ಮಸ್ಕಿ: ಪಟ್ಟಣದ ವಾಲ್ಮೀಕಿ ವೃತ್ತದ ಹತ್ತಿರ ಬಳಗಾನೂರು ಪೊಲೀಸ್ ಠಾಣೆಯ ಮಂಜುನಾಥ್ ಹಾಗೂ ಗೋಪಾಲ್ ಎಂಬ ಪೊಲೀಸ್ ಪೇದೆಗಳ ಮೇಲೆಐದರಿಂದ ಆರು ಜನರ ತಂಡ ಹಾಡುಹಗಲೇ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
ಮಸ್ಕಿಯ ಜನದಟ್ಟಣೆ ಪ್ರದೇಶವಾಗಿರುವ ಇಲ್ಲಿನ ವಾಲ್ಮೀಕಿ ವೃತ್ತದ ಹತ್ತಿರದ ಮುಖ್ಯರಸ್ತೆಯ ಬಳಿ ದ್ವಿಚಕ್ರ ವಾಹನದಲ್ಲಿ ತಾಮ್ರದ ತಂತಿಗಳನ್ನು ಸಾಗಿಸಲಾಗುತ್ತಿದೆ ಎಂಬ ಸಂಶಯ ಮೇಲೆ ವಿಚಾರಣೆ ನಡೆಸುತ್ತಿದ್ದ ಸಮಯದಲ್ಲಿ 5-6 ಜನರಿದ್ದ ತಂಡ ಪೊಲೀಸರನ್ನು ತಳ್ಳಿ ಕಲ್ಲು ಹಾಗೂ ರಾಡ್‌ಗಳಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.ಹಲ್ಲೆ ಒಳಗಾಗಿದ್ದ ಗಾಯಳು ಪೊಲೀಸ್ ಪೇದೆ ಮಂಜುನಾಥ್ ಹಾಗೂ ಗೋಪಾಲ್ ಅವರಿಗೆ ಮಸ್ಕಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪಿಎಸ್ಐ ದಾದಾವಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಬಳಗಾನೂರು ಪೊಲೀಸ್ ಠಾಣಾ ವ್ಯಾಪ್ತಿಯ ಸುಂಕನೂರು ಗ್ರಾಮದಲ್ಲಿ ಕಳ್ಳತನ ಪ್ರಕರಣ ಒಂದಕ್ಕೆ ಸಂಬಂಧಪಟ್ಟಂತೆ ಆರೋಪಿಗಳ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿರುವ ಸಂದರ್ಭದಲ್ಲಿ ಗುಡದೂರು ಬಳಿ ದ್ವಿಚಕ್ರ ವಾಹನದಲ್ಲಿ ಸಂಶಯಾಸ್ಪದವಾಗಿ ಬೈಕನಲ್ಲಿ ಹೋಗುತ್ತಿದ್ದವರನ್ನು ಪೊಲೀಸರು ತಡೆದು ಕೇಳುತ್ತಿದ್ದ ಪೊಲೀಸರನ್ನು ತಳ್ಳಿ ನಂತರ ಅಲ್ಲಿಂದ ಮಸ್ಕಿ ಮಾರ್ಗವಾಗಿ ದ್ವಿಚಕ್ರ ವಾಹನದಲ್ಲಿ ಬಂದಿದ್ದಾರೆ ಅವರನ್ನು ಬೆನ್ನಟ್ಟಿ ಬಂದ ಪೊಲೀಸರು ಮಸ್ಕಿ ಪಟ್ಟಣದ ವಾಲ್ಮೀಕಿ ವೃತ್ತದ ಹತ್ತಿರ ತಡೆದು ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲಿ ಏಕಾಏಕಿ ಪೊಲೀಸರ ಮೇಲೆ ಹಲ್ಲೇ ನಡೆಸಿ ಪರಾರಿಯಾಗಿದ್ದಾರೆ. ಈ ಕುರಿತು ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.ಆರೋಪಿಗಳ ಹುಡುಕಾಟಕ್ಕೆ ಪೊಲೀಸರ ತಂಡ ರಚನೆಮಸ್ಕಿ: ತಾಲೂಕಿನ ಬಳಗಾನೂರು ಪೊಲೀಸ್ ಠಾಣೆ ಪೇದೆಗಳಿಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಸಂಬಧಿಸಿದಂತೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ಹೆಚ್ಚುವರಿ ವರಿಷ್ಠಾಧಿಕಾರಿ ಶಿವಕುಮಾರ ಪ್ರತ್ಯೇಕ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಬಳಗಾನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ನಡೆದ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಶಂಕಿತ ಆರೋಪಿಗಳ ವಿಚಾರಣೆಗೆ ತೆರಳಿದಾಗ ನಾಲ್ಕೈದು ಜನರ ಗುಂಪು ಪೇದೆಗಳಾದ ಮಂಜುನಾಥ, ಗೋಪಾಲ ಎನ್ನುವರ ಮೇಲೆ ದಾಳಿ ನಡೆಸಿತ್ತು. ಪೇದೆಗಳಿಬ್ಬರು ಗಂಭಿರ ಗಾಯಗೊಂಡು ಸಿಂಧನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಸ್ಪಿ ನಿಖಿಲ್ ಬಿ. ಗಾಯಾಳು ಸಿಬ್ಬಂದಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ ಬಳಗಾನೂರು ಪೊಲೀಸ್ ಠಾಣೆ, ಹಸ್ಮಕಲ್ ಗ್ರಾಮ ಹಾಗೂ ಮಸ್ಕಿಗೆ ಭೇಟಿ ನೀಡಿ ಘಟನಾ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರ ಜತೆ ಮಾತಾನಾಡಿ, ಪೊಲೀಸರ ಮೇಲೆ ದಾಳಿ ಮಾಡುವುದು ಹೊಸದೇನಲ್ಲ. ಇಂತಹ ಘಟನೆಗಳು ಆಗಾಗ ನಡೆಯುತ್ತವೆ. ಶೈಕ್ಷಣಿಕ, ಕಾನೂನಿನ ತಿಳಿವಳಿಕೆ ಕೊರತೆಯಿಂದ ಇಂತಹ ಘಟನೆ ನಡೆಯುತ್ತವೆ. ಈ ಹಿಂದೆ ಅವರ ಮೇಲೆ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ಧಾಖಲು ಆಗಿರುವ ಬಗ್ಗೆಯೂ ತನಿಖೆ ನಡೆಸಲಾಗುವುದು ಈ ಬಗ್ಗೆ ಆರು ಜನರ ಮೇಲೆ ಕೇಸ್ ದಾಖಲಾಗಿದೆ. ಆರೋಪಿಗಳ ಬಂಧನಕ್ಕಾಗಿ ಸಿಂಧನೂರು ಗ್ರಾಮೀಣ ಸಿಪಿಐ, ಇಬ್ಬರು ಪಿಎಸ್ಐಗಳ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ. ಶೀಘ್ರವೇ ಅರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಸಾರ್ವಜನಿಕರು ಯಾವುದೇ ಭಯಪಡಬಾರದು ಎಂದರು. ಈ ಸಂದರ್ಭದಲ್ಲಿ ಭೋವಿ ಸಮಾಜದ ಸಾರಪ್ಪ ಬಂಗಾಲಿ, ತಿಮ್ಮಣ್ಣ ಗುಡಿಸಲಿ, ರಂಗಪ್ಪ ಅರಿಕೇರಿ, ಗ್ಯಾನಪ್ಪ ಕಂದಗಲ್, ಅನರೇಶ ಸಾನಬಾಳ್, ದುರುಗಪ್ಪ ಗೋನವಾರ್, ಮಲ್ಲಯ್ಯ ಗಜಿನಿ, ಶಂಕ್ರಪ್ಪ ಬಂಗಾಲಿ, ರಮೇಶ ಗೋನ್ವಾರ, ವೇಂಕಟೇಶ, ಶೇಖರಪ್ಪ ಬೆಳಗಲ್ ವೇಂಕಟೇಶ ಲಿಂಗಸೂರು, ಸಿಪಿಐ ಬಾಲಚಂದ್ರ.ಡಿ.ಲಕ್ಕಂ, ಮಸ್ಕಿ ಅಪರಾಧ ಬ್ರಾಂಚ್ ಪಿಎಸ್ಐ ಬೀಮದಾಸ ಸೇರಿದಂತೆ ಇತರು ಸಿಬ್ಬಂದಿ ಇದ್ದರು.ಗಡಿಪಾರು ಮಾಡುವಂತೆ ಒತ್ತಾಯ: ಮಸ್ಕಿ ಪಟ್ಟಣದಲ್ಲಿ ಹಾಡುಹಗಲೇ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವವರನ್ನು ಬಂಧಿಸಿ ಗಡಿಪಾರು ಮಾಡುವಂತೆ ಭೋವಿ ಸಮಾಜದ ಮುಖಂಡರು ಹಲ್ಲೆಗೊಳಗಾಗದ ಅವರ ಕುಟುಂಬಸ್ಥರು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ ಅವರಿಗೆ ಮಸ್ಕಿ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು. ಮನವಿ ಪತ್ರ ಸ್ವೀಕರಿಸಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ ಮಾತನಾಡಿ ಹಲ್ಲೆ ನಡೆಸಿದವರನ್ನು ಕಾನೂನಿನ ಪ್ರಕಾರ ಬಂಧಿಸಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.