ಕನ್ನಡಪ್ರಭ ವಾರ್ತೆ ಜಮಖಂಡಿ
ನಗರಠಾಣೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಪಿ ಮಾರ್ಗದರ್ಶನದಲ್ಲಿ ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸ್‌ಐ ಅನೀಲ ಕುಂಬಾರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಹೊರರಾಜ್ಯ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಬಳಕೆಯಾಗುತ್ತಿದ್ದ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದೆ. 22 ಲಕ್ಷ ಮೊಬೈಲ್ ಕಳ್ಳತನದ ಪ್ರಕರಣಗಳು ಸಿಇಐಆರ್‌ನಲ್ಲಿ ದಾಖಲಾಗಿದೆ. 11ಲಕ್ಷಕ್ಕೂ ಅಧಿಕ ಮೊಬೈಲ್ ಪತ್ತೆ ಹಚ್ಚಲಾಗಿದೆ. 2 ಲಕ್ಷ ಮೊಬೈಲ್ ಇಲಾಖೆಯಿಂದ ವಾರಸುದಾರರಿಗೆ ಮರಳಿಸಲಾಗಿದೆ. ರಾಜ್ಯದಲ್ಲಿ 2 ಲಕ್ಷ ಕಳ್ಳತನದ ಪ್ರಕರಣಗಳ ಪೈಕಿ 1 ಲಕ್ಷ 3 ಸಾವಿರ ಮೊಬೈಲ್ ಪತ್ತೆಯಾಗಿದೆ, 55 ಸಾವಿರ ಮೊಬೈಲ್ ವಾಪಸ್ ನೀಡಲಾಗಿದೆ ಎಂದು ವಿವರಿಸಿದರು.
ಮೊಬೈಲ್ ಕಳೆದು ಕೊಂಡವರು ಸಿಇಐಆರ್ ಪೋರ್ಟಲ್ ಸಹಾಯದಿಂದ ಪ್ರಕರಣ ದಾಖಲಿಸಿ, ಕಳೆದು ಹೋಗಿರುವ ಮೊಬೈಲ್ ವಾಪಸ್ ಪಡೆಯಬಹುದು. ಸಾರ್ವಜನಿಕರು ಈ ಆ್ಯಪ್ ಸದುಪಯೋಗ ಪಡಿಸಿಕೊಳ್ಳಬೇಕೆಂದರು. ಕಳೆದು ಹೋಗಿದ್ದ ಮೊಬೈಲ್‌ಗಳನ್ನು ಮರಳಿ ಪಡೆದ ಜಂಬಗಿ ಹಾಗೂ ಪುಂಡಲೀಕ ಮಾತನಾಡಿ, ಪೊಲೀಸ್ ಕಾರ್ಯಾಚರಣೆಯಿಂದ ತಮ್ಮ ಪೋನ್‌ಗಳು ಮರಳಿ ಸಿಕ್ಕಿವೆ. ಪೊಲೀಸ್ ಕಾರ್ಯವೈಖರಿ ಅಭಿನಂದನೀಯವಾಗಿದೆ ಎಂದರು. ಕಾರ್ಯಾಚರಣೆ ನಡೆಸಿದ್ದ ಸಿಬ್ಬಂದಿ ಪ್ರಕಾಶ ಹಾಗೂ ತಂಡದವರನ್ನು ಅಭಿನಂದಿಸಲಾಯಿತು.