91 ಹಾಸ್ಟೆಲ್‌ಗಳಿಗೆ ಮಹಿಳಾ ಪಿಎಸ್‌ಐ ನೋಡಲ್ ಅಧಿಕಾರಿ ನೇಮಕ, ರಾಜ್ಯದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಮೊದಲ ಪ್ರಯೋಗ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುನಿಮ್ಮ ಹಾಸ್ಟೆಲ್‌ನಲ್ಲಿ ಯಾವುದಾದರೂ ಸಮಸ್ಯೆ ಇದೀಯಾ, ಅದನ್ನು ಯಾರ ಬಳಿಯೂ ಹೇಳಿಕೊಳ್ಳಲು ಆಗುತ್ತಿಲ್ಲವೇ,
- ಇನ್ನು ಮುಂದೆ ಈ ರೀತಿಯ ಆತಂಕ ಬೇಡ. ನಿಮ್ಮ ಹಾಸ್ಟೆಲ್‌ಗಳಿಗೆ ಪ್ರತಿ ತಿಂಗಳು ಅನಿರೀಕ್ಷಿತವಾಗಿ ಆರಕ್ಷಕ ಗೆಳತಿ ಬರಲಿದ್ದಾರೆ. ಅವರ ಬಳಿ ಹಾಸ್ಟೆಲ್‌ನಲ್ಲಿನ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು.ಬಾಲಕಿಯರ ಸರ್ಕಾರಿ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಲು ಜಿಲ್ಲೆಯ ಎಲ್ಲಾ 91 ಬಾಲಕಿಯರ ಹಾಸ್ಟೇಲ್‌ಗಳಿಗೆ ಮಹಿಳಾ ಪಿಎಸ್‌ಐ ಅವರನ್ನು ಆರಕ್ಷಕ ಗೆಳತಿಯನ್ನಾಗಿ ಜಿಲ್ಲಾ ಪೊಲೀಸ್ ಇಲಾಖೆ ನೇಮಕ ಮಾಡಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾ ಪೊಲೀಸ್ ಇಲಾಖೆ ಹೊಸ ಪ್ರಯತ್ನವನ್ನು ಮಾಡಿದೆ. ಈ ಆರಕ್ಷಕ ಗೆಳತಿಯರು ಸೋಮವಾರ ಹಾಗೂ ಮಂಗಳವಾರ ಎರಡು ದಿನಗಳ ಕಾಲ ಹಾಸ್ಟೆಲ್‌ಗಳಿಗೆ ಭೇಟಿ ನೀಡಿದ್ದರು.ಕಾರ್ಯ ವೈಖರಿ: ಆರಕ್ಷಕ ಗೆಳತಿ ಕಾರ್ಯಕ್ರಮದ ಅಂಗವಾಗಿ ಮಹಿಳಾ ಪಿಎಸ್ಐ ದರ್ಜೆಯ ನೋಡೆಲ್ ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ ಅಲ್ಲಿರುವ ಬಾಲಕಿಯರ, ಮಹಿಳೆಯರ, ಅವರ ಪೋಷಕರು ಸೇರಿದಂತೆ ಹಾಗೂ ಭೋಧಕ ಮತ್ತು ಭೋದಕೇತರ ಸಿಬ್ಬಂದಿಯೊಡನೆ ಸಂವಾದ ನಡೆಸಿ ಸಮಸ್ಯೆಗಳನ್ನು ಆಲಿಸಿ ಅವರಲ್ಲಿ ಪೋಕ್ಸೋ, ಚೈಲ್ಡ್ ರೈಟ್ಸ್, ಚೈಲ್ಡ್ ಮ್ಯಾರೇಜ್, ಸೈಬರ್ ಕ್ರೈಮ್ಸ್, ಟ್ರಾಫಿಕ್ ರೂಲ್ಸ್, ಡ್ರಗ್ಸ್ ಇತ್ಯಾದಿ ವಿಷಯಗಳಲ್ಲಿ ಕಾನೂನು ಅರಿವು ಮೂಡಿಸಿ, ಅವರುಗಳ ಮನೋಸ್ಥೈರ್ಯ ಹೆಚ್ಚಿಸುವುದು.
ಅಲ್ಲದೇ ಹಾಸ್ಟೆಲ್‌ಗಳ ಕಟ್ಟಡಗಳ ಮೆಸ್, ಟೀಚಿಂಗ್ ರೂಂಗಳು, ಆವರಣ, ಕಟ್ಟಡಗಳ ಸ್ಥಿತಿಗತಿ, ಸಿಸಿ ಕ್ಯಾಮರಾಗಳು ಕಾರ್ಯ ನಿರ್ವಹಿಸುವ ಬಗ್ಗೆ, ಕಾಂಪೌಂಡ್, ಸೆಕ್ಯೂರಿಟಿ ಗಾರ್ಡ್ಸ್ ಎಲ್ಲರನ್ನೂಳಗೊಂಡು ಭದ್ರತಾ ಹಿತ ದೃಷ್ಟಿಯಿಂದ ಪರಿಶೀಲಿಸುವುದು. ಊಟ ತಿಂಡಿ ವಿತರಣೆ, ವಸತಿ ಸೌಕರ್ಯ, ಶೌಚಾಲಯಗಳಲ್ಲಿ ಸ್ವಚ್ಛತೆ, ಪೋಲಿ ಹುಡುಗರಿಂದ ಏನಾದರೂ ಕಿರಿಕಿರಿ, ತೊಂದರೆ, ಹಾಸ್ಟೆಲ್ ಅಕ್ಕ ಪಕ್ಕದ ವಾತಾವರಣ, ಮಕ್ಕಳಿಗೆ ಅನಾರೋಗ್ಯದ ಸಂದರ್ಭದಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಸೌಲಭ್ಯ, ಬಾಲಕಿಯರ ಜೊತೆ ಹಾಸ್ಟೆಲ್ ಸಿಬ್ಬಂದಿ ವರ್ತನೆ, ನಡತೆ ಕುರಿತು ವಿಚಾರಿಸಿ ಹಾಸ್ಟೆಲ್ ಮೇಲ್ವಿಚಾರಕರೊಂದಿಗೆ ಬಾಲಕಿಯರ ರೂಂಗಳನ್ನು ತಪಾಸಣೆ ಮಾಡಿ ಚಾಕುಗಳು, ಕತ್ತರಿಗಳು ಇತರೆ ಕಬ್ಬಿಣದ , ಎಲೆಕ್ಟ್ರಾನಿಕ್ಸ್ ವಸ್ತುಗಳು, ವೈದ್ಯರ ಸಲಹೆ ಹೊರತುಪಡಿಸಿ ಬೇರೆ ಯಾವುದಾದರೂ ಔಷಧಿ ಮಾತ್ರೆಗಳು. ಸ್ವಂತವಾಗಿ ಕುಕ್ಕಿಂಗ್ ಮಾಡುತ್ತಿದ್ದರೆ, ಹೊರಗಡೆಯಿಂದ ಪಾರ್ಸಲ್‌ಗಳನ್ನು ತರಿಸುತ್ತಿದ್ದರೆ ಪರಿಶೀಲನೆ ಮಾಡುವುದು.--- ಬಾಕ್ಸ್ ----ಸೂಚನಾ ಫಲಕದಲ್ಲಿ ಸಹಾಯವಾಣಿ ಸಂಖ್ಯೆ ಕಡ್ಡಾಯ:ಚೈಲ್ಡ್ ಹೆಲ್ಸ್ ಲೈನ್- 1098ಇಆರ್‌ಎಸ್ಎಸ್- 112.ವ್ಯಾಪ್ತಿಯ ಪೊಲೀಸ್ ಠಾಣೆ.ವ್ಯಾಪ್ತಿಯ ಪಿಎಸ್ಐ (ಕಾನೂನು ಮತ್ತು ಸುವ್ಯವಸ್ಥೆ) ರವರ ನಂಬರ್. ಕಂಟ್ರೋಲ್ ರೂಂ- 9480805100--
ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿರುವ ವಿದ್ಯಾರ್ಥಿನಿಯರಲ್ಲಿ ಆತ್ಮಸ್ಥೈರ್ಯ ತುಂಬಲು ಹಾಗೂ ಸ್ಥಳೀಯ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳುವ ವಾತಾವರಣ ಸೃಷ್ಟಿ ಮಾಡುವ ಸಲುವಾಗಿ ಅರಕ್ಷಕ ಗೆಳತಿ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಜಾರಿಗೊಳಿಸಲಾಗಿದೆ. ಇದು, ರಾಜ್ಯದಲ್ಲಿ ಮೊದಲ ಪ್ರಯತ್ನವಾಗಿದೆ. ಮಹಿಳಾ ಪಿಎಸ್‌ಐ ವಿದ್ಯಾರ್ಥಿನಿಯರ ಜತೆಗೆ ಮಾತ್ರ ವಲ್ಲ ಅವರ ಪೋಷಕರು, ಬೋಧಕ, ಬೋಧಕೇತರೊಂದಿಗೆ ಸಂವಾದ ನಡೆಸಲಿದ್ದಾರೆ. ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಇದು, ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುವುದು.- ಡಾ. ವಿಕ್ರಂ ಅಮಟೆಜಿಲ್ಲಾ ರಕ್ಷಣಾಧಿಕಾರಿಪೋಟೋ ಫೈಲ್ ನೇಮ್ 15 ಕೆಸಿಕೆಎಂ 4
-- 15 ಕೆಸಿಕೆಎಂ 5ಬಾಲಕಿಯರ ಸರ್ಕಾರಿ ವಸತಿ ನಿಲಯಕ್ಕೆ ಮಹಿಳಾ ಪಿಐಎಸ್ ಭೇಟಿ ನೀಡಿದ್ದರು.