ಪೊಲೀಸ್ ಎಂದರೆ ಭಯವಲ್ಲ, ಜನಸ್ನೇಹಿ: ಶಾಸಕ ಕೆ.ಎಸ್.ಆನಂದ್

KannadaprabhaNewsNetwork |  
Published : Jul 31, 2025, 12:45 AM IST
28ಕೆಕೆಡಿಯು3. | Kannada Prabha

ಸಾರಾಂಶ

ಕಡೂರು, ಪೊಲೀಸ್ ಎಂದರೆ ಭಯವಲ್ಲ, ಭರವಸೆ ನೀಡುವ ಜನಸ್ನೇಹಿಯಾಗಿ ನಿಮ್ಮ ಮನೆಗಳಿಗೆ ಬಂದು ಕುಂದುಕೊರತೆಗಳನ್ನು ಸಮಸ್ಯೆ ಆಲಿಸಿ, ಸೂಕ್ತ ಪರಿಹಾರ ನೀಡುವ ಬಂಧುಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ರಾಜ್ಯ ಸರ್ಕರದ ನಿರ್ದೇಶನದಂತೆ ಮನೆಮನೆಗೆ ಪೊಲೀಸ್ ಅಭಿಯಾನ ನಡೆಯುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಮನೆ ಮನೆಗೆ ಪೊಲೀಸ್ । 50 ಮನೆಗೆ ಒಬ್ಬ ಬೀಟ್‌ ಪೊಲೀಸ್‌ಕನ್ನಡಪ್ರಭ ವಾರ್ತೆ ಕಡೂರು

ಪೊಲೀಸ್ ಎಂದರೆ ಭಯವಲ್ಲ, ಭರವಸೆ ನೀಡುವ ಜನಸ್ನೇಹಿಯಾಗಿ ನಿಮ್ಮ ಮನೆಗಳಿಗೆ ಬಂದು ಕುಂದುಕೊರತೆಗಳನ್ನು ಸಮಸ್ಯೆ ಆಲಿಸಿ, ಸೂಕ್ತ ಪರಿಹಾರ ನೀಡುವ ಬಂಧುಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ರಾಜ್ಯ ಸರ್ಕರದ ನಿರ್ದೇಶನದಂತೆ ಮನೆಮನೆಗೆ ಪೊಲೀಸ್ ಅಭಿಯಾನ ನಡೆಯುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಪಟ್ಟಣದ ಕದಂಬ ವೃತ್ತದ ಬಳಿ ಮುಖಂಡ ಹುಚ್ಚಪ್ಪ ಅವರ ನಿವಾಸಕ್ಕೆ ವೃತ್ತ ನಿರೀಕ್ಷಕ ರಫೀಕ್, ಪಿಎಸ್‌ಐ ಸರ್ಜಿತ್ ಮತ್ತು ಬೀಟ್ ಸಿಬ್ಬಂದಿ ತಂಡದ ಜೊತೆ ಭೇಟಿ ನೀಡಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜನಸಾಮಾನ್ಯರಿಗೆ ತೊಂದರೆಯಾದರೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಬೇಕಿತ್ತು. ಅದರೆ ಈಗ ನೂತನವಾಗಿ ಆರಂಭಿಸಿರುವ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದಡಿ 50 ಮನೆಗಳಿಗೆ ಒಬ್ಬ ಬೀಟ್ ಪೊಲೀಸ್ ನೇಮಕವಾಗಿದ್ದು ನಿಮ್ಮ ಮನೆಗಳಿಗೆ ಬೀಟ್ ಪೊಲೀಸರು ಬಂದು ಕುಂದುಕೊರತೆ, ಇಲಾಖೆಗೆ ಸಂಭಂಧಿಸಿದ ಸಮಸ್ಯೆ ತಿಳಿದುಕೊಂಡು ಬಗೆಹರಿಸುವ ಕೆಲಸ ನಿರ್ವಹಿಸಲಿದ್ದಾರೆ ಎಂದರು.

ಈಗಾಗಲೇ ಪಟ್ಟಣದಲ್ಲಿ 21 ಬೀಟ್ ಸಿಬ್ಬಂದಿ ನೇಮಕ ಮಾಡಿದ್ದು ಆಯಾಯ ಪ್ರದೇಶದ ಬೀಟ್ ಪೊಲೀಸರು ನಿಮ್ಮ ಮನೆ ಗಳಿಗೆ ಭೇಟಿ ನೀಡುತ್ತಾರೆ. ಯಾವುದೇ ಅತಂಕ, ಭಯವಿಲ್ಲದೆ ಅವರೊಂದಿಗೆ ಸ್ಪಂದಿಸಿ ಸಹಕಾರ ನೀಡಿದರೆ ಉತ್ತಮ ಎಂಬ ಸಲಹೆ ನೀಡಿದರು.

ಕಡೂರು ವೃತ್ತ ನಿರೀಕ್ಷಕ ರಫೀಕ್ ಮಾತನಾಡಿ, ಪೊಲೀಸ್ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಮನೆ ಮನೆಗೆ ಪೊಲೀಸ್ ಎಂಬ ಯೋಜನೆಯಾಗಿದ್ದು ಈ ಮಹತ್ವಾಕಾಂಕ್ಷಿ ಯೋಜನೆ ಬಳಸಿಕೊಳ್ಳಿ, ಪೊಲೀಸ್ ಎಂದರೆ ಭಯಬೇಡ, ವಿಶ್ವಾಸ, ನಂಬಿಕೆ ಎಂಬ ಭಾವನೆ ನಿಮ್ಮಲ್ಲಿ ಮೂಡಲಿ. ನಿಮ್ಮ ಸಮಸ್ಯೆಗಳನ್ನು ನ್ಯಾಯ ಸಮ್ಮತವಾಗಿ ಬಗೆಹರಿಸುವ ಕೆಲಸ ನಾವು ಮಾಡಲಿದ್ದೇವೆ ಎಂದರು.

ಪಿಎಸ್‌ಐ ಸರ್ಜಿತ್‌ಕುಮಾರ್ ಮಾತನಾಡಿ, ಬೀಟ್ ಸಿಬ್ಬಂದಿಗೆ ಮಾಹಿತಿ ನೀಡಿ ಸಹಕರಿಸಿ, ನಿಮ್ಮ ಕುಂದುಕೊರತೆ ಹೇಳಿದರೆ ಬಗೆಹರಿಸಲು ಸಹಕಾರಿ. ಈ ನಿಟ್ಟಲ್ಲಿ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಶಾಸಕರು ಕಾರ್ಯಕ್ರಮ ಉದ್ಘಾಟಿ ಸಿದ್ದು ಇಲಾಖೆಗೆ ಶಕ್ತಿ ತುಂಬಿದ್ದಾರೆ ಎಂದರು.

ಮುಖಂಡರಾದ ಗುರು,ಶ್ರೀಕಂಠ ವಡೆಯರ್, ಕೊನೆಮನೆ ರವಿ, ರಾಜೇಶ್, ನಂದೀಶ್,ನಿರಂಜನ್ ಸುರೇಶ್, ಸಾರ್ವಜನಿಕರು, ಮನೆಯ ಮಾಲೀಕರು, ಮತ್ತಿತರರು ಇದ್ದರು.28ಕೆಕೆಡಿಯು3.

ಕಡೂರಲ್ಲಿ ಪೊಲೀಸ್ ಇಲಾಖೆಯಿಂದ ನಡೆದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಆನಂದ್ ಕುಟುಂಬ ಒಂದಕ್ಕೆ ಕಾರ್ಡ್ ನೀಡುವ ಮೂಲಕ ಚಾಲನೆ ನೀಡಿದರು.

PREV

Recommended Stories

ಮದ್ಯಪಾನ ಮಾಡಿ ಅಪಘಾತಕ್ಕೀಡಾದರೆ ವಿಮೆ ಬೇಡ : ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌
ಖರ್ಗೆ ಕುಟುಂಬದ ವಿರುದ್ಧ ಕೋರ್ಟ್‌ಗೆ ಖಾಸಗಿ ದೂರು