ಬಲಿಷ್ಠ ಸಮ ಸಮಾಜ ಕಟ್ಟಲು ರಾಜಕೀಯ ಶಕ್ತಿ ಬೇಕು: ಚೇತನ್‌ ಅಹಿಂಸಾ

KannadaprabhaNewsNetwork |  
Published : Aug 27, 2026, 02:00 AM IST
26ಜಿಪಿಟಪಿ5ಗುಂಡ್ಲುಪೇಟೆಯಲ್ಲಿ ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸ ಮಾತನಾಡಿದರು. | Kannada Prabha

ಸಾರಾಂಶ

ಶತ್ರು ಎಂದರೆ ಯಾರು? ಶತ್ರು ಎಂದರೆ ಅಸಮಾನತೆ ಹಾಗೂ ಅನ್ಯಾಯದಿಂದ ಕೂಡಿರುವ ವ್ಯವಸ್ಥೆಯೇ ನಮಗೆ ಮೊದಲ ಶತ್ರು. ಅಸಮಾನತೆ ಹಾಗೂ ಅನ್ಯಾಯ ಜನರಿಗೆ ಅರ್ಥೈಸಿ, ಸರಿಪಡಿಸುವುದೇ ರಾಜ್ಯದ ಜನರ ಕರ್ತವ್ಯವಾಗಬೇಕು ಎಂದರು.

ಕನ್ನಡಡಪ್ರಭ ವಾರ್ತೆ ಗುಂಡ್ಲುಪೇಟೆ

ಅಖಂಡ ಕರ್ನಾಟಕದಲ್ಲಿ ಸಮ ಸಮಾಜ ಬಲಿಷ್ಠವಾಗಿ ಕಟ್ಟಲು ರಾಜಕೀಯ ಶಕ್ತಿ ಬೇಕು ಎಂದು ಸಾಮಾಜಿಕ ಹೋರಾಟಗಾರ ಹಾಗೂ ನಟ ಚೇತನ್‌ ಅಹಿಂಸಾ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಮತ್ತು ಭಾರತಕ್ಕೆ ರಾಜಕೀಯ ಪಕ್ಷ ಸ್ಥಾಪನೆ ಸಂಬಂಧ ಯುವಕರೊಂದಿಗೆ ಸಂವಾದದಲ್ಲಿ ಮಾತನಾಡಿ, ರಾಜಕೀಯ ಸ್ಥಾಪನೆ ಸಂಬಂಧ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ರೈತ, ಕಾರ್ಮಿಕ, ಮಹಿಳಾ ಸಂಘಟನೆಗಳು, ಪರಿಸರ ವಾದಿಗಳು, ವಿದ್ಯಾರ್ಥಿಗಳನ್ನು ಒಗ್ಗೂಡಿಸುವುದೇ ಈ ಸಭೆಯ ಉದ್ದೇಶ ಎಂದರು.

ಶತ್ರು ಎಂದರೆ ಯಾರು? ಶತ್ರು ಎಂದರೆ ಅಸಮಾನತೆ ಹಾಗೂ ಅನ್ಯಾಯದಿಂದ ಕೂಡಿರುವ ವ್ಯವಸ್ಥೆಯೇ ನಮಗೆ ಮೊದಲ ಶತ್ರು. ಅಸಮಾನತೆ ಹಾಗೂ ಅನ್ಯಾಯ ಜನರಿಗೆ ಅರ್ಥೈಸಿ, ಸರಿಪಡಿಸುವುದೇ ರಾಜ್ಯದ ಜನರ ಕರ್ತವ್ಯವಾಗಬೇಕು ಎಂದರು.

ನಾವು ನೀವೆಲ್ಲ ಬೇರೆ ಬೇರೆ ಜಾತಿ, ಧರ್ಮಗಳಿಂದ ಬಂದಿದ್ದೇವೆ. ನಮ್ಮ ಒಗ್ಗಟ್ಟು ಜಾತಿ ಅಥವಾ ಧರ್ಮದ ಒಗ್ಗಟ್ಟಲ್ಲ. ನಮ್ಮ ಒಗ್ಗಟ್ಟು ಸಿದ್ದಾಂತದ ಒಗ್ಗಟ್ಟು. ಸಿದ್ಧಾಂತ ಅರ್ಥೈಸಿಕೊಳ್ಳಬೇಕು ಎಂದರು.

ಎಡ ಪಂಥ, ಬಲ ಪಂಥ, ಮಧ್ಯ ಪಂಥಗಳಿವೆ. ಇವುಗಳನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಎಡ ಪಂಥ ಎಂದರೆ ಕೇರಳದ ಪಕ್ಷಗಳು, ಕಮುನಿಸ್ಟ್‌ ಪಕ್ಷಗಳು, ಆರ್ಥಿಕ ಸಬಲೀಕರಣಕ್ಕೆ ನಿಂತ ಪಕ್ಷಗಳನ್ನು ಎಡ ಪಂಥ ಎನ್ನಲಾಗುತ್ತದೆ ಎಂದರು.

ಬಲ ಪಂಥ ಎಂದರೆ ಹಿಂದುತ್ವ, ಆರ್‌ಎಸ್‌ಎಸ್‌ ನವರನ್ನು ಬಲ ಪಂಥ ಎನ್ನುತ್ತೇವೆ. ಮಧ್ಯ ಪಂಥ ಎಂದರೆ ಮನುವಾದಿ ಪಕ್ಷಗಳು, ಅಧಿಕಾರ ಹಿಡಿಯಲು ಹಪಾಹಪಿಸುತ್ತಿದ್ದಾರೆ. ಅಧಿಕಾರ ಬಂದ ಬಳಿಕ ಅಧಿಕಾರ ಪರಿವರ್ತನೆ ಮಾಡಲ್ಲ ಎಂದರು.

ನಮ್ಮದು ಎಡ ಅಲ್ಲ, ಬಲ ಅಲ್ಲ, ಮಧ್ಯನೂ ಅಲ್ಲ, ನಮ್ಮದು ಪ್ರತ್ಯೇಕವಾದ ಸೈದ್ಧಾಂತಿಕ ನೆಲೆಗಟ್ಟು. ಅಂಬೇಡ್ಕರ್‌, ಪೆರಿಯಾರ್, ಕ್ಯಾನ್ಸಿರಾಮ್‌ ನ ಸತ್ಯ ಪಂಥ ಎಂದು ಸ್ಪಷ್ಟಪಡಿಸಿದರು.ಅಂಬೇಡ್ಕರ್‌, ಪೆರಿಯಾರ್, ಕ್ಯಾನ್ಸಿರಾಮ್‌ ರ 20ನೇ ಶತಮಾನ ರಾಜಕೀಯ ಪಕ್ಷಗಳ ಸ್ಥಾಪನೆ ಮಾಡುವ ಮೂಲಕ ಸಮ ಸಮಾಜ ಕಟ್ಟಲು ಯಶಸ್ವಿಯಾಗಿದ್ದಾರೆ, ನಾವು ಕೂಡ ಸಂವಿಧಾನ ಮತ್ತು ಸಂವಿಧಾನ ಪೀಠಿಕೆ ಎತ್ತಿ ಹಿಡಿಯಬೇಕು ಎಂದರು.

ಸಂವಿಧಾನ ಎಲ್ಲರಿಗೂ ಗೊತ್ತಿದೆ. ಸಂವಿಧಾನದಲ್ಲಿ ಸಮಾನತೆ, ನ್ಯಾಯ, ಧರ್ಮ ನಿರಪೇಕ್ಷತೆ, ಸಹೋದರತೆ, ಭ್ರಾತೃತ್ವ ಇದೆ. ದೇಶದಲ್ಲಿ ಮೂರು ಸಾವಿರ ಪಕ್ಷಗಳು ನೋಂದಣಿಯಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಸಂವಾದಲ್ಲಿ ಗೌತಮ್‌, ಮಲ್ಲೇಶ, ನಾಗರಾಜು, ಮುತ್ತಣ್ಣ, ಸೋಮು, ಗೋವಿಂದರಾಜು, ಎ.ಅಬ್ದುಲ್‌ ಮಾಲೀಕ, ಪುಟ್ಟು ಸೇರಿದಂತೆ ಯುವಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮದ್ದೂರು ಕ್ಷೇತ್ರದ ಅಭಿವೃದ್ಧಿ ಕುರಿತಂತೆ ಸಾರ್ವಜನಿಕ ಚರ್ಚೆಗೆ ಸಿದ್ಧ
ಸಹಕಾರ ಸಂಘಕ್ಕೆ ಸದಸ್ಯರ ಬೆಂಬಲ ಅಗತ್ಯ: ಸಚಿವ ಚಲುವರಾಯಸ್ವಾಮಿ