ಪು3... ಸರಾಫ್ ವರ್ತಕರ ಮೇಲೆ ಪೊಲೀಸ್ ಕಿರುಕುಳ

KannadaprabhaNewsNetwork |  
Published : Apr 07, 2026, 03:00 AM IST
06ಸಿಡಿಎನ್01 | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಚಡಚಣ ಪಟ್ಟಣದ ಅಮಾಯಕ ಸರಾಫ್ ವರ್ತಕರ ಮೇಲೆ ಪೊಲೀಸರ ಕಿರುಕುಳ ಹೆಚ್ಚಾಗಿದ್ದು, ಅದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಸರಾಫ್ ವರ್ತಕರ ಸಂಘದ ಸದಸ್ಯರು ಚಡಚಣ ಉಪತಹಸೀಲ್ದಾರ್ ಹುಸನಪ್ಪ ಹೊಸಮನಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.ಕರವೇ ತಾಲೂಕಾಧ್ಯಕ್ಷ ಸೋಮಶೇಖರ ಕಂಬಾರ ಮಾತನಾಡಿ, ಪಟ್ಟಣವು ಮಹಾರಾಷ್ಟ್ರದ ಗಡಿ ಭಾಗದಲ್ಲಿದ್ದು, ಆ ರಾಜ್ಯದ ಕಳ್ಳರು ಯಾವುದೋ ಸ್ಥಳದಲ್ಲಿ ಬಂಗಾರವನ್ನು ಕಳವು ಮಾಡಿ ಅದನ್ನು ಎಲ್ಲಿ ಮಾರಾಟ ಮಾಡುತ್ತಾರೆ ಎಂಬುವುದು ನಮಗೆ ಗೊತ್ತಿರುವುದಿಲ್ಲ. ಆದರೆ, ಯಾವುದೇ ಪೊಲೀಸರು ಕಳ್ಳರೊಂದಿಗೆ ಏಕಾಏಕಿ ಬಂದು ಕಳ್ಳರು ತೋರಿಸಿದ ಅಂಗಡಿಗೆ ನುಗ್ಗಿ ಅಂಗಡಿ ಮಾಲೀಕರನ್ನು ದರೋಡೆಕೋರರ ತರಹ ನೋಡುತ್ತಿರುವುದು ಸರಿಯಲ್ಲ. ಇದರಿಂದ ತಾಲೂಕಿನಾದ್ಯಂತ ಸರಾಫ್‌ (ಬಂಗಾರ) ವರ್ತಕರು ಭಯದ ವಾತಾವರಣದಲ್ಲಿ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಚಡಚಣ

ಪಟ್ಟಣದ ಅಮಾಯಕ ಸರಾಫ್ ವರ್ತಕರ ಮೇಲೆ ಪೊಲೀಸರ ಕಿರುಕುಳ ಹೆಚ್ಚಾಗಿದ್ದು, ಅದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಸರಾಫ್ ವರ್ತಕರ ಸಂಘದ ಸದಸ್ಯರು ಚಡಚಣ ಉಪತಹಸೀಲ್ದಾರ್ ಹುಸನಪ್ಪ ಹೊಸಮನಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.ಕರವೇ ತಾಲೂಕಾಧ್ಯಕ್ಷ ಸೋಮಶೇಖರ ಕಂಬಾರ ಮಾತನಾಡಿ, ಪಟ್ಟಣವು ಮಹಾರಾಷ್ಟ್ರದ ಗಡಿ ಭಾಗದಲ್ಲಿದ್ದು, ಆ ರಾಜ್ಯದ ಕಳ್ಳರು ಯಾವುದೋ ಸ್ಥಳದಲ್ಲಿ ಬಂಗಾರವನ್ನು ಕಳವು ಮಾಡಿ ಅದನ್ನು ಎಲ್ಲಿ ಮಾರಾಟ ಮಾಡುತ್ತಾರೆ ಎಂಬುವುದು ನಮಗೆ ಗೊತ್ತಿರುವುದಿಲ್ಲ. ಆದರೆ, ಯಾವುದೇ ಪೊಲೀಸರು ಕಳ್ಳರೊಂದಿಗೆ ಏಕಾಏಕಿ ಬಂದು ಕಳ್ಳರು ತೋರಿಸಿದ ಅಂಗಡಿಗೆ ನುಗ್ಗಿ ಅಂಗಡಿ ಮಾಲೀಕರನ್ನು ದರೋಡೆಕೋರರ ತರಹ ನೋಡುತ್ತಿರುವುದು ಸರಿಯಲ್ಲ. ಇದರಿಂದ ತಾಲೂಕಿನಾದ್ಯಂತ ಸರಾಫ್‌ (ಬಂಗಾರ) ವರ್ತಕರು ಭಯದ ವಾತಾವರಣದಲ್ಲಿ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಪಪಂ ಸದಸ್ಯ ಚೇತನ ನಿರಾಳೆ ಮಾತನಾಡಿ, ಪೊಲೀಸರು ಅಮಾಯಕ ಸರಾಫ್‌ ವರ್ತಕರ ಮೇಲೆ ಈ ರೀತಿ ದೌರ್ಜನ್ಯ ಎಸಗುತ್ತಿರುವುದು ಖಂಡನೀಯ. ಯಾರೋ ಕಳ್ಳರು ಹೇಳಿದ ಮಾತನ್ನು ನಂಬಿ ಯಾವುದೇ ತನಿಖೆ ಮಾಡದೇ ಏಕಾಏಕಿ ಅಂಗಡಿಗೆ ಬಂದು ಸರಾಫ್‌ ವರ್ತಕರನ್ನು ಘೋಷಿತ ಆರೋಪಿಗಳ ಹಾಗೇ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಬಂಗಾರ ವಸೂಲಿ ಮಾಡುತ್ತಿದ್ದಾರೆ. ಇಂತಹ ದೌರ್ಜನ್ಯವನ್ನು ಇನ್ನು ಮುಂದೆ ಸಹಿಸುವುದಿಲ್ಲ. ಪೊಲೀಸರು ಇಂತಹ ಕಾನೂನು ಬಾಹಿರ ಕೃತ್ಯಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.

ಜಿ.ಡಿ.ಪಾವಲೆ ಮುಂತಾದವರು ಮಾತನಾಡಿದರು. ಪ್ರತಿಭಟನೆಯಲ್ಲಿ ಪ್ರಕಾಶ ಬಂಡರಕವಟೆ, ಆರ್.ಜಿ.ಪಾವಲೆ, ಎಸ್.ಜಿ.ಪಾವಲೆ, ಉಮೇಶ ಪತ್ತಾರ, ಐ.ಸಿ.ಪತ್ತಾರ, ಪಿಂಟು ಪತ್ತಾರ, ಮೌನೇಶ ಪತ್ತಾರ, ಧಾನೇಶ ಪೋತದಾರ, ಪ್ರವೀಣಗೌಡ ಪಾಟೀಲ, ಮಲ್ಲಿಕಾರ್ಜುನ ಬಂಡರಕವಟೆ, ಟಿ.ವಿ.ಪವಾರ, ರಾಜೇಶ ವರ್ಣೇಕರ ಸೇರಿದಂತೆ ನೂರಾರು ಸರಾಫ್‌ ವರ್ತಕರು ಇದ್ದರು.

---------

ಸರಾಫ್ ವರ್ತಕರ ಸಂಘದ ಸದಸ್ಯರು ಚಡಚಣ ಉಪತಹಸೀಲ್ದಾರ್ ಹುಸನಪ್ಪ ಹೊಸಮನಿ ಅವರಿಗೆ ಮನವಿ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರ ಬಳಸಿ
ಕ್ಷೇತ್ರದಲ್ಲಿ ಸಾರಿಗೆ ಸಂಚಾರ ಸುಧಾರಣೆಗೆ ಪ್ರಯತ್ನ