾರ್ವಜನಿಕ ವಿನಾಯಕ ಮಹೋತ್ಸವ ಸಮಿತಿ ಅಧ್ಯಕ್ಷ ಎಂ.ಬಿ. ಅಣ್ಣಪ್ಪ, ಸಾರ್ವಜನಿಕರಿಗೆ ಸಾರ್ಥಕವಾಗುವಂತಹ ಕಾರ್ಯಕ್ರಮ ಮಾಡಿದಾಗ ಹಬ್ಬದ ಆಚರಣೆ ಸಾರ್ಥಕವಾಗುತ್ತದೆ. ಇಂದಿನ ಕವಿಗೋಷ್ಠಿಯಲ್ಲಿ ಸಾಮಾಜಿಕ, ಶೈಕ್ಷಣಿಕ ರೈತರ ಮತ್ತು ಪರಿಸರಕ್ಕೆ ಪೂರಕವಾದ ಕವಿತೆಗಳನ್ನು ವಾಚನ ಮಾಡಿದ್ದು ಸಮಾಜದಲ್ಲಿ ಜ್ಞಾನಕ್ಕೆ ಬೆಳಕು ನೀಡಿದಂತಾಗಿದೆ ಎಂದರು.

ಈ ವೇಳೆ ಕವಿಗಳಾದ ಮಹಾಲಕ್ಷ್ಮೀ ಎಂ. ಪೂಜಾರ್, ಯು.ಕೆ.ಅಣ್ಣಪ್ಪ ಭಾನುವಳ್ಳಿ, ಕೆ.ಬಸವರಾಜ್ ಉಕ್ಕಡಗಾತ್ರಿ, ಎಂ.ರಾಧ ಹನುಮಂತಪ್ಪ, ವಿ.ಬಿ. ಕೊಟ್ರೇಶ್, ಮಾಲತೇಶ್ ಎಂ.ಆರ್. ಗಾಯಿತ್ರಿ, ಜಿ.ಎಸ್. ಪರಮೇಶ್ವರಪ್ಪ ಕತ್ತಿಗೆ, ಡಾ. ಫ್ರಾನ್ಸಿಸ್ ಕ್ಸೇವಿಯರ್, ಡಾ. ಪಿ.ವೀಣಾ, ಮಂಜುನಾಥ್ ಅಗಡಿ, ರೇಣುಕಾ ಕೆ.ಎಂ. ಎಳೆಹೊಳೆ, ವಿ.ಬಿ. ಮಂಜಮ್ಮ, ಬಿ.ಮುಗ್ದಂ, ಎ.ಸಿ. ಮಂಜಪ್ಪ ಕವಿತೆಗಳನ್ನು ವಾಚನ ಮಾಡಿದರು.

ಈ ಸಂದರ್ಭದಲ್ಲಿ ಶ್ರೀ ಸಾರ್ವಜನಿಕ ವಿನಾಯಕ ಸಂಘದ ಉತ್ಸವ ಸಮಿತಿಯ ಖಜಾಂಚಿ ಕೆ.ಬಿ. ರಾಜಶೇಖರ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಂ.ಚಿದಾನಂದ ಕಂಚಿಕೇರಿ, ಕಾರ್ಯದರ್ಶಿ ಸಚಿನ್ ಕೊಂಡಜ್ಜಿ, ಉಪಾಧ್ಯಕ್ಷ ತಿಪ್ಪಣ್ಣ, ಸದಸ್ಯರಾದ ಆಕಾಶ್ ಭೂತೆ, ಮಂಜುನಾಥ್, ವಿಶ್ವಜಿತ್, ಸುರೇಶ್, ಅರ್ಚಕರಾದ ಚಿದಂಬರ, ಲಕ್ಷ್ಮೀಕಾಂತ್ ಜೋಯಿಸ್‌, ಪರಮೇಶ್ವರಪ್ಪ ಕತ್ತಿಗೆ ಹಾಗೂ ಇತರರು ಹಾಜರಿದ್ದರು.

- - -

(ಟಾಪ್‌ ಕೋಟ್‌) ಕವಿಗಳ ಕೈಯಲ್ಲಿ ಯಾವಾಗಲು ಪೆನ್ನು, ಕಾಗದ ಇದ್ದರೇ, ಬರದಂತೆಲ್ಲ ಅದು ಕೃತಿಯಾಗಿ ಮಾರ್ಪಾಡು ಆಗುತ್ತದೆ. ಕಾವ್ಯಕ್ಕೆ ಬದಕಿಸುವ, ಜೀವನ ರೂಪಿಸುವ ಮತ್ತು ಆತ್ಮಸ್ಥೈರ್ಯ ತುಂಬುವಂತಹ ಶಕ್ತಿಯಿದೆ. ಅಧ್ಯಯನಶೀಲತೆ ಮತ್ತು ಮನಸ್ಸಿನ ಭಾವ ಚೆನ್ನಾಗಿ ಇದ್ದಾಗ ಕವಿತೆಗಳು ಚೆನ್ನಾಗಿ ರೂಪಗೊಳ್ಳುತ್ತವೆ.

- ಡಾ. ಎಂ.ಎನ್‌. ಗಿರಿಜಾಪತಿ, ಹಿರಿಯ ಸಾಹಿತಿ

- - -

-31HRR. 01& 01A:

ಹರಿಹರದ ಗಾಂಧಿ ಮೈದಾನದಲ್ಲಿ ಭಾನುವಾರ ಶ್ರೀ ಸಾರ್ವಜನಿಕ ವಿನಾಯಕ ಸಂಘದ ವತಿಯಿಂದ 63 ನೇ ವರ್ಷದ ಗಣೇಶೋತ್ಸವದಲ್ಲಿ ಸೌಹಾರ್ದ ಕವಿಗೋಷ್ಠಿ ಸಮಾರಂಭದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ ಕವಿಗಳು ಕವನ ವಾಚಿಸಿದರು.

PREV

Recommended Stories

ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಆಗಲ್ಲ ಎಂಬ ಸಂದೇಶ ರವಾನೆ!
ಸಿಎಂ ಪುತ್ರನ ಹೇಳಿಕೆಯಿಂದ ರಾಜ್ಯ ರಾಜಕೀಯದಲ್ಲಿ ಸಂಚಲನ