ಕನ್ನಡಪ್ರಭ ವಾರ್ತೆ ಕುಕನೂರು
ಪಟ್ಟಣದ ಹೊಂಡದಲ್ಲಿ ಪಪಂನಿಂದ ಟೆಂಡರ್ ಪಡೆದು ಗುತ್ತಿಗೆದಾರ ಬಸವರಾಜ ಮಂಡ್ಲಿಗೇರಿ ಅವರು ಮೀನು ಸಾಕಾಣಿಕೆ ಮಾಡುತ್ತಿದ್ದರು. ಎರಡು ತಿಂಗಳ ಹಿಂದೆ 60 ಸಾವಿರಕ್ಕೂ ಹೆಚ್ಚು ಮೀನುಗಳನ್ನು ಹೊಂಡದಲ್ಲಿ ತಂದು ಬಿಟ್ಟಿದ್ದರು. ಆದರೆ ಸೋಮವಾರ ಮೀನುಗಳು ಹೊಂಡದಲ್ಲಿ ಸತ್ತು ಬಿದ್ದಿರುವ ದೃಶ್ಯ ಕಂಡು ಬಂದಿದೆ.
ಯಾರೋ ಕಿಡಿಗೇಡಿಗಳು ಹೊಂಡಕ್ಕೆ ವಿಷ ಸಿಂಪಡಣೆ ಮಾಡಿದ್ದಾರೆ. ವಿಷ ನೀರು ಸೇವಿಸಿ ಮೀನುಗಳು ಸತ್ತಿವೆ. ಲಕ್ಷಾಂತರ ರು. ನಷ್ಟವಾಗಿದೆ ಎಂದು ಬಸವರಾಜ ಮಂಡ್ಲಿಗೇರಿ ಅಳಲು ತೊಡಿಕೊಂಡರು.ಸ್ಥಳಕ್ಕೆ ಆಗಮಿಸಿದ ಪಪಂ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟೆ ಮೀನುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುವುದು. ಪ್ರಾಯೋಗಿಕ ವರದಿ ತರಿಸಿಕೊಳ್ಳಲಾಗುವುದು ಎಂದರು.
ಇಟಗಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ:ಬಿಜೆಪಿ ರಾಷ್ಟ್ರೀಯತೆ ಧ್ಯೇಯದೊಂದಿಗೆ ಕಾರ್ಯ ಮಾಡುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ್ ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲ ಮಹೇಶ ಹಿರೇಮನಿ, ಗ್ರಾಪಂ ಸದಸ್ಯರಾದ ಡಿ.ಜೆ. ಮನ್ನಾಪುರ, ಕಲಾವತಿ ಕಳ್ಳಿ, ಬಸಮ್ಮ ಶಾಂತಯ್ಯ ಕಂತಿ, ಲಕ್ಷ್ಮವ್ವ ತಳವಾರ, ಪ್ರಮುಖರಾದ ಗವಿಸಿದ್ದಪ್ಪ ಮುದ್ದಾಬಳ್ಳಿ, ಮಂಜು ನೀಲಪ್ಪನವರ್, ವಿರುಪಾಕ್ಷಪ್ಪ ಹುಳ್ಳಿ, ಸಿದ್ದರಾಮೇಶ ಹಳ್ಳಿ, ಶಿವಕುಮಾರ ಹೊಸಮನಿ, ಶಿವಕುಮಾರ್ ಗುಳಗಣ್ಣವರ, ಮಂಜು ಬಾರಕೇರ್, ಮಹಾಂತೇಶ ಕೌದಿ ಇತರರಿದ್ದರು.