ಟೈಟಾನ್ ಐ ಕೇರ್ ಕಂಪನಿಯಲ್ಲಿ ರಾಸಾಯನಿಕ ಸೋರಿಕೆ: ಮೂವರು ಕಾರ್ಮಿಕರು ಅಸ್ವಸ್ಥ

KannadaprabhaNewsNetwork |  
Published : Apr 21, 2026, 01:15 AM IST
20ಎಚ್.ಎಲ್.ವೈ-1(ಎ): ತಾಲೂಕಾಡಳಿತ ಸೌಧದಲ್ಲಿ ಆಯೋಜಿಸಿದ ಬಸವ ಜಯಂತಿ ಸಮಾರಂಭದಲ್ಲಿ ಹಿರಿಯ ಶಾಸಕ ಆರ್.ವಿ.ದೇಶಪಾಂಡೆಯವರು ಬಸವ ಪಥ ಮಾಸಿಕ ಪತ್ರಿಕೆಯನ್ನು ಬಿಡುಗಡೆ ಮಾಡಿದರು.  | Kannada Prabha

ಸಾರಾಂಶ

ಅಗ್ನಿಶಾಮಕ ದಳದ ಸಮಯ ಪ್ರಜ್ಞೆಯಿಂದ ಮೂರು ಜನ ಕಾರ್ಮಿಕರನ್ನು ರಕ್ಷಿಸಿ ಕೂಡಲೇ ಜೈನ್ ಮಿಷನ್ ಆಸ್ಪತ್ರೆಗೆ ಸಾಗಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೂವರು ಕಾರ್ಮಿಕರು ಅಸ್ವಸ್ಥ । ಅಗ್ನಿಶಾಮಕ ದಳದಿಂದ ಮೂವರ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಗರ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ಟೈಟಾನ್ ಕಂಪನಿ ಐ ಕೇರ್ ವಿಬಾಗದಲ್ಲಿ ರಾಸಾಯನಿಕ ಸೋರಿಕೆಯಿಂದಾಗಿ ಮೂವರು ಕಾರ್ಮಿಕರು ಉಸಿರುಗಟ್ಟಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಅಗ್ನಿಶಾಮಕ ದಳದ ಸಮಯ ಪ್ರಜ್ಞೆಯಿಂದ ಮೂರು ಜನ ಕಾರ್ಮಿಕರನ್ನು ರಕ್ಷಿಸಿ ಕೂಡಲೇ ಜೈನ್ ಮಿಷನ್ ಆಸ್ಪತ್ರೆಗೆ ಸಾಗಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದು, ಸಂತ್ರಸ್ಥರ ವಿವರ ತಿಳಿಯಬೇಕಾಗಿದೆ.ಘಟನೆ ಸಂಭವಿಸಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳ ಮೂರು ಜನ ಕಾರ್ಮಿಕರನ್ನು ಕಾರ್ಖಾನೆಯಿಂದ ಹೊರತಂದು ಕೂಡಲೆ ಆಸ್ಪತ್ರೆಗೆ ಸಾಗಿಸಲು ಕಾರಣರಾದರು. ಪ್ರಾಣ ಭೀತಿಯಿಂದ ಒದ್ದಾಡುತಿದ್ದ ಮೂವರು ಕಾರ್ಮಿಕರಿಗೆ ಜೈನ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ವಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಸಾಗಿಸಲಾಗಿದ್ದು ಈಗ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.

ಘಟನೆ ನಡೆದ ಮಾಹಿತಿ ತಿಳಿದ ಕೈಗಾರಿಕಾ ವಲಯ ಉಸ್ತುವಾರಿ ಕಾರ್ಮಿಕ ಅಧಿಕಾರಿ, ಕಾರ್ಮಿಕ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ತಿಳಿದು ಬಂದಿದ್ದು ಆಸ್ಪತ್ರೆಗೆ ದಾಖಲಾಗಿರುವ ಮೂವರು ಕಾರ್ಮಿಕರ ಹೆಸರು ಊರು, ಹುದ್ದೆಗಳ ಬಗ್ಗೆ ತಿಳಿದುಬಂದಿಲ್ಲ. ಹಾಗೆಯೆ ಈ ಘಟನೆ ಸಂಭವಿಸಲು ಅಡಳಿತ ಮಂಡಳಿಯ ನಿರ್ಲಕ್ಷವೋ ಅಥವಾ ಆಕಸ್ಮಿಕ ಘಟನೆಯೋ ತನಿಖೆಯಿಂದ ಮಾತ್ರ ಹೊರಬರಬೇಕಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಬದುಕಿ
ಬಸವಣ್ಣ ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಮಹನೀಯ