ಬಸವಣ್ಣರನ್ನು ಜಾತಿ ಸಂಕೋಲೆಯಲ್ಲಿ ಕಟ್ಟಿ ಹಾಕಿದ ರಾಜಕೀಯ ನಾಯಕರು

KannadaprabhaNewsNetwork |  
Published : Apr 21, 2026, 01:15 AM IST
ಪೋಟೋ, 20ಎಚ್‌ಎಸ್‌ಡಿ1: ಪಟ್ಟಣದ ಜಯದೇವ ಕನ್ವನ್ಷನ್‌ ಹಾಲ್‌ ನಲ್ಲಿ ಸೋಮವಾರ  ವೀರಶೈವ ಲಿಂಗಾಯಿತ  ವಿವಿದ ಸಂಘಟನೆಗಳಿಂದ ಆಯೋಜಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಶಾಸಕ ಬಿಜಿ ಗೋವಿಂದಪ್ಪ ಉದ್ಗಾಟಿಸಿದರು. | Kannada Prabha

ಸಾರಾಂಶ

ಹೊಸದುರ್ಗ ಪಟ್ಟಣದ ಜಯದೇವ ಕನ್ವನ್ಷನ್‌ ಹಾಲ್‌ನಲ್ಲಿ ಸೋಮವಾರ ವೀರಶೈವ ಲಿಂಗಾಯಿತ ವಿವಿದ ಸಂಘಟನೆಗಳಿಂದ ಆಯೋಜಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಶಾಸಕ ಬಿ.ಜಿ.ಗೋವಿಂದಪ್ಪ ಉದ್ಘಾಟಿಸಿದರು.

ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಹೇಳಿಕೆ । ವೀರಶೈವ ಲಿಂಗಾಯಿತ ವಿವಿದ ಸಂಘಟನೆಗಳಿಂದ ಬಸವ ಜಯಂತಿಕನ್ನಡಪ್ರಭ ವಾರ್ತೆ ಹೊಸದುರ್ಗ

ಸರ್ವ ಸಮಾಜವನ್ನು ತನ್ನೊಟ್ಟಿಗೆ ಕರೆದುಕೊಂಡು ಹೋದವರು ಬಸವಣ್ಣ, ಅಂತವರನ್ನು ಇಂದು ನಮ್ಮ ಮೂಲ ಮಠದ ಸ್ವಾಮೀಜಿಗಳು, ರಾಜಕೀಯ ನಾಯಕರು ಜಾತಿಯ ಸಂಕೋಲೆಯಲ್ಲಿ ಕಟ್ಟಿ ಹಾಕಿದ್ದಾರೆ ಎಂದು ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಹೇಳಿದರು.

ಪಟ್ಟಣದ ಜಯದೇವ ಕನ್ವನ್ಷನ್‌ ಹಾಲ್‌ನಲ್ಲಿ ಸೋಮವಾರ ವೀರಶೈವ ಲಿಂಗಾಯಿತ ವಿವಿದ ಸಂಘಟನೆಗಳಿಂದ ಆಯೋಜಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಲಿಂಗ ಧರಿಸಿದವರೆಲ್ಲಾ ಲಿಂಗಾಯಿತರೇ, ಲಿಂಗಾಯಿತ ಎನ್ನುವುದು ಜಾತಿಯಲ್ಲ ಆದರೆ ಅದನ್ನು ಇಂದು ಜಾತಿಯ ಸ್ವರೂಪ ನೀಡಿ ಅದರಲ್ಲಿದ್ದ ವಚನಕಾರರನ್ನು ಬಿಟ್ಟು ಕೈಯಲ್ಲಿ ಕಲ್ಲು ಹಿಡಿದು ಓಡಾಡುತ್ತಿದ್ದೇವೆ ಇದರಿಂದ ಸೋದರ ಸಮುದಾಯಗಳು ನಮ್ಮಿಂದ ದೂರ ಉಳಿಯುತ್ತಿವೆ ಎಂದರು.

ಭಗೀರಥ ಪೀಠದ ಪುರುಷೋತ್ತಮಾಂದಪುರಿ ಸ್ವಾಮೀಜಿ ಮಾತನಾಡಿ, ಕಲ್ಯಾಣ ಕ್ರಾಂತಿಯ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದಿದ ಬಸವಣ್ಣನ ನಡೆ ನುಡಿಯಲ್ಲಿ ಏಕೆತೆಯಿತ್ತು ಆದರೆ ಇಂದು ಬಸವಣ್ಣನ ಹೆಸರಿನಲ್ಲಿ ಬೋಧನೆ ಮಾಡುವವರು ಹೆಚ್ಚಿದ್ದಾರೆ ಅದರೆ ಅವರ ನಡೆ ನುಡಯಲ್ಲಿ ಏಕತೆಯಿಲ್ಲ ಇಂತವರಿಂದ ಸಮ ಸಮಾಜದ ನಿರ್ಮಾಣ ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಬಸವಣ್ಣನವರ ಕಲ್ಪನೆಯಂತೆ ಸಮಾಜ ನಡೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಜಾತ್ಯತೀತ ನೆಲೆಗಟ್ಟಿನಲ್ಲಿ ಸಾಮಾಜಿಕ ಚಿಂತನೆ, ನ್ಯಾಯ ಒದಗಿಸುವ ಕೆಲಸ ಆಗಬೇಕಿದೆ. ತಾವೆಲ್ಲರೂ ಒಂದೇ ಎಂಬ ಏಕತೆಯ ಭಾವನೆಯಿಂದ ಸಮಾಜದ ಅಭಿವೃದ್ಧಿಗೆ ಕಂಕಣ ಬದ್ಧರಾಗಬೇಕು. ಬಸವೇಶ್ವರರ ತತ್ವ ಪಾಲಿಸಿದಲ್ಲಿ ಇಂತಹ ಜಯಂತಿಗೆ ಅರ್ಥ ಬರುತ್ತದೆ ಎಂದು ತಿಳಿಸಿದರು.

ವೀರಶೈವ ಸಮಾಜದ ತಾಲೂಕು ಕಾರ್ಯದರ್ಶಿ ಕೆ.ಎಸ್.ಕಲ್ಮಠ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಯಕ ಶ್ರೇಷ್ಠತೆ, ಧರ್ಮ ಪರಿಪಾಲನೆ ಪ್ರಚರಿಸಿದ ಧರ್ಮ ನಮ್ಮದು. ಇಂದು ವ್ಯಾಪಾರಸ್ಥ ಕುಟುಂಬ ಕಣ್ಮರೆಯಾಗಿದ್ದು ಬೇರೆಯವರು ಆಶ್ರಯ ಪಡೆದಿದ್ದಾರೆ. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಅಸ್ಪೃಶ್ಯತೆ ನಿವಾರಣೆಗೆ ಮುಂದಾಗಬೇಕು. ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಪುತ್ಥಳಿ ನಿರ್ಮಾಣ ಮಾಡುವ ಚಿಂತನೆ ಇದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವೀರಶೈವ ಸಮಾಜದ ಮುಖಂಡ ಬಿ.ಪಿ.ಓಂಕಾರಪ್ಪ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಜಿ.ಎನ್.ಮಲ್ಲಿಕಾರ್ಜುನಪ್ಪ ಅವರು ವಿಶೇಷ ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಅಕ್ಕಮಹಾದೇವಿ ಮಾತಾಜಿ, ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌, ಎಸ್.ಲಿಂಗಮೂರ್ತಿ, ಗೋ.ತಿಪ್ಪೇಶ್, ಆರ್.ತಮ್ಮಣ್ಣ, ಡಿ.ಗುರುಸ್ವಾಮಿ, ಮಲ್ಲಿಕಾರ್ಜುನ್, ಡಾ.ಅನಿತಾ ರಾಜೇಶ್, ಶಶಿಧರ್, ವಿಜಯ ಶಿವಲಿಂಗಪ್ಪ, ಅನಂತ್‌, ದಲಿತ ಮುಖಂಡ ಹೆಗ್ಗೆರೆ ರಂಗಪ್ಪ, ಮಲ್ಲೇಶ್ ಸೇರಿದಂತೆ ವೀರಶೈವ ಸಮಾಜದ ಮುಖಂಡರು, ವಿವಿಧ ಸಮುದಾಯಗಳ ಮುಖಂಡರು ಹಾಗೂ ಎಸ್‌.ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಹಾಜರಿದ್ದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಬಸವೇಶ್ವರರ ಭಾವಚಿತ್ರವನ್ನು ವೀರಭದ್ರಸ್ವಾಮಿ ದೇವಾಲಯದಿಂದ ಮುಖ್ಯ ರಸ್ತೆಯಲ್ಲಿ ವಿವಿಧ ಜಾನಪದ ಕಲಾ ಮೇಳದೊಂದಿಗೆ ಮೆರವಣಿಗೆ ನಡೆಸಲಾಯಿತು.

ಜನಾಂಗಗಳನ್ನು ಮೆಚ್ಚಿಸಲು ಜಯಂತಿಗಳಿಗೆ ರಜೆ ಘೋಷಣೆ ಮಾಡುವ ಬದಲು ಎಲ್ಲಾ ಶರಣರನ್ನು ಒಂದೇ ವೇದಿಕೆಯಲ್ಲಿ ಕರೆತರುವ ಮೂಲಕ ಶರಣರ ಜಯಂತಿ ಎಂದು ಯಾಕೆ ಮಾಡಬಾರದು? ಮಹನೀಯರ ಜಯಂತಿ ಕೇವಲ ಆಚರಣೆಗಳಾದೆ ಅವರ ಆಚಾರಗಳು ಆಚರಣೆಗೆ ಬರಬೇಕು ಅವರಲ್ಲಿನ ಭಾವನಾತ್ಮಕ ಭಾವನೆ ಪ್ರೀತಿಸುವ ಗುಣ ಎಲ್ಲಿಯವರೆಗೆ ಬರುವುದಿಲ್ಲ ಅಲ್ಲಿಯವರೆಗೆ ಸಂಘರ್ಷ ನಿಲ್ಲಲ್ಲ.

-ಡಾ.ಜಿ.ಎನ್‌ ಮಲ್ಲಿಕಾರ್ಜುನಪ್ಪ, ಸಾಹಿತಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಬದುಕಿ
ಬಸವಣ್ಣ ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಮಹನೀಯ