ಅಪಾಯಕಾರಿ ಸ್ಥಳದಲ್ಲಿದ್ದ ಮಗುವಿನ ಪಾಲಕರನ್ನು ಸೈರನ್‌ ಮೊಳಗಿಸಿ ಎಚ್ಚರಿಸಿದ ಪೊಲೀಸರು

KannadaprabhaNewsNetwork |  
Published : Jun 02, 2025, 12:17 AM ISTUpdated : Jun 02, 2025, 08:14 AM IST
  ಪೊಲೀಸ್ ಅನೌನ್ಸ ನಂತರ ಮಗವನ್ನ ಹಿಡಿದು ರಕ್ಷಿಸಿರುವುದು ಕ್ಯಾಮರಾದಲ್ಲಿ ಸೆರೆಯಾದ ದಂ  ಪೊಲೀಸ್ ಅನೌನ್ಸ ನಂತರ ಮಗವನ್ನ ಹಿಡಿದು ರಕ್ಷಿಸಿರುವುದು ಕ್ಯಾಮರಾದಲ್ಲಿ ಸೆರೆಯಾದ ದಂಪತಿಗಳು ಪತಿಗಳು  | Kannada Prabha

ಸಾರಾಂಶ

ಗಂಗಾವಳಿ ನದಿಯ ಸೇತುವೆಯ ಕಟ್ಟೆ ಮೇಲೆ ಪುಟ್ಟ ಮಗುವನ್ನು ಅಪಾಯಕಾರಿ ಸ್ಥಿತಿಯಲ್ಲಿಟ್ಟ ಪ್ರವಾಸಿ ದಂಪತಿಯ ಹುಚ್ಚಾಟವನ್ನು ಇಲ್ಲಿನ ಪೊಲೀಸರು ಸಿಸಿ ಕ್ಯಾಮೆರಾ ಮೂಲಕ ಗಮನಿಸಿ ಕ್ಯಾಮೆರಾದ ಮೂಲಕವೇ ಸೈರನ್ ಮೊಳಗಿಸಿ ಎಚ್ಚರಿಸಿದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

ಗೋಕರ್ಣ: ಗಂಗಾವಳಿ ನದಿಯ ಸೇತುವೆಯ ಕಟ್ಟೆ ಮೇಲೆ ಪುಟ್ಟ ಮಗುವನ್ನು ಅಪಾಯಕಾರಿ ಸ್ಥಿತಿಯಲ್ಲಿಟ್ಟ ಪ್ರವಾಸಿ ದಂಪತಿಯ ಹುಚ್ಚಾಟವನ್ನು ಇಲ್ಲಿನ ಪೊಲೀಸರು ಸಿಸಿ ಕ್ಯಾಮೆರಾ ಮೂಲಕ ಗಮನಿಸಿ ಕ್ಯಾಮೆರಾದ ಮೂಲಕವೇ ಸೈರನ್ ಮೊಳಗಿಸಿ ಎಚ್ಚರಿಸಿದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

ವಾಹನ ಸಂಚಾರಕ್ಕೆ ಮುಕ್ತಗೊಂಡ ಸೇತುವೆ ಮೇಲೆ ಗೋಕರ್ಣದಿಂದ ಅಂಕೋಲಾಕ್ಕೆ ಪ್ರವಾಸಿ ದಂಪತಿ ಕಾರಿನಲ್ಲಿ ತೆರಳುತ್ತಿದ್ದರು. ಸೇತುವೆಯ ಬಳಿ ವಾಹನ ನಿಲ್ಲಿಸಿ ಪೋಟೋ ತೆಗೆಯಲು ಸೇತುವೆ ಕಟ್ಟೆ ಬಳಿ ತೆರಳಿದ್ದಾರೆ. ಕೈಯಲ್ಲಿರುವ ಪುಟ್ಟ ಮಗುವನ್ನು ನಿಲ್ಲಿಸಿದ್ದು, ಸ್ವಲ್ಪ ಯಾಮಾರಿದರೂ ನದಿಪಾಲಾಗುವ ಅಪಾಯವಿತ್ತು. ಠಾಣೆಯಲ್ಲಿ ಈ ದೃಶ್ಯವನ್ನು ಗಮನಿಸಿದ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾದರು.

ಮಗುವನ್ನು ರಕ್ಷಿಸಿಕೊಳ್ಳುವಂತೆ ಪಿಐ ಶ್ರೀಧರ್ ಎಸ್.ಆರ್. ಅನೌನ್ಸ್‌ ಮಾಡಿದ್ದು, ಯಾರೂ ಇಲ್ಲದ ಸ್ಥಳದಲ್ಲಿ ಏಕಾಏಕಿ ಧ್ವನಿ ಕೇಳಿದ ದಂಪತಿ ತಕ್ಷಣ ಪುಟ್ಟ ಕಂದಮ್ಮನನ್ನು ತಬ್ಬಿಕೊಂಡು ಬದಿಯಲ್ಲಿ ತೆರಳಿದರು. ಸಮಯಪ್ರಜ್ಞೆಯಿಂದ ಪುಟ್ಟ ಮಗುವಿನ ಜೀವ ಉಳಿಸಿದ ಇಲ್ಲಿ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸಿಸಿ ಅಭಿನಂದಿಸಿದ್ದಾರೆ.

ಇತ್ತೀಚೆಗೆ ಎಸ್ಪಿ ಎಂ. ನಾರಾಯಣ ಮಾರ್ಗದರ್ಶನದಂತೆ ಪೊಲೀಸ್ ಮಾಹಿತಿ ಕೇಂದ್ರ ಪುನರ್ ಆರಂಭಿಸಿದ್ದು, ಈ ವೇಳೆ ಹಲವಾರು ಕಡೆ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ. ಇದರಂತೆ ಗೋಕರ್ಣದಿಂದ ಐದು ಕಿ.ಮೀ. ಹೆಚ್ಚು ದೂರದ ನೂತನ ಗಂಗಾವಳಿ ಸೇತುವೆಯ ಮೇಲೆ ಕ್ಯಾಮೆರಾ ಅಳವಡಿಸಲಾಗಿತ್ತು. ಅದು ಇಂದು ಮಗುವಿನ ರಕ್ಷಣೆಗೆ ನೆರವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಗಾಂಧಿ ಬಗ್ಗೆ ನಿರಂತರ ಅಪಪ್ರಚಾರ ಸಲ್ಲ
33 ಅಂಕ ನೀಡಿಕೆ ಬಗ್ಗೆ ಬರಗೂರು ಅಸಮಾಧಾನ