ಗಾಂಜಾ ಬೆಳೆದು ತಗಲಾಕ್ಕೊಂಡ ಪೊಲೀಸಪ್ಪನ ಪುತ್ರ

KannadaprabhaNewsNetwork |  
Published : Sep 22, 2026, 01:15 AM IST
ಗುಬ್ಬಿ ತಾಲ್ಲೂಕಿನ ಗುಡ್ಡದಹಳ್ಳಿ ಹಟ್ಟಿ ಗ್ರಾಮದಲ್ಲಿ ದಾಳಿ ನಡೆಸಿ ಅಗಸೆಗಿಡಗಳ ಮದ್ಯೆ 8 ಅಡಿ ಉದ್ದದ ಗಾಂಜಾ ಗಿಡ ಬೆಳೆದಿದ್ದು ಅಂದಾಜು 950 ಗ್ರಾಂ ತೂಕದ ಗಾಂಜಾ ಸೊಪ್ಪು ಸೇರಿದಂತೆ ತೋಟದ ಮಾಲೀಕ ಪೊಲೀಸಪ್ಪನ ಮಗನನ್ನು ಬಂಧಿಸಿರುವ ಘಟನೆ  ನಡೆದಿದೆ. | Kannada Prabha

ಸಾರಾಂಶ

ಪೊಲೀಸ್​​ ಸಿಬ್ಬಂದಿಯ ಪುತ್ರನೇ ಗಾಂಜಾ ಕೃಷಿ ಮಾಡಿರೋದು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಗುಡ್ಡದಹಳ್ಳಿ ಹಟ್ಟಿ ಗ್ರಾಮದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಗುಬ್ಬಿ ಡ್ರಗ್ಸ್​​ ಮುಕ್ತ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಸರ್ಕಾರ ಅದರಲ್ಲೂ ಪೊಲೀಸ್​​ ಇಲಾಖೆ ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದೆ. ಮಾದಕ ವಸ್ತು ಜಾಲದ ಮೇಲೆ ಹದ್ದಿನ ಕಣ್ಣಿಟ್ಟು ಪೆಡ್ಲರ್​​ಗಳ ಹೆಡೆಮುರಿ ಕಟ್ಟುವ ಕೆಲಸ ಮಾಡುತ್ತಿದೆ. ಆದರೆ ದುರ್ದೈವ ಎಂಬಂತೆ ಇಂತಹುದ್ದೇ ಕೆಲಸ ನಿರ್ವಹಿಸುತ್ತಿದ್ದ ಪೊಲೀಸ್​​ ಸಿಬ್ಬಂದಿಯ ಪುತ್ರನೇ ಗಾಂಜಾ ಕೃಷಿ ಮಾಡಿರೋದು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಗುಡ್ಡದಹಳ್ಳಿ ಹಟ್ಟಿ ಗ್ರಾಮದಲ್ಲಿ ನಡೆದಿದೆ. ಪೊಲೀಸಪ್ಪನ ಪುತ್ರ ತೋಟದಲ್ಲಿ ಗಾಂಜಾ ಗಿಡ ಬೆಳೆದಿದ್ದು ಕಂಡು ಸ್ಥಳೀಯರಿಗೂ ಶಾಕ್​​ ಆಗಿದೆ.ಹಿತೇಂದ್ರ (28) ಬಂಧಿತ ಆರೋಪಿಯಾಗಿದ್ದು, ಈತನ ತಂದೆ ತುಮಕೂರಿನ ಪೊಲೀಸ್ ಠಾಣೆಯೊಂದರ ಸಿಬ್ಬಂದಿ. ಅತ್ತ ಮಾದಕ ವಸ್ತುವಿನಿಂದ ದೂರು ಇರುವಂತೆ ತಂದೆಯಿಂದ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದ್ದರೆ, ಇತ್ತ ಅವರ ಪುತ್ರ ಮಾತ್ರ ಮಾಡಬಾರದ ಕೆಲಸ ಮಾಡಿರೋದು ಪೊಲೀಸರ ದಾಳಿ ವೇಳೆ ಬಯಲಾಗಿದೆ. ಖಚಿತ ಮಾಹಿತಿ ಆಧರಿಸಿ ತನಿಖೆ ಕೈಗೊಂಡ ಚೇಳೂರು ಪೊಲೀಸರು, ತೋಟದಲ್ಲಿ ಗೊಬ್ಬರ ಹಾಕಿ ಸೊಗಸಾಗಿ ಬೆಳೆಸಿದ್ದ 8.2 ಅಡಿ ಎತ್ತರ ಬೆಳೆದಿದ್ದ ಗಾಂಜಾ ಗಿಡ ಪತ್ತೆ ಮಾಡಿದ್ದಾರೆ. ಬರೋಬ್ಬರಿ 950 ಗ್ರಾಂಗಳಷ್ಟು ತೂಕವಿದ್ದ ಗಿಡವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಯ ವಿಚಾರಣೆ ಮುಂದುವರಿಸಿದ್ದಾರೆ.

ಗಾಂಜಾ ಗಿಡ ಬೆಳೆದಿದ್ದು ದೇವರ ಪೂಜೆಗೆ!

ಇನ್ನು ಗಾಂಜಾ ಕೃಷಿ ಸಂಬಂಧ ಆರೋಪಿ ಹಿತೇಂದ್ರನ ವಿಚಾರಣೆ ವೇಳೆ ಆತ ನೀಡಿದ ಉತ್ತರ ಕೇಳಿ ಪೊಲೀಸರು ಹೌಹಾರಿದ್ದಾರೆ. ದೇವರ ಪೂಜೆಗೆಂದು ತಾನು ಗಾಂಜಾ ಗಿಡ ಬೆಳೆಸಿದ್ದೆ ಎಂದು ಪೊಲೀಸರ ಬಳಿ ಆರೋಪಿ ಹೇಳಿದ್ದಾನೆ ಎನ್ನಲಾಗಿದ್ದು, ಹೂ ಬಿಡುವ ಮುನ್ನವೇ ಗಿಡವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಇನ್ನಷ್ಟು ಮಾಹಿತಿ ಸಂಪೂರ್ಣ ವಿಚಾರಣೆಯ ಬಳಿಕವೇ ಬಹಿರಂಗವಾಗಬೇಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿತರಣಾ ಕಾಲುವೆಗಳಿಗೆ ನೀರು ಪೂರೈಕೆ ಸ್ಥಗಿತ: ಜಿಲ್ಲಾಧಿಕಾರಿ ಆದೇಶಕ್ಕೆ ಖಂಡನೆ
ದೇಶದ ಅಭಿವೃದ್ಧಿಗೆ ಇಂಜಿನಿಯರರಿಂದ ಅಮೂಲ್ಯ ಕೊಡುಗೆ