- ದಾವಣಗೆರೆಯಲ್ಲಿ ಇದೇ ಮೊದಲ ಸಲ ಪೊಲೀಸರ ಬಣ್ಣದೋಕುಳಿ ಹಬ್ಬ
- ಎಸ್‌ಪಿ ಉಮಾ ಪ್ರಶಾಂತ ಕಾಳಜಿಗೆ ಎಲ್ಲರೂ ಖುಷ್- - - ಕನ್ನಡಪ್ರಭ ವಾರ್ತೆ ದಾವಣಗೆರೆ
ಕಾಮದಹನ, ಹೋಳಿ ಹಬ್ಬದ ವೇಳೆ ಬಂದೋಬಸ್ತ್ ಕರ್ತವ್ಯದಲ್ಲಿ ತೊಡಗಿದ್ದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ನಗರದ ಡಿಎಆರ್ ಕಚೇರಿ ಆವರಣದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಸಂಭ್ರಮದಿಂದ ಬಣ್ಣಗಳ ಎರಚಿ ಸಂಭ್ರಮದಿಂದ ಹೋಳಿ ಆಚರಿಸಿದರು.ನಗರದ ಡಿಎಆರ್ ಕಚೇರಿ ಆವರಣದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಬೆಳಗ್ಗೆ 7 ಗಂಟೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಬಣ್ಣ ಹಚ್ಚುವ ಮೂಲಕ ಓಕಳಿಯಾಟಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಮಾ.13 ಮತ್ತು 14ರಂದು ಎಲ್ಲೆಡೆ ಕಾಮದಹನ, ಹೋಳಿ ಹಬ್ಬದಾಚರಣೆ ಹಿನ್ನೆಲೆ ಕಾನ್‌ಸ್ಟೇಬಲ್‌ನಿಂದ ಹಿಡಿದು ಹಿರಿಯ ಅಧಿಕಾರಿಗಳು, ಪುರುಷ- ಮಹಿಳಾ ಅಧಿಕಾರಿ, ಸಿಬ್ಬಂದಿ ಬಂದೋಬಸ್ತ್ ಕರ್ತವ್ಯದಲ್ಲಿ ತೊಡಗಿದ್ದರು. ಕಾನೂನು, ಸುವ್ಯವಸ್ಥೆ ಕಾಪಾಡಲು ಇಡೀ ಇಲಾಖೆ ಎರಡು ದಿನ ಹಗಲಿರುಳು ಕೆಲಸ ಮಾಡಿದ್ದುರ. ಯಾವುದೇ ಸಣ್ಣ ಅಹಿತಕರ ಘಟನೆಗೂ ಅವಕಾಶ ನೀಡದೇ, ಕೆಲಸ ಮಾಡಿದ್ದರು. ಆದರೆ, , ಸಿಬ್ಬಂದಿಗೂ ಹೋಳಿ ಸಂಭ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗಿರಲಿಲ್ಲ. ಇದನ್ನು ಅರಿತು ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಹೋಳಿ ಆಚರಣೆಗೆ ಅನುವು ಮಾಡಿಕೊಟ್ಟು ಪೊಲೀಸ್ ಕುಟುಂಬಗಳ ಹೃದಯ ಗೆದ್ದರು. ಆ ಮೂಲಕ ಐಪಿಎಸ್ ಅಧಿಕಾರಿಯಾಗಿದ್ದರೂ ತಾವೆಲ್ಲರೂ ಕರ್ತವ್ಯದಲ್ಲಿ ಒಂದೇ ಎಂಬ ಸಂದೇಶ ಸಾರಿದರು.ಹಿರಿಯ, ಕಿರಿಯ ಅಧಿಕಾರಿಗಳು, ಕೆಲ ಹಂತದ ನೌಕರರು ಎಂಬ ಯಾವುದೇ ಪದವಿ, ಹುದ್ದೆಗಳ ಅಂತರವಿಲ್ಲದೇ, ಬಣ್ಣಗಳ ಎರಚಿ, ಪರಸ್ಪರ ಶುಭಾಶಯ ಕೋರಿದರು. ಎಸ್‌ಪಿ ಉಮಾ ಪ್ರಶಾಂತ ಅವರು ಅಧಿಕಾರಿಗಳು, ಸಿಬ್ಬಂದಿಗೆ ಮಾತ್ರವಲ್ಲದೇ, ಮಾಧ್ಯಮ ಪ್ರತಿನಿಧಿಗಳಿಗೂ ಬಣ್ಣಹಚ್ಚುವ ಮೂಲಕ ಡಿಜೆ ಸದ್ದಿಗೆ ಎಲ್ಲರೊಂದಿಗೆ ಹೆಜ್ಜೆ ಹಾಕಿ ಗಮನ ಸೆಳೆದರು. ವಿಶೇಷ ಹೋಳಿ ಆಚರಣೆಯಲ್ಲಿ ಅಧಿಕಾರಿ, ಸಿಬ್ಬಂದಿ ಮೈಮರೆತು ಕುಣಿದು ಕುಪ್ಪಳಿಸಿದ್ದು ಗಮನ ಸೆಳೆಯಿತು. ಎಸ್‌ಪಿ ಉಮಾ ಪ್ರಶಾಂತ್ ಸೇರಿದಂತೆ ಅಧಿಕಾರಿಗಳು ವಿವಿಧ ಹಾಡುಗಳಿಗೆ ನೃತ್ಯ ಮಾಡಿ ಎಲ್ಲರನ್ನೂ ಬೆರಗುಗೊಳಿಸಿದರು. ಮಹಿಳಾ ಅಧಿಕಾರಿ, ಸಿಬ್ಬಂದಿ, ಪೊಲೀಸ್ ಕುಟುಂಬಗಳ ಮಕ್ಕಳು ಸಹ ಸಂಭ್ರಮದಿಂದ ಹೋಳಿ ಆಚರಿಸಿದರು.
ಮಕ್ಕಳಂತೂ ವಾರದಲ್ಲಿ 2 ದಿನ ಹೋಳಿ ಆಡಿದ ಸಂಭ್ರಮದಲ್ಲಿ ತೇಲುತ್ತಿದ್ದರು. ಅಲ್ಲಲ್ಲಿ ಮಕ್ಕಳಿಗೆ ಆಡವಾಡಲು ನೀರಿನ ಪೈಪ್ ಮೂಲಕ ಮಳೆ ನೀರಿನಂತೆ ಹನಿಗಳ ಸಿಂಚನ ವ್ಯವಸ್ಥೆ ಮಾಡಲಾಗಿತ್ತು. ಎಸ್‌ಪಿ ಅವರ ಪುಟ್ಟ ಮಗಳು ಸಹ ಗಮನ ಸೆಳೆದಳು.ಜಿಪಂ ಸಿಇಒ ಸುರೇಶ ಇಟ್ನಾಳ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಸಂತೋಷ, ಜಿ.ಮಂಜುನಾಥ, ಡಿವೈಎಸ್ಪಿಗಳಾದ ಪಿ.ಬಿ.ಪ್ರಕಾಶ, ಶರಣ ಬಸವೇಶ್ವರ, ಬಿ.ಎಸ್.ಬಸವರಾಜ, ಪದ್ಮಶ್ರೀ ಗುಂಜೀಕರ್, ಶಿಲ್ಪ, ಶೈಲಜಾ, ನಿರ್ಮಲ ಸೇರಿದಂತೆ ಅಧಿಕಾರಿ, ಸಿಬ್ಬಂದಿ ಹೋಳಿ ಜೊತೆಗೆ ಹೆಜ್ಜೆಯನ್ನೂ ಹಾಕಿದರು.
- - -(ಬಾಕ್ಸ್) * ಮನಸಿನ ಸಂತೋಷಕ್ಕೆ ಹೋಳಿ: ಎಸ್‌ಪಿ ದಾವಣಗೆರೆ: ಕಾಮದಹನ, ಹೋಳಿ ಹಬ್ಬದ ವೇಳೆ ನಮ್ಮೆಲ್ಲಾ ಅಧಿಕಾರಿ, ಸಿಬ್ಬಂದಿ ಬಂದೋಬಸ್ತ್ ಕರ್ತವ್ಯದಲ್ಲಿದ್ದೆವು. ಇದೀಗ ಇದೇ ಮೊದಲ ಬಾರಿಗೆ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ನಮ್ಮೆಲ್ಲಾ ಅಧಿಕಾರಿ, ಸಿಬ್ಬಂದಿಗಾಗಿ ವಿಶೇಷವಾಗಿ ಹೋಳಿ ಆಚರಿಸುತ್ತಿದ್ದೇವೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಹೇಳಿದರು.
ವರ್ಷವಿಡೀ ನಮ್ಮದು ಕಾರ್ಯ ಚಟುವಟಿಕೆ, ಒತ್ತಡ, ಬಿಡುವಿಲ್ಲದ ಕೆಲಸ ಮಾಡುವಂತಹ ಇಲಾಖೆ. ಗಣೇಶ ಚತುರ್ಥಿ, ಹೋಳಿ ಹಬ್ಬಕ್ಕೆ ಸಂಬಂಧಿಸಿದಂತೆ ದೊಡ್ಡ ಸಭೆಗಳು, ಮೆರವಣಿಗೆಗಳನ್ನು ಪರಿಗಣಿಸಿ, ಜಿಲ್ಲಾದ್ಯಂತ ನಮ್ಮೆಲ್ಲಾ ಅಧಿಕಾರಿ, ಸಿಬ್ಬಂದಿ ಬಂದೋಬಸ್ತ್, ಭದ್ರತೆಯಲ್ಲಿ ತೊಡಗಿರುತ್ತಾರೆ. ಹೋಳಿ ವೇಳೆ ಮಾ.13 ಮತ್ತು 14ರಂದು ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗೆ ಆಸ್ಪದ ಇಲ್ಲದಂತೆ ಕರ್ತವ್ಯ ನಿರ್ವಹಿಸಿದ್ದರು ಎಂದು ಶ್ಲಾಘಿಸಿದರು.ಕಾನೂನು ಮತ್ತು ಸುವ್ಯವಸ್ಥೆ ನ್ನು ಯಶಸ್ವಿಯಾಗಿ ನಿರ್ವಹಿಸಿದ್ದರಿಂದ ಪೊಲೀಸ್ ಅಧಿಕಾರಿ, ಸಿಬ್ಬಂದಿ ಶಾಂತವಾದ ವಾತಾವರಣದಲ್ಲಿ ಹೋಳಿ ಆಚರಿಸಬೇಕೆಂಬ ಕಾರಣಕ್ಕೆ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಾಗಿಯೇ ಹೋಳಿ ಆಚರಿಸುತ್ತಿದ್ದೇವೆ. ಇದೇ ಮೊದಲ ಬಾರಿಗೆ ಹೋಳಿ ಆಚರಿಸುವ ವ್ಯವಸ್ಥೆಗೆ ನಮ್ಮೆಲ್ಲಾ ಅಧಿಕಾರಿ, ಸಿಬ್ಬಂದಿಯಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
- - -ಕೋಟ್ ತಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದ್ದರಿಂದ ಎಲ್ಲರೂ ಸಂತೋಷಪಟ್ಟರು. ಇಂದು, ನಾವು, ಸಿಬ್ಬಂದಿ, ಪತ್ರಕರ್ತರೊಂದಿಗೆ ಹೋಳಿ ಆಚರಿಸುತ್ತಿದ್ದೇವೆ. ಅದು ಒಂದು ಸಂಪ್ರದಾಯ. ಹೋಳಿ ಆಡಿದ ನಂತರ ನಮ್ಮೆಲ್ಲರ ಆಯಾಸವೂ ಈಗ ಮಾಯವಾಗಿದೆ
- ವಿಜಯಕುಮಾರ ಸಂತೋಷ, ಹೆಚ್ಚುವರಿ ಪೊಲೀಸ್ ಅಧೀಕ್ಷಕ- - - -18ಕೆಡಿವಿಜಿ4.ಜೆಪಿಜಿ:
ದಾವಣಗೆರೆ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಾಗಿ ಇದೇ ಮೊದಲ ಬಾರಿಗೆ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಹೋಳಿ ಆಚರಿಸಲಾಯಿತು. -18ಕೆಡಿವಿಜಿ5.ಜೆಪಿಜಿ: ಉಮಾ ಪ್ರಶಾಂತ