ಆರೋಪ ಹೊತ್ತಿರುವ ತಹಸೀಲ್ದಾರನ್ನು ವರ್ಗಾವಣೆ ಮಾಡಲಿ

KannadaprabhaNewsNetwork |  
Published : Jul 31, 2025, 12:45 AM IST
ಆರೋಪ ಹೊತ್ತಿರುವ ಸ್ಥಳೀಯ ತಹಸೀಲ್ದಾರನ್ನ ಬೇರೆಡೆಗೆ ವರ್ಗಾವಣೆ ಮಾಡಲಿ: ಆರ್.ಪಿ.ಐ. ಸತೀಶ್ ಆಗ್ರಹ | Kannada Prabha

ಸಾರಾಂಶ

ಹಲವಾರು ಆರೋಪಗಳನ್ನು ಹೊತ್ತಿರುವ ತಹಸೀಲ್ದಾರ್ ಅವರನ್ನು ಕೂಡಲೇ ಬೇರೆಡೆಗೆ ವರ್ಗಾವಣೆ ಮಾಡಬೇಕೆಂದು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಆರ್‌.ಪಿ.ಐ. ಸತೀಶ್ ಆಗ್ರಹಿಸಿದರು. ಚಿಕ್ಕಮಗಳೂರು ಜಿಲ್ಲಾ ಖಜಾನೆಯಲ್ಲಿ ಎಫ್‌ಡಿಎ ಆಗಿ ನಂತರ ಮುಗಳವಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ನಂತರ ಕೆಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ತಹಸೀಲ್ದಾರ್ ಆಗಿ ನೇಮಕಗೊಂಡರು. ಹೊಸದರಲ್ಲಿ ಇದೇ ತಾಲೂಕಿನ ಸಿದ್ದಾಪುರ ಗ್ರಾಮದ ಗಣೇಶ್ ಭಟ್ ಎಂಬುವರಿಗೆ ೯೪ಸಿನಲ್ಲಿ ವಜಾ ಆದ ಅರ್ಜಿಗೆ ಹಕ್ಕುಪತ್ರ ನೀಡಿ ಖಾತೆ ಮಾಡಿಕೊಟ್ಟ ಆರೋಪವನ್ನು ಇವರು ಹೊತ್ತುಕೊಂಡವರು ಎಂದು ದೂರಿದರು.

ಕನ್ನಡಪ್ರಭ ವಾರ್ತೆ ಹಾಸನ

ಹಲವಾರು ಆರೋಪಗಳನ್ನು ಹೊತ್ತಿರುವ ತಹಸೀಲ್ದಾರ್ ಅವರನ್ನು ಕೂಡಲೇ ಬೇರೆಡೆಗೆ ವರ್ಗಾವಣೆ ಮಾಡಬೇಕೆಂದು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಆರ್‌.ಪಿ.ಐ. ಸತೀಶ್ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲೂಕು ತಹಸೀಲ್ದಾರರಾಗಿ ನಾಲ್ಕು ಐದು ತಿಂಗಳುಗಳ ಹಿಂದೆ ಬಂದ ಗೀತಾ ಅವರು ಸದಾ ಸುದ್ದಿಯಲ್ಲಿರುವ ಅಧಿಕಾರಿ. ಹಿಂದೆಯೂ ಕೂಡ ಅವರು ಕಾರ್ಯನಿರ್ವಹಿಸಿರುವ ತಾಲೂಕುಗಳಲ್ಲಿ ಭ್ರಷ್ಟಾಚಾರ ಆರೋಪ ಹೊತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಲದವರಾದ ಗೀತಾ, ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ವೃತ್ತಿ ಜೀವನ ಆರಂಭಿಸಿ, ಚಿಕ್ಕಮಗಳೂರು ಜಿಲ್ಲಾ ಖಜಾನೆಯಲ್ಲಿ ಎಫ್‌ಡಿಎ ಆಗಿ ನಂತರ ಮುಗಳವಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ನಂತರ ಕೆಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ತಹಸೀಲ್ದಾರ್ ಆಗಿ ನೇಮಕಗೊಂಡರು. ಹೊಸದರಲ್ಲಿ ಇದೇ ತಾಲೂಕಿನ ಸಿದ್ದಾಪುರ ಗ್ರಾಮದ ಗಣೇಶ್ ಭಟ್ ಎಂಬುವರಿಗೆ ೯೪ಸಿನಲ್ಲಿ ವಜಾ ಆದ ಅರ್ಜಿಗೆ ಹಕ್ಕುಪತ್ರ ನೀಡಿ ಖಾತೆ ಮಾಡಿಕೊಟ್ಟ ಆರೋಪವನ್ನು ಇವರು ಹೊತ್ತುಕೊಂಡವರು ಎಂದು ದೂರಿದರು.

ಅಲ್ಲಿಂದ ತರೀಕೆರೆಗೆ ವರ್ಗಾವಣೆಯಾಗಿ ಬಂದ ನಂತರ ಇದೇ ತಾಲೂಕಿನ ಅಂಕನಹಳ್ಳಿ ಹೋಬಳಿ ಕೆಂಚನಹಳ್ಳಿ ಗ್ರಾಮದ ಸರ್ವೆ ನಂಬರ್ ೧೨ರಲ್ಲಿ ಅರ್ಹರಲ್ಲದವರ ೧೨ ಜನರಿಗೆ ಅರ್ಜಿ ಇಲ್ಲದೆ ಸಮಿತಿಯ ಗಮನಕ್ಕೆ ತರದೆ ಜಮೀನು ಮಂಜೂರು ಮಾಡಿರುವ ಆರೋಪ ಇದೆ. ಹಾಗೆಯೇ ಇದೇ ತಾಲೂಕಿನ ಹೊಸಳ್ಳಿ ಗ್ರಾಮದ ಸರ್ವೆ ನಂಬರ್ ೩೪ರಲ್ಲೂ ಅಕ್ರಮವಾಗಿ ಜಮೀನು ಮಂಜೂರು ಮಾಡಿರುವ ಆರೋಪವಿದೆ ಎಂದರು. ನಂತರ ಎನ್ ಆರ್‌ ಪುರಕ್ಕೆ ವರ್ಗಾವಣೆ ಆದ ನಂತರ ಅಕ್ರಮವಾಗಿ ಪೋಡಿ ಮಾಡಿರುವ ಆರೋಪ ದಡಿಯಲ್ಲಿ ಇವರ ವಿರುದ್ಧ ಜಿಲ್ಲಾಡಳಿತ ತನಿಖೆ ನಡೆಸುತ್ತಿದೆ ಎಂದು ತಿಳಿಸಿದರು.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಹಸೀಲ್ದಾರ್ ಆಗಿದ್ದ ಸಂದರ್ಭದಲ್ಲಿ ಅಕ್ರಮವಾಗಿ ಹಣೆ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಿ ಹಾಕಿಕೊಂಡು ಒಂದು ದಿನ ಬೆಂಗಳೂರು ಪರಪ್ಪನ ಜೈಲಿನಲ್ಲಿದ್ದು ನಂತರ ಆರೋಗ್ಯ ಸಮಸ್ಯೆ ಕಾರಣ ಹೇಳಿ ಎರಡು ತಿಂಗಳ ಆಸ್ಪತ್ರೆಯಲ್ಲಿದ್ದು ಜಾಮೀನು ಸಿಕ್ಕ ನಂತರ ಉಡುಪಿ ನಂತರ ಚನ್ನರಾಯಪಟ್ಟಣದಲ್ಲಿ ಕೆಲ ದಿನಗಳು ಕಾರ್ಯನಿರ್ವಹಿಸಿ ನಂತರ ನಮ್ಮ ಹಾಸನದ ಸಂಸದ ಶ್ರೇಯಸ್ ಪಟೇಲ್ ಅವರು ಶಿಫಾರಸು ಮೇರೆಗೆ ಹಾಸನಕ್ಕೆ ಬಂದಿರುವ ತಹಸೀಲ್ದಾರ್ ಅವರ ಮೇಲೆ ಇನ್ನು ಹಲವಾರು ಅವ್ಯವಹಾರಗಳು, ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿವೆ. ಇಂತಹ ತಹಸೀಲ್ದಾರ್‌ ಗೀತಾ ಅವರನ್ನು ಸಂಸದರು ಹಾಸನಕ್ಕೆ ಕರೆತಂದಿದ್ದು ಯಾಕೆ ಎಂಬುದು ತಿಳಿಯುತ್ತಿಲ್ಲ, ಆದ್ದರಿಂದ ಕೂಡಲೇ ತಹಸೀಲ್ದಾರ್‌ ಗೀತಾರವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು ಇಲ್ಲವಾದಲ್ಲಿ ಇವರ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡುತ್ತಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಬೂದೇಶ್ ನಿಟ್ಟೂರು, ಎನ್.ಎಸ್. ನಾಗರಾಜು, ತಾಲೂಕು ಅಧ್ಯಕ್ಷ ಶರತ್ ಕುಮಾರ್‌, ಉಪಾಧ್ಯಕ್ಷ ರಘು ಅಂಕಪುರ ಇತರರು ಉಪಸ್ಥಿತರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ