-ಬೀಗ ಹಾಕಿದ ಮನೆಗಳಲ್ಲಿ ಕಳ್ಳತನ । ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು
------ಕನ್ನಡಪ್ರಭ ವಾರ್ತೆ ಹಿರಿಯೂರು: ತಾಲೂಕಿನ ಪಿಟ್ಲಾಲಿ ಹಾಗೂ ನಂದಿಹಳ್ಳಿ ಗ್ರಾಮದಲ್ಲಿ ಕಳ್ಳರು ಮನೆಯ ಬೀಗ ಮುರಿದು ನಗದು ಸೇರಿದಂತೆ ಚಿನ್ನಾಭರಣ ದೋಚಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಪಿಟ್ಲಾಲಿ ಗ್ರಾಮದ ಅನ್ನಪೂರ್ಣ ವಸಂತಕುಮಾರ್ ಮನೆಯ ಬೀಗ ಮುರಿದು 10 ಸಾವಿರ ನಗದು, 6 ಮತ್ತು 4 ಗ್ರಾಂ ತೂಕದ ಹ್ಯಾಂಗಿಂಗ್ಸ್, 4 ಗ್ರಾಂ ಬಂಗಾರ ಗುಂಡು, 3 ಗ್ರಾಂ ತೂಕದ ಕಿವಿಚೈನ್, 50 ಗ್ರಾಂ ಬೆಳ್ಳಿ ಚೈನ್ ಸೇರಿದಂತೆ ಬೆಳ್ಳಿಯ ಕಾಲು ಚೈನ್ ಲೂಟಿ ಮಾಡಿದ್ದಾರೆ. ನಂದಿಹಳ್ಳಿ ಗ್ರಾಮದ ಪಾಂಡುರಂಗಪ್ಪ ಮನೆಯಲ್ಲಿ 50 ಸಾವಿರ ನಗದು ಹಣ, 30 ಸಾವಿರ ಬೆಲೆ ಬಾಳುವ ಕೊರಳ ಚೈನ್, ಒಂದು ಜೊತೆ ಬೆಳ್ಳಿಯ ಕಾಲು ಚೈನ್ ದೋಚಿದ್ದಾರೆ. ಉಳಿದಂತೆ ರಂಗಪ್ಪ, ಬಾಬುಸಾಬ್, ಮುದ್ದಣ್ಣ ಗೌಡ, ಅಜ್ಜಯ್ಯ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದು, ಏನು ಸಿಗದೇ ಕಳ್ಳರು ಬರಿಗೈಯಲ್ಲಿ ತೆರಳಿದ್ದಾರೆ. ಸ್ಥಳಕ್ಕೆ ಪೊಲೀಸರು ಮತ್ತು ಶ್ವಾನದಳ ಬೆರಳಚ್ಚು ತಜ್ಞರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.ರಾತ್ರಿ ವೇಳೆ ಜಮೀನುಗಳಿಗೆ ನೀರು ಹಾಯಿಸಲು ಹೋಗಿರುವಂತಹ ಮನೆ ಮತ್ತು ಸತತ ಎರಡು ಮೂರು ದಿನಗಳಿಂದ ಬೀಗ ಹಾಕಿರುವಂತಹ ಮನೆಗಳಲ್ಲಿ ಕಳ್ಳತನ ಮಾಡಲಾಗುತ್ತಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಅಲ್ಲದೆ ರಾತ್ರಿ ವೇಳೆ ಪೊಲೀಸರ ಗಸ್ತು ಹೆಚ್ಚಿಸಬೇಕು ಎಂಬುದಾಗಿ ಗ್ರಾಮಸ್ಥರು ಪೊಲೀಸ್ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
-----ಫೋಟೊ: ಚಿತ್ರ 1 ತಾಲೂಕಿನ ಫಿಟ್ಲಾಲಿ ಮತ್ತು ನಂದಿಹಳ್ಳಿ ಗ್ರಾಮದಲ್ಲಿ ಮನೆ ಬೀಗ ಮುರಿದು ಕಳ್ಳತನ ಮಾಡಿರುವುದು.