ಜಿಮ್-ಫಿಟ್ನೆಸ್‌ ಕ್ಲಬ್‌ಗಳಿಗೆ ಪೊಲೀಸರ ದಿಢೀರ್‌ ದೌಡು!

KannadaprabhaNewsNetwork |  
Published : Jul 14, 2026, 01:30 AM IST
13ಕೆಡಿವಿಜಿ11-ದಾವಣಗೆರೆ ವಿವಿಧ ಜಿಮ್-ಫಿಟ್ನೆಸ್ ಸೆಂಟರ್ ಗಳಿಗೆ ಸೋಮವಾರ ಬೆಳಿಗ್ಗೆ ದಿಢೀರನೇ ಭೇಟಿ ನೀಡಿ, ಪರಿಶೀಲಿಸಿದ ನಂತರ ಅಲ್ಲಿನ ಪುರುಷ, ಮಹಿಳೆಯರೊಂದಿಗೆ ಎಎಸ್ಪಿ ಪರಮೇಶ್ವರ ಹೆಗಡೆ ಚರ್ಚಿಸಿದರು. ......................13ಕೆಡಿವಿಜಿ12, 13, 14-ದಾವಣಗೆರೆ ವಿವಿಧ ಜಿಮ್-ಫಿಟ್ನೆಸ್ ಸೆಂಟರ್ ಗಳಿಗೆ ಸೋಮವಾರ ಬೆಳಿಗ್ಗೆ ದಿಢೀರನೇ ಭೇಟಿ ನೀಡಿ, ಪರಿಶೀಲಿಸಿದ ನಂತರ ಅಲ್ಲಿನ ಪುರುಷ, ಮಹಿಳೆಯರೊಂದಿಗೆ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು. | Kannada Prabha

ಸಾರಾಂಶ

ದಾವಣಗೆರೆ ನಗರ, ಜಿಲ್ಲಾದ್ಯಂತ ಜಿಮ್ ಮತ್ತು ಫಿಟ್‌ನೆಸ್ ಕ್ಲಬ್‌ಗಳಿಗೆ ಸೋಮವಾರ ಬೆಳಗ್ಗೆಯಿಂದಲೇ ಜಿಲ್ಲೆಯ ಪೊಲೀಸ್ ಅಧಿಕಾರಿ, ಪುರುಷ- ಮಹಿಳಾ ಸಿಬ್ಬಂದಿ ದಿಢೀರನೇ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

- ಮಹಿಳಾ ಸುರಕ್ಷತೆಗೆ ಇಲಾಖೆ ಒತ್ತು, ಶೀಘ್ರವೇ ಜಿಮ್ ಮಾಲೀಕರು, ಟ್ರೈನರ್ ಸಭೆ: ಎಸ್ಪಿ ಹೆಗಡೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ನಗರ, ಜಿಲ್ಲಾದ್ಯಂತ ಜಿಮ್ ಮತ್ತು ಫಿಟ್‌ನೆಸ್ ಕ್ಲಬ್‌ಗಳಿಗೆ ಸೋಮವಾರ ಬೆಳಗ್ಗೆಯಿಂದಲೇ ಜಿಲ್ಲೆಯ ಪೊಲೀಸ್ ಅಧಿಕಾರಿ, ಪುರುಷ- ಮಹಿಳಾ ಸಿಬ್ಬಂದಿ ದಿಢೀರನೇ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಇಲ್ಲಿನ ಸರಸ್ವತಿ ಬಡಾವಣೆಯ ಜಿಮ್‌ ಘಟನೆ ಹಿನ್ನೆಲೆ, ಮಾಧ್ಯಮಗಳಲ್ಲಿ ಸರಣಿ ವರದಿಗಳ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾ ಪೊಲೀಸ್ ಇಲಾಖೆಯು ಮಹಿಳೆಯರ ಸುರಕ್ಷತೆಯ ಹಿತದೃಷ್ಟಿಯಂದ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಎಚ್.ಟಿ.ಶೇಖರ್‌ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಉಸ್ತುವಾರಿಯಲ್ಲಿ ವಿವಿಧ ಜಿಮ್-ಫಿಟ್ನೆಸ್ ಕ್ಲಬ್‌ಗಳಿಗೆ ಪೊಲೀಸ್ ಅಧಿಕಾರಿ, ಸಿಬ್ಬಂದಿ ತಂಡ ದಿಢೀರ್‌ ಭೇಟಿ ನೀಡಿ, ಎಚ್ಚರಿಕೆಯನ್ನೂ ನೀಡಿತು.

ಇದೇ ವೇಳೆ ಎಎಸ್ಪಿ ಪರಮೇಶ್ವರ ಹೆಗಡೆ ಮಾತನಾಡಿ, ಜಿಲ್ಲೆಯಲ್ಲಿ ಮಹಿಳೆಯರ ಸುರಕ್ಷತೆಯ ಆದ್ಯತೆಯಿಂದ ಎಸ್ಪಿ ಡಾ. ಎಚ್.ಟಿ. ಶೇಖರ್‌ ಅವರ ಮಾರ್ಗದರ್ಶನದಲ್ಲಿ ತಮ್ಮ ಉಸ್ತುವಾರಿಯಲ್ಲಿ ಡಿವೈಎಸ್ಪಿ, ಸಿಪಿಐಗಳ ನೇತೃತ್ವದಲ್ಲಿ ಮಹಿಳಾ ಅಧಿಕಾರಿ, ಸಿಬ್ಬಂದಿಯನ್ನು ಒಳಗೊಂಡ ಪ್ರತ್ಯೇಕ ತಂಡಗಳನ್ನು ರಚಿಸಿ, ಮೊದಲ ಹಂತವಾಗಿ ಸೋಮವಾರ ಜಿಲ್ಲಾ ಕೇಂದ್ರದ ವಿವಿಧ ಜಿಮ್‌, ಫಿಟ್ನೆಸ್‌ ಕ್ಲಬ್‌ಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ, ಪರಿಶೀಲಿಸುತ್ತಿದ್ದೇವೆ ಎಂದರು.

ವಿವಿಧ ಜಿಮ್‌-ಫಿಟ್ನೆಸ್ ಸೆಂಟರ್‌ಗಳ ಮಾಲೀಕರು, ತರಬೇತುದಾರರು, ಮಹಿಳಾ ತರಬೇತುದಾರರ ಬಗ್ಗೆ, ಜಿಮ್-ಫಿಟ್ನೆಸ್‌ ಸೆಂಟರ್‌ನಲ್ಲಿ ಕಾರ್ಯ ನಿರ್ವಹಿಸುವ ತರಬೇತುದಾರರು, ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಮುನ್ನ ಅಂತಹವರ ಪೂರ್ವಾಪರಗಳನ್ನೂ ವಿಚಾರಿಸಿ, ನೇಮಕ ಮಾಡಿಕೊಳ್ಳಬೇಕು. ಜಿಮ್ ಮತ್ತು ಫಿಟ್ನೆಸ್ ಸೆಂಟರ್‌ಗಳಿಗೆ ಇನ್ನು ಮುಂದೆ ನಮ್ಮ ಅಧಿಕಾರಿ, ಸಿಬ್ಬಂದಿ ತಂಡ ನಿಯಮಿತವಾಗಿ ಭೇಟಿ ನೀಡುತ್ತಿರುತ್ತದೆ ಎಂದು ಎಚ್ಚರಿಸಿದರು.

ಜಿಮ್ ಮತ್ತು ಫಿಟ್ನೆಸ್ ಸೆಂಟರ್‌ಗಳಿಗೆ ಬಂದಿದ್ದ ವಿದ್ಯಾರ್ಥಿನಿಯರು, ಯುವತಿಯರು, ಗೃಹಿಣಿಯರು, ಹಿರಿಯ ನಾಗರೀಕರೊಂದಿಗೆ ಚರ್ಚಿಸಿದ ಎಎಸ್ಪಿ ಪರಮೇಶ್ವರ ಹೆಗಡೆ ಹಾಗೂ ಅಧಿಕಾರಿಗಳು ಯಾವುದೇ ಜಿಮ್-ಫಿಟ್ನೆಸ್ ಸೆಂಟರ್‌ಗಳಲ್ಲಿ ನಿಮಗೆ ಯಾರಿಗಾದರೂ ಕಹಿ ಅನುಭವ, ಅಸುರಕ್ಷತೆ- ಅನುಮಾನಾಸ್ಪದ ಚಟುವಟಿಕೆಗಳು, ಅಸಹಜ ಬೆಳವಣಿಗೆಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿಡುವುದಾಗಿ ಭರವಸೆ ನೀಡಿದರು. ಪ್ರತಿಯೊಂದು ಜಿಮ್ ಮತ್ತು ಫಿಟ್ನೆಸ್ ಸೆಂಟರ್‌ಗಳ ಮಾಲೀಕರು, ತರಬೇತುದಾರರ ಸಭೆಯನ್ನು ಶೀಘ್ರವೇ ನಡೆಸಿ, ಅಗತ್ಯ ಸೂಚನೆಗಳನ್ನೂ ಸಹ ಪೊಲೀಸ್ ಇಲಾಖೆಯಿಂದ ನೀಡಲಾಗುವುದು ಎಂದು ಎಎಸ್ಪಿ ಪರಮೇಶ್ವರ ಹೆಗಡೆ ಸೂಚಿಸಿದರು.

ಪೊಲೀಸ್ ಅಧಿಕಾರಿ, ಸಿಬ್ಬಂದಿ, ಮಹಿಳಾ ಅಧಿಕಾರಿ, ಸಿಬ್ಬಂದಿ, ಜಿಮ್ ಮಾಲೀಕರು, ತರಬೇತುದಾರರು, ಜಿಮ್-ಫಿಟ್ನೆಸ್ ಸೆಂಟರ್‌ಗಳ ಸದಸ್ಯರು, ಸಾರ್ವನಿಜಕರು, ವಿದ್ಯಾರ್ಥಿನಿಯರು, ಯುವತಿಯರು, ಉದ್ಯೋಗಸ್ಥ ಮಹಿಳೆಯರು, ಗೃಹಿಣಿಯರು ಈ ಸಂದರ್ಭದಲ್ಲಿದ್ದರು.

ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಕನ್ನಡಪ್ರಭ ಕಳೆದ ನಾಲ್ಕೈದು ದಿನಗಳಿಂದ ನಿರಂತರ ಸರಣಿ ವರದಿ ಮಾಡಿ, ಜಿಮ್ ಮತ್ತು ಫಿಟ್ನೆಸ್ ಸೆಂಟರ್‌ಗಳ ದುಶ್ಯಾಸನರ ಹಾವಳಿ ಬಗ್ಗೆ ವರದಿ ಮಾಡಿತ್ತು. ಕಡೆಗೂ ಪೊಲೀಸ್ ಇಲಾಖೆಯ ಸೋಮವಾರದ ನಡೆ ಜನರಲ್ಲೀಗ ಒಂದಿಷ್ಟು ವಿಶ್ವಾಸ ಮೂಡಿಸಿದೆ.

- - -

-13ಕೆಡಿವಿಜಿ11: ದಾವಣಗೆರೆ ವಿವಿಧ ಜಿಮ್-ಫಿಟ್ನೆಸ್ ಸೆಂಟರ್ ಗಳಿಗೆ ಸೋಮವಾರ ಬೆಳಿಗ್ಗೆ ದಿಢೀರನೇ ಭೇಟಿ ನೀಡಿ, ಪರಿಶೀಲಿಸಿದ ನಂತರ ಅಲ್ಲಿನ ಪುರುಷ, ಮಹಿಳೆಯರೊಂದಿಗೆ ಎಎಸ್ಪಿ ಪರಮೇಶ್ವರ ಹೆಗಡೆ ಚರ್ಚಿಸಿದರು. -13ಕೆಡಿವಿಜಿ12, 13, 14: ದಾವಣಗೆರೆ ವಿವಿಧ ಜಿಮ್-ಫಿಟ್ನೆಸ್ ಸೆಂಟರ್‌ಗಳಿಗೆ ಸೋಮವಾರ ಬೆಳಗ್ಗೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ದಿಢೀರನೇ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಅಲ್ಲಿದ್ದ ಪುರುಷ, ಮಹಿಳೆಯರೊಂದಿಗೆ ಸಮಾಲೋಚನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಜಿ ಸಿಎಂ ಸಿದ್ದರಾಮಯ್ಯ ಪಲಾಯನವಾದಿ: ಕೌಟಿಲ್ಯ ಕಿಡಿ
ಜನಪದ ರಂಗಭೂಮಿಗೆ ಮರುಜೀವ ನೀಡಬೇಕು; ವೆಂಕಟೇಶ್