ಕವಿ, ಬರಹಗಾರ ಸಮಾಜದ ನೋವು ನಲಿವುಗಳಿಗೆ ಸ್ಪಂದಿಸಲಿ

KannadaprabhaNewsNetwork |  
Published : Oct 16, 2026, 02:30 AM IST
ಕೊಟ್ಟೂರಿನಲ್ಲಿ ನಡೆದ ಜಿ.ಆರ್.ಬಸವರಾಜೇಶ್ವರಿ ಸರ್ಕಾರಿ ಶಾಲೆಯ ಮುಗ್ಧ ಮನಸ್ಸುಗಳ ಕಥಾ ಸಂಕಲನವನ್ನು ಸಾಹಿತಿ ಭೀಮಣ್ಣ ಗಜಾಪುರ ಮತ್ತಿತರ ಗಣ್ಯರು ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ಅಕ್ಷರಗಳ ತುಡಿತದೊಂದಿಗೆ ಭಾವನೆಗಳ ತುಡಿತ ಸಮ್ಮೀಲಿತಗೊಂಡರೇ ಕಥಾ ಕಥೆಗಳು ಮತ್ತು ರಚನೆ ಮಾಡಿದ ಪ್ರತಿಯೊಂದು ಬರಹ ಎಲ್ಲರನ್ನೂ ಸೆಳೆಯುತ್ತಿದ್ದು

ಕೊಟ್ಟೂರು: ಕವಿಯ ಮನ ಮತ್ತು ಬರಹ ಸಮಾಜದ ಎಲ್ಲ ಬಗೆಯ ನೋವು ನಲಿವುಗಳಿಗೆ ಸ್ಪಂದಿಸಬೇಕು, ಹೀಗಾದಾಗ ಮಾತ್ರ ಕಥೆ ಇಲ್ಲವೇ ಕವನ ಜನಮನ ಗೆಲ್ಲುತ್ತದೆ ಎಂದು ತುಂಗಾಭದ್ರ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ. ಶಿವಣ್ಣ ಹೇಳಿದರು.

ಗುರುವಾರ ಪಟ್ಟಣದಲ್ಲಿನ ತುಂಗಾಭದ್ರ ಬಿಪಿಇಡಿ ಕಾಲೇಜ್ ನಲ್ಲಿ ಕಿರುತರೆ ನಟಿ ಸಿ.ಎಂ.ನಂದಿನಿ ಪ್ರಕಾಶನದವರು ಜಿ.ಆರ್.ಬಸವರಾಜೇಶ್ವರಿ ರಚಿಸಿರುವ ಸರ್ಕಾರಿ ಶಾಲೆಯ ಮುಗ್ದ ಮನಸ್ಸುಗಳು ಕಥಾ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಕ್ಷರಗಳ ತುಡಿತದೊಂದಿಗೆ ಭಾವನೆಗಳ ತುಡಿತ ಸಮ್ಮೀಲಿತಗೊಂಡರೇ ಕಥಾ ಕಥೆಗಳು ಮತ್ತು ರಚನೆ ಮಾಡಿದ ಪ್ರತಿಯೊಂದು ಬರಹ ಎಲ್ಲರನ್ನೂ ಸೆಳೆಯುತ್ತಿದ್ದು ಬೇಕಾಬಿಟ್ಟಿಯಾಗಿ ರಚನೆ ಮಾಡುವ ಹವ್ಯಾಸ ಯಾರೂ ಇರಿಸಿಕೊಳ್ಳಬಾರದು ಎಂದು ಹೇಳಿದ ಅವರು, ಮುಗ್ಧ ಮನಸ್ಸುಗಳು ಕೇವಲ ಸರ್ಕಾರಿ ಶಾಲೆಗಳಲ್ಲದೇ ಖಾಸಗಿ ಶಾಲೆಗಳಲ್ಲಿ ಸಹ ಅತ್ಯುತ್ತಮವಾಗಿ ಬೆಳಕಿಗೆ ಬರುತ್ತಿವೆ ಅಲ್ಲದೇ ಪ್ರತಿಯೊಬ್ಬರ ಗಮನ ಸೆಳೆದು ಆ ಮೂಲಕ ಕಥಾವಸ್ತುಗಳಿಗೆ ಶಬ್ದಗಳಾಗುತ್ತವೆ. ಚಿಕ್ಕ ವಯಸ್ಸಿನ ಮಕ್ಕಳ ಸೃಜನಶೀಲತೆ ಮತ್ತು ಆಟೋಟ ವಿಷಯಗಳಿಗೆ ಪೋಷಕರು ಸದಾ ಸಹಕಾರ ನೀಡಬೇಕು ಎಂದು ಹೇಳಿದರು. ಕೃತಿ ಬಿಡುಗಡೆ ಮಾಡಿ ಮಾತನಾಡಿದ ಸಾಹಿತಿ, ಪತ್ರಕರ್ತ ಭೀಮಣ್ಣ ಗಜಾಪುರ, ಹೊಸ ಹೊಸ ವಿಷಯ ಸಾರ್ವತ್ರಿಕಗೊಳಿಸುವ ಮುನ್ನಾ ಜವಾಬ್ದಾರಿತನ ಸಂಬಂಧಪಟ್ಟವರು ಅದರಲ್ಲೂ ಬರವಣಿಗೆಯಲ್ಲಿ ತೊಡಗಿಸಿಕೊಂಡವರು ಹೆಚ್ಚು ಬಗೆಯ ಮುತುವರ್ಜಿ ವಹಿಸಬೇಕು ಎಂದರು.

ಪತ್ರಿಕಾ ಮತ್ತು ಸಾಹಿತ್ಯ ಒಡನಾಟ ಪ್ರತಿ ಹಂತದಲ್ಲಿ ರೂಢಿಸಿಕೊಂಡಾಗ ಸೃಜನಶೀಲತೆ ಹೊರಹೊಮ್ಮಲಿದ್ದು, ಸುತ್ತಲಿನ ಆಗು ಹೋಗುಗಳಿಗೆ ಸ್ಪಂದಿಸುವ ಮನೋಭಾವನೆ ಮತ್ತು ಹೊಣೆಗಾರಿಕೆ ರೂಪಿಸಿಕೊಂಡಾಗ ಪ್ರತಿ ಬರಹಗಾರ ತಮ್ಮ ಎಲ್ಲ ಕೃತಿಗಳಲ್ಲಿ ತಮ್ಮ ಪ್ರಖರತೆ ತೋರಿಸಿ ಯಶಸ್ವಿಯಾಗಬಲ್ಲ ಎಂದು ಹೇಳಿದರು. ಲೇಖಕಿ ಜಿ.ಆರ್.ಬಸವರಾಜೇಶ್ವರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೃತಿ ಕುರಿತು ಶೋಭಾ ಮಲ್ಕಿ ಒಡೆಯರ್ ಮಾತನಾಡಿದರು. ತಾಲೂಕು ಕಸಾಪ ಅಧ್ಯಕ್ಷ ಕೊಟ್ರೇಶ ದೇವರಮನಿ ತುಂಗಾಭದ್ರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಬಿ.ಎಸ್.ಕೊಟ್ರೇಶ, ಪಿ.ಎನ್.ಷಾ,ಸಾವಿತ್ರಿ ಪುಲೆ ಸಂಘದ ಜಿಲ್ಲಾಧ್ಯಕ್ಷೆ ಸಿ.ಎಚ್.ಎಂ.ಮಮತಾ, ಶಶಿಕಲಾ, ಎಂ.ಕರಿಬಸಜ್ಜ, ಡಾ. ಟಿ. ಶ್ಯಾಮ್ ರಾಜ್, ಎಂ.ಜಿ. ಮನೋಹರ್, ನೂರುಲ್ಲಾ ಖಾನ್, ಹುಲ್ಮನಿ ಮಹೇಶಪ್ಪ, ಚಿಗಟೇರಿ ಕೊಟ್ರೇಶ, ಚಿಗಟೇರಿ ಬಸಜ್ಜ ಮತ್ತಿತರರು ವೇದಿಕೆಯಲ್ಲಿದ್ದರು.

ಮತ್ತಿಹಳ್ಳಿ ಮಂಜುನಾಥ ಸ್ವಾಗತಿಸಿದರು. ಅರವಿಂದ್ ಬಸಾಪುರ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಗುರುಬಸವರ ದಾಸ ನಾನಯ್ಯ ಪುಸ್ತಕ ವಿತರಣೆ ಮಾಡಲಾಯಿತು. ಪೂಜಾ ಪ್ರಾರ್ಥಿಸಿದರು. ಜಿ.ಆರ್. ಬಸವರಾಜೇಶ್ವರಿ ಅವರನ್ನು ತುಂಗಾಭದ್ರ ವಿದ್ಯಾಸಂಸ್ಥೆ ಪರವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶರನ್ನವರಾತ್ರಿ ನಿಮಿತ್ತ ದೇವಿ ವಜ್ರಾಭರಣಗಳ ಮೆರವಣಿಗೆ
ಶ್ರೀದೇವಿ ಪುರಾಣದ ತತ್ವ ಅಳವಡಿಕೆ ಬದುಕಿಗೆ ದಾರಿ