18 ಮೂಟೆಯಲ್ಲಿ 786 ಕೇಜಿ ಅಕ್ಕಿ ಕಳ್ಳಸಾಗಣೆ: ಓರ್ವ ಸೆರೆ

KannadaprabhaNewsNetwork |  
Published : Feb 13, 2026, 01:45 AM IST
ಕೊಳ್ಳೇಗಾಲ ಅಣಗಳ್ಳಿ ಬಳಿ 18 ಮೂಟೆ ಅಕ್ಕಿ ಸಮೇತ ಪಟ್ಟಣ ಪೊಲೀಸರು ಆರೋಪಿ ಬಂಧಿಸಿದರು. ಆಹಾರ ನಿರೀಕ್ಷಕ ಪ್ರಸಾದ್, ಪಿಎಸೈ ವರ್ಷಾ ಇನ್ನಿತರಿದ್ದರು. | Kannada Prabha

ಸಾರಾಂಶ

18ಕ್ಕೂ ಅಧಿಕ ಮೂಟೆ ಪಡಿತರೆ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಇಲ್ಲಿನ ಪೊಲೀಸರು ವ್ಯಕ್ತಿಯನ್ನು ಗುರುವಾರ ಬಂಧಿಸಿದ್ದಾರೆ.

- ಖಚಿತ ಮಾಹಿತಿ ಮೇರೆಗೆ ಕೊಳ್ಳೆಗಾಲ ಪೊಲೀಸರ ದಾಳಿ

---

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

18ಕ್ಕೂ ಅಧಿಕ ಮೂಟೆ ಪಡಿತರೆ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಇಲ್ಲಿನ ಪೊಲೀಸರು ವ್ಯಕ್ತಿಯನ್ನು ಗುರುವಾರ ಬಂಧಿಸಿದ್ದಾರೆ.ತಾಲೂಕಿನ ಹಳೇ ಅಣಗಳ್ಳಿ ಗ್ರಾಮದ ರಸ್ತೆಯಲ್ಲಿ ಓಮ್ನಿ ಕಾರಿನಲ್ಲಿ ಅಕ್ರಮವಾಗಿ 18 ಮೂಟೆ ಪಡಿತರ ಅಕ್ಕಿಯನ್ನು ಸಾಗಾಣಿಕೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ತಿರುಮಕೂಡಲು ನರಸೀಪುರ ಟೌನ್ ನಿವಾಸಿ ಜುನೈಲ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನಿಂದ 786 ಕೇಜಿ ಅಕ್ಕಿ ಸಮೇತ ಮಾರುತಿ ಒಮ್ನಿಯನ್ನು ವಶಪಡೆದಿದ್ದಾರೆ.ಈತ ಕೊಳ್ಳೇಗಾಲದ ಸುತ್ತಮುತ್ತಲಿನಲ್ಲಿ ಕಡಿಮೆ ಬೆಲೆಗೆ ಅಕ್ಕಿ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಲುವಾಗಿ ಕಾರಿನಲ್ಲಿಟ್ಟುಕೊಂಡು ಸಾಗಾಣಿಕೆ ಮಾಡುವಾಗ ಹಳೇ ಅಣಗಳ್ಳಿ ಗ್ರಾಮದಲ್ಲಿ ಖಚಿತ ಮಾಹಿತಿ ಮೇರೆಗೆ ಆಹಾರ ನಿರೀಕ್ಷಕ ಪ್ರಸಾದ್, ಟೌನ್ ಎಸ್ಐ ವರ್ಷಾ, ಪೇದೆ ಶಿವಮಂಜು, ರಾಜು, ಮಾಸರ್ಲ್, ಬಸವರಾಜು, ದ್ವಾರಕೀಶ್‌, ನಾಗರಾಜು ಇನ್ನಿತರರು ದಾಳಿ ನಡೆಸಿ ಆರೋಪಿ ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

--- 12ಕೆಜಿಎಲ್12

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವ ಪೀಳಿಗೆ ಪೋಷಕಾಂಶಗಳ ಕೊರತೆ
ಪುಟ 2ಕ್ಕೆ ಬಾಟಮ್....ಗುರುವಂದನಾ, ಸ್ನೇಹ ಸಮ್ಮಿಲನ ಕಾರ್ಯಕ್ರಮ