ತುಮುಲ್‌ನಿಂದ 26.94 ಕೋಟಿ ಪರಿಹಾರ ವಿತರಣೆ

KannadaprabhaNewsNetwork |  
Published : Sep 22, 2026, 01:15 AM IST
ಗುಬ್ಬಿತಾಲ್ಲೂಕಿನ ಚೇಳೂರು ಹೋಬಳಿ ಸಾತೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ತುಮಕೂರು ಹಾಲು ಒಕ್ಕೂಟದಿಂದ ಏರ್ಪಡಿಸಿದ್ದ 2026-27ನೇ ಸಾಲಿನ ಗುಂಪು ರಾಸು ವಿಮೆಗೆ ಗೋಮಾತೆಗೆ ಪೂಜೆ ಸಲ್ಲಿಸಿ ಅಕ್ಕಿ, ಬೆಲ್ಲ ಬಾಳೆಹಣ್ಣು ತಿನ್ನಿಸುವ ಮೂಲಕ ಉದ್ಘಾಟಿಸಿದ ತುಮುಲ್ ನಿರ್ದೇಶಕಿ ಭಾರತಿ ಶ್ರೀನಿವಾಸ್. | Kannada Prabha

ಸಾರಾಂಶ

ತುಮಕೂರು ಹಾಲು ಒಕ್ಕೂಟದಿಂದ 204855 ರಾಸುಗಳಿಗೆ 26.94 ಕೋಟಿ ಪರಿಹಾರ ನೀಡಲಾಗಿದೆ. ಈ ವರ್ಷ 3450 ರಾಸುಗಳು ಮರಣ ಹೊಂದಿದ್ದು, 18 ಕೋಟಿ ಪರಿಹಾರವನ್ನು ನೀಡಲಾಗಿದೆ ಎಂದು ತುಮುಲ್ ನಿರ್ದೇಶಕಿ ಭಾರತಿ ಶ್ರೀನಿವಾಸ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ತುಮಕೂರು ಹಾಲು ಒಕ್ಕೂಟದಿಂದ 204855 ರಾಸುಗಳಿಗೆ 26.94 ಕೋಟಿ ಪರಿಹಾರ ನೀಡಲಾಗಿದೆ. ಈ ವರ್ಷ 3450 ರಾಸುಗಳು ಮರಣ ಹೊಂದಿದ್ದು, 18 ಕೋಟಿ ಪರಿಹಾರವನ್ನು ನೀಡಲಾಗಿದೆ ಎಂದು ತುಮುಲ್ ನಿರ್ದೇಶಕಿ ಭಾರತಿ ಶ್ರೀನಿವಾಸ್ ತಿಳಿಸಿದರು. ತಾಲ್ಲೂಕಿನ ಚೇಳೂರು ಹೋಬಳಿ ಸಾತೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ತುಮಕೂರು ಹಾಲು ಒಕ್ಕೂಟದಿಂದ ಏರ್ಪಡಿಸಿದ್ದ 2026-27ನೇ ಸಾಲಿನ ಗುಂಪು ರಾಸು ವಿಮೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಾಲು ಉತ್ಪಾದಕರು ತಮ್ಮ ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿಕೊಳ್ಳುವ ಮೂಲಕ ಆಕಸ್ಮಿಕ ನಷ್ಟದಿಂದ ರಕ್ಷಣೆ ಪಡೆಯಬೇಕು. ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಲಾಭಾಂಶ ಲಭ್ಯವಿದ್ದಲ್ಲಿ ಸಂಘದ ವತಿಯಿಂದಲೇ ರಾಸುಗಳಿಗೆ ವಿಮೆ ಮಾಡಿಸಬಹುದಾಗಿದೆ. ಲಾಭಾಂಶದ ಕೊರತೆಯಿದ್ದಲ್ಲಿ ರೈತರು ಒಂದು ರಾಸುಗೆ ವಿಮಾ ಮೊತ್ತ 75000 ರು.ಗೆ 540 ರು. ವಂತಿಗೆ ಪಾವತಿಸಿ, ಎಮ್ಮೆಗಳಿಗೆ 40000 ಪರಿಹಾರ ಮೊತ್ತಕ್ಕೆ 288 ರು. ಪಾವತಿಸಿ ವಿಮೆ ಮಾಡಿಸಿಕೊಳ್ಳಬೇಕು. ಸೆ.21ರಿಂದ ಮಾರ್ಚ್ ತಿಂಗಳ ಕೊನೆಯವರೆಗೂ ವಿಮೆ ಮಾಡಿಸಬಹುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಆರ್. ರಾಜಣ್ಣ, ಉಪಾಧ್ಯಕ್ಷ ಆರ್. ರಂಗಯ್ಯ, ಕಾರ್ಯದರ್ಶಿ ಸಿ. ಲೋಕೇಶ್ವರ್, ಒಕ್ಕೂಟದ ಸಿಬ್ಬಂದಿ ಶಂಕರನಾಗ್, ಮಹೇಶ್, ರಾಜು, ಸುದೀಪ್, ಪಶುವೈದ್ಯರಾದ ಸಾಯಿಪ್ರಕಾಶ್, ಗುಮಾಸ್ತ ಶ್ರೀಧರಮೂರ್ತಿ, ಹಾಲು ಪರೀಕ್ಷಕ ಸಿ.ಜೆ. ಲೋಕೇಶ್, ಬೋರಣ್ಣ, ತಾಲೂಕಿನ ಕಾರ್ಯದರ್ಶಿಗಳು, ಸಿಬ್ಬಂದಿಗಳು ಹಾಗೂ ಹಾಲು ಉತ್ಪಾದಕ ರೈತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತನಿಖೆಗೆ ಸಹಕರಿಸದ ಫೈಜರ್‌ ಔಷಧಕ್ಕೆ ರಾಜ್ಯದಲ್ಲಿ ನಿಷೇಧ!
ಕರೆಂಟ್‌ ಯಾವಾಗ ಬರುತ್ತೆ?: ರೈತರಿಗೆ ನೈಟ್‌ ಶಿಫ್ಟ್‌ ಕೆಲಸ ಸಂಕಷ್ಟ