ಸಿದ್ಧಗಂಗಾ ಶ್ರೀಗಳ ಶ್ರೀರಕ್ಷೆಯಿಂದ ರಾಜಕೀಯ ಮರುಜೀವ: ಕೇಂದ್ರ ಸಚಿವ ಸೋಮಣ್ಣ

KannadaprabhaNewsNetwork |  
Published : Oct 10, 2024, 02:17 AM IST
ಕುರುಗೋಡು  01  ಸಮೀಪದ ಸಿರಿಗೇರಿ ಗ್ರಾಮದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಸಿದ್ದಗಂಗಾ ಶ್ರೀಗಳ ಸಾಕ್ಷಾö್ಯಚಿತ್ರ ಧ್ವನಿಸುರುಳಿ ಬಿಡುಗಡೆಮಾಡಿದರು | Kannada Prabha

ಸಾರಾಂಶ

ವಿರೋಧದ ನಡುವೆ ಸಿದ್ದಗಂಗಾ ಶ್ರೀಗಳ ಆಶೀರ್ವಾದಿಂದ ಜಯಗಳಿಸಿ ಕೇಂದ್ರದಲ್ಲಿ ಮಂತ್ರಿಯಾದೆ.

ಕುರುಗೋಡು: ಲೋಕಸಭಾ ಚುನಾವಣೆಯಲ್ಲಿ ಸ್ವಪಕ್ಷೀಯರೇ ನನ್ನದಾರಿಗೆ ಮುಳುವಾಗಿದ್ದರು. ಸಿದ್ಧಗಂಗಾ ಶ್ರೀಗಳ ಆಶೀರ್ವಾದದಿಂದ ಎಲ್ಲವನ್ನು ಮೆಟ್ಟಿ ನಿಂತು ಜಯಶಾಲಿಯಾದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಭಾವುಕರಾಗಿ ನುಡಿದರು.

ಸಮೀಪದ ಸಿರಿಗೇರಿ ಗ್ರಾಮದಲ್ಲಿ ಅನ್ನಪೂರ್ಣ ಕ್ರಿಯೇಷನ್ಸ್ ನಿರ್ಮಾಣದ ಸಿದ್ದಗಂಗಾ ಶ್ರೀಗಳ ಸಾಕ್ಷಸ್ಯಾಚಿತ್ರ ಧ್ವನಿಸುರುಳಿಯನ್ನು ಭಾನುವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ವಿರೋಧದ ನಡುವೆ ಸಿದ್ದಗಂಗಾ ಶ್ರೀಗಳ ಆಶೀರ್ವಾದಿಂದ ಜಯಗಳಿಸಿ ಕೇಂದ್ರದಲ್ಲಿ ಮಂತ್ರಿಯಾದೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಪಾಂಡಿಚೇರಿ, ತಮಿಳುನಾಡು, ಉತ್ತರಪ್ರದೇಶ, ಮಧ್ಯಪ್ರದೇಶ ಸೇರಿದಂತೆ ೧೫ ರಾಜ್ಯಗಳಿಗೆ ಪ್ರವಾಸ ಮಾಡಿ ಸಮಸ್ಯೆಗಳನ್ನು ಆಲಿಸಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಕಿಸಿಕೊಡುವೆ. ಅಧಿಕಾರ ಶಾಶ್ವತವಲ್ಲ. ಇರುವಷ್ಟು ದಿನ ಜನಮುಖಿ ಕೆಲಸ ಮಾಡಿ ಜನ ಮಾನಸದಲ್ಲಿ ಶಾಶ್ವತವಾಗಿ ಉಳಿಯುವೆ ಎಂದರು.

ಸಿರಿಗೇರಿ ಗ್ರಾಮಕ್ಕೆ ಭೇಟಿನೀಡಿದ್ದೇನೆ. ನಮ್ಮ ಖಾತ್ರೆಗೆ ಸೇರಿದ ಯಾವುದಾದರೂ ಕೆಲಸವಿದ್ದರೆ ತಿಳಿಸಿ ನೆರವೇರಿಸುವ ಭರವಸೆ ನೀಡಿದರು.

ಸಿರಿಗೇರಿ ಯರಿಸ್ವಾಮಿ ಕಾರ್ಯಕ್ರಮ ಕುರಿತು ಪ್ರಸ್ತಾವಿಕ ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ದ್ಯಾವಣ್ಣ, ಉಪಾಧ್ಯಕ್ಷೆ ರಾಜಮ್ಮ ಹುಲುಗಪ್ಪ, ಡಾ.ಬಸವರಾಜ ಕ್ಯಾವಿಟರ್ ಇದ್ದರು.

ಕುರುಗೋಡು ಸಮೀಪದ ಸಿರಿಗೇರಿ ಗ್ರಾಮದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಸಿದ್ದಗಂಗಾ ಶ್ರೀಗಳ ಸಾಕ್ಷ್ಯಚಿತ್ರ ಧ್ವನಿಸುರುಳಿ ಬಿಡುಗಡೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ