ಕವಿಗಳು ಸಂವೇದನಾಶೀಲತೆಯಿಂದ ಭಾಷೆ ಬಳಸಲಿ: ಡಾ. ಶಿವಪ್ಪ ಕುರಿ

KannadaprabhaNewsNetwork |  
Published : Nov 13, 2025, 01:15 AM IST
ಕಾರ್ಯಕ್ರಮವನ್ನು ಡಾ. ಶಿವಪ್ಪ ಕುರಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಬೇಂದ್ರೆ ಮತ್ತು ಕುವೆಂಪು ಅವರಂಥ ಮಹಾನ್ ಕವಿಗಳು ಇಂದಿಗೂ ತಮ್ಮ ಕಾವ್ಯರಚನೆಯ ಬಂಧ ಮತ್ತು ಸೃಜನಶೀಲತೆಗಾಗಿ ಸ್ಮರಿಸಲ್ಪಡುತ್ತಾರೆ. ಉತ್ತಮ ಕಾವ್ಯರಚನೆಗಾಗಿ ಕವಿಗಳು ಅಧ್ಯಯನಶೀಲತೆಯನ್ನು ಬೆಳೆಸಿಕೊಳ್ಳಬೇಕು.

ಗದಗ: ಕವಿಗಳು ಭಾಷೆಯನ್ನು ಸೂಕ್ಷ್ಮವಾಗಿ ಸೃಜನಶೀಲವಾಗಿ ಮತ್ತು ವಾಚ್ಯವಾಗದಂತೆ ಸಂವೇದನಾಶೀಲತೆಯಿಂದ ಭಾಷೆಯನ್ನು ಬಳಸಬೇಕಾಗಿದೆ ಎಂದು ಕಸಾಪ ಮಾಜಿ ಜಿಲ್ಲಾಧ್ಯಕ್ಷ ಡಾ. ಶಿವಪ್ಪ ಕುರಿ ತಿಳಿಸಿದರು.ನಗರದ ತೋಂಟದ ಸಿದ್ಧಲಿಂಗ ಶ್ರೀಗಳ ಕನ್ನಡ ಭವನದಲ್ಲಿ ಜಿಲ್ಲಾ ಕಸಾಪ ನಡೆದ ರಾಜ್ಯೋತ್ಸವ ಪ್ರಯುಕ್ತ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಮಾನಗಳಲ್ಲಿ ಕವಿಗಳು ಭಾಷೆಯ ಬಳಕೆಯ ಬಗ್ಗೆ ಎಚ್ಚರ ವಹಿಸದೆ ಕೇವಲ ಭಾವನಾತ್ಮಕವಾಗಿ ಮತ್ತು ಪ್ರಾಸಬದ್ಧವಾಗಿ ಶಬ್ದಗಳನ್ನು ಜೋಡಿಸುತ್ತಿದ್ದು, ಇದು ಕಾವ್ಯರಚನೆಯ ದೃಷ್ಟಿಯಿಂದ ಉತ್ತಮವಾದ ಬೆಳವಣಿಗೆಯಲ್ಲ ಎಂದರು.

ಬೇಂದ್ರೆ ಮತ್ತು ಕುವೆಂಪು ಅವರಂಥ ಮಹಾನ್ ಕವಿಗಳು ಇಂದಿಗೂ ತಮ್ಮ ಕಾವ್ಯರಚನೆಯ ಬಂಧ ಮತ್ತು ಸೃಜನಶೀಲತೆಗಾಗಿ ಸ್ಮರಿಸಲ್ಪಡುತ್ತಾರೆ. ಉತ್ತಮ ಕಾವ್ಯರಚನೆಗಾಗಿ ಕವಿಗಳು ಅಧ್ಯಯನಶೀಲತೆಯನ್ನು ಬೆಳೆಸಿಕೊಳ್ಳಬೇಕೆಂದರು. ಹಿರಿಯ ಕವಿ ಎ.ಎಸ್. ಮಕಾನದಾರ ಮಾತನಾಡಿ, ನಾಡು, ನುಡಿಯ ಶ್ರೇಷ್ಠತೆ ಮಹತ್ವತೆಯನ್ನು ಪ್ರತಿಪಾದಿಸುವ ಕವನಗಳು ಕವಿಗೋಷ್ಠಿಯಲ್ಲಿ ಮೂಡಿಬರಲಿ ಎಂದರು.

ಕವಿಯತ್ರಿ ಮಂಜುಳಾ ವೆಂಕಟೇಶಯ್ಯ ಮಾತನಾಡಿ, ಕವಿಗಳು ಸಹೃದಯರ ಹೃನ್ಮನಗಳನ್ನು ತಟ್ಟುವಂತಹ, ಮುಟ್ಟುವಂತಹ ಕಾವ್ಯಗಳನ್ನು ರಚಿಸಿ ಯುವಜನತೆಯಲ್ಲಿ ಕಾವ್ಯಾಸಕ್ತಿಯನ್ನು ಮೂಡಿಸಬೇಕೆಂದು ತಿಳಿಸಿದರು. ಈ ವೇಳೆ ಡಾ. ರಾಜೇಂದ್ರ ಗಡಾದ, ಶಿಲ್ಪಾ ಮ್ಯಾಗೇರಿ, ಅಶೋಕ ಮತ್ತಿಗಟ್ಟಿ, ಡಾ. ಕಲ್ಲೇಶ ಮೂರಶಿಳ್ಳಿನ, ಡಾ. ರಶ್ಮಿ ಅಂಗಡಿ, ಜ್ಯೋತಿ ಹೆರಲಗಿ, ನೀಲಮ್ಮ ಅಂಗಡಿ, ಶಾರದಾ ಬಾಣದ, ಜಯಶ್ರೀ ಅಂಗಡಿ, ಕಸ್ತೂರಿ ಕಡಗದ, ಶಿವಾನಂದ ಭಜಂತ್ರಿ, ಜೆ.ಎ. ಪಾಟೀಲ, ರಾಜಶೇಖರ ಕಾಲವಾಡಮಠ ಹಾಗೂ ರಾಹುಲ್ ಗಿಡ್ನಂದಿ ಅವರು ನಾಡು, ನುಡಿ ಕುರಿತಾದ ಕವನಗಳನ್ನು ವಾಚಿಸಿದರು.

ಹಿರಿಯ ಸಾಹಿತಿಗಳಾದ ಚಂದ್ರಶೇಖರ ವಸ್ತ್ರದ, ಪ್ರೊ. ಅನ್ನದಾನಿ ಹಿರೇಮಠ, ಕೆ.ಎಚ್. ಬೇಲೂರ, ಬಸವರಾಜ ಗಣಪ್ಪನವರ, ರತ್ನಕ್ಕ ಪಾಟೀಲ, ರತ್ನಾ ಪುರಂತರ, ಡಿ.ಎಸ್. ಬಾಪೂರೆ, ಹಿಂಡಿ, ರವೀಂದ್ರ ಜೋಶಿ, ಉಮಾ ಪಾಟೀಲ, ಗಿಡ್ನಂದಿ ಸೇರಿದಂತೆ ಸಾಹಿತ್ಯಾಸಕ್ತರು, ಕವಿಗಳು ಇದ್ದರು. ಕಸಾಪ ಕಾರ್ಯದರ್ಶಿ ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಪ್ರೊ. ಡಿ.ಎಸ್. ನಾಯಕ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಸತೀಶ ಚನ್ನಪ್ಪಗೌಡರ ವಂದಿಸಿದರು.

PREV

Recommended Stories

250 ಕೋಟಿ ಹಗರಣ ಕಡತ ನಾಶ ಮಾಡಿದ್ರೂ ಸಿಕ್ಕಿದವು!?
ಬಿಳಿಕೆರೆ ಬಳಿ ಒಂದು ಗಂಡು ಹುಲಿ ಮರಿ ಸೆರೆ