ಕೋವಿಡ್ ವೇಳೆ ಸ್ವಂತ ಹಣದಿಂದ ಬಡವರಿಗೆ ರೇಷನ್ ಹಂಚಿದ್ದ ಪೊಲೀಸ್ ಸಿಬ್ಬಂದಿ ಹೃದಯಾಘಾತದಿಂದ ಸಾವು!

KannadaprabhaNewsNetwork |  
Published : Oct 06, 2023, 01:14 AM ISTUpdated : Oct 07, 2023, 12:42 PM IST
Police

ಸಾರಾಂಶ

ಕೋವಿಡ್ ಸಮಯದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿಯೇ ರೇಷನ್ ಕೊಟ್ಟ ಪೊಲೀಸ್ ಹೃದಯಾಘಾತಕ್ಕೆ ಬಲಿ.

ಮಂಗಳೂರು (ಅ.05): ನಗರ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ವಿಜಯಪುರ ಜಿಲ್ಲೆಯವರಾದ ಸೋಮನ ಗೌಡ ಚೌಧರಿ (31) ಮೃತಪಟ್ಟ ದುರ್ದೈವಿ. ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ನಲ್ಲಿ ವಯರ್‌ವೆಲ್‌ ಇನ್‌ಸ್ಪೆಕ್ಟರ್‌ ವಾಹನಕ್ಕೆ ಇವರು ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇನ್‌ಸ್ಪೆಕ್ಟರ್‌ಗೆ ಡೆಂಘೀ ಜ್ವರ ಬಾಧಿಸಿದ್ದರಿಂದ ನಗರದ ಫಳ್ನಿರ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಮಂಗಳವಾರ ಬೆಳಗ್ಗೆ ಕರೆದುಕೊಂಡು ಹೋಗಿದ್ದರು.

ಅಧಿಕಾರಿಯನ್ನು ಆಸ್ಪತ್ರೆ ಬಳಿ ಇಳಿಸಿ ವಾಹನ ಪಾರ್ಕ್ ಮಾಡಲು ಹೋದ ಸಂದರ್ಭ ಸೋಮನ ಗೌಡ ಏಕಾಎಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಧಾವಿಸಿ 112ಕ್ಕೆ ಕರೆ ಮಾಡಿ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲು ಹೋಗುತ್ತಿರಬೇಕಾದರೆ ದಾರಿ ಮಧ್ಯೆ ಸಾವಿಗೀಡಾಗಿದ್ದಾರೆ. ವಿವಾಹಿತರಾಗಿರುವ ಸೋಮನ ಗೌಡ ಕಳೆದ 7 ವರ್ಷಗಳಿಂದ ನಗರ ಸಶಸ್ತ್ರ ದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸ್ವಂತ ಹಣದಿಂದ ಬಡವರಿಗೆ ಸೋಮನಗೌಡ ರೇಷನ್ ಹಂಚಿದ್ದರು. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...