ಕನ್ನಡಪ್ರಭ ವಾರ್ತೆ ಮೈಸೂರು
ಈ ಮಧ್ಯ ಮೊಸರಲ್ಲಿ ಕಲ್ಲು ಹುಡುಕಿದಂತೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕಿನ 17 ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಸಬೇಕಿದ್ದು, 13 ಸ್ಥಾನಗಳಿಗೆ ಚುನಾವಣೆ ನಡೆಸಲು ತಯಾರಿ ಮಾಡಿಕೊಂಡಿದ್ದು, ಉಳಿದ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಸದೆ ಕುಂಟು ನೆಪವೊಡ್ಡಿ ಕ್ಷೇತ್ರದ ಚುನಾಯಿತ ಆಕಾಂಕ್ಷಿಗಳಿಗೆ ಮಣ್ಣು ಎರೆಚಿದೆ.
ಎಂಸಿಡಿಸಿಸಿ ಬ್ಯಾಂಕಿಗೆ ಕೃಷಿ ಮತ್ತು ಸಹಕಾರ ಕ್ಷೇತ್ರದಲ್ಲಿ ಸೇವೆ ಮಾಡುವ ಮನೋಭಾವ ಹೊಂದಿರುವವರು ಸ್ಪರ್ಧೆ ಮಾಡಿ ಆಯ್ಕೆಯಾಗುವುದು ಈ ಹಿಂದಿನಿಂದಲೂ ನಡೆದು ಬಂದಿರುವ ಪ್ರತೀತಿ. ಆದರೆ ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಬೇಕೆಂಬ ಆಕಾಂಕ್ಷಿಗಳನ್ನು ಗಮನಿಸಿದರೆ ಬ್ಯಾಂಕ್ ಯಾವ ದಿಕ್ಕಿಗೆ ಸಾಗುತ್ತಿದೆ ಎಂಬ ಆತಂಕ ಸಹಕಾರಿಗಳಲ್ಲಿ ಮನೆ ಮಾಡಿದೆ.ಸರ್ಕಾರ- ಜಿ.ಡಿ. ಹರೀಶ್ ಗೌಡ:
ಸರ್ಕಾರದ ಈ ನಡೆಯನ್ನು ಪ್ರಶ್ನಿಸಿದ ಸಹಕಾರಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದರ ಪರಿಣಾಮ ನ್ಯಾಯಾಲಯ ಚುನಾವಣೆ ನಡೆಸಲು ಸೂಚನೆ ನೀಡಿದರೂ ಸಹ ಇದನ್ನು ಧಿಕ್ಕರಿಸಿದ ಸರ್ಕಾರ ನ್ಯಾಯಾಲಯಕ್ಕೆ ನೆಪಗಳನ್ನೇ ದಾಖಲೆಯನ್ನಾಗಿ ನೀಡಿ ಚುನಾವಣೆಯನ್ನು ಮುಂದೂಡಿಸಿತ್ತು. ಆದರೆ ಇದೀಗ ಒಂದೂವರೆ ವರ್ಷಗಳು ಕಳೆದ ನಂತರದಲ್ಲಿ ನ್ಯಾಯಾಲಯದ ಆದೇಶದಿಂದ ಸಹಕಾರಿಗಳಿಗೆ ನ್ಯಾಯ ಸಿಕ್ಕಿತೆಂದು ಭಾವಿಸಿ ಚುನಾವಣೆಗೆ ಸಜ್ಜಾಗಿದ್ದರು. ಇದರ ನಡುವೆಯೂ 13 ಸ್ಥಾನಗಳಿಗೆ ಚುನಾವಣೆ ನಿಗದಿಪಡಿಸಿ, 4 ಸ್ಥಾನಗಳ ಚುನಾವಣೆಯನ್ನು ಮುಂದೂಡಿದೆ.
ಸಹಕಾರಿ ಕ್ಷೇತ್ರ ಪ್ರಬಲವೇ?:
ಸಿಎಂಗೆ ಪ್ರತಿಷ್ಠೆಯ ಪ್ರಶ್ನೆಯೇ?:
ಅಲ್ಲದೇ, ಎಂಸಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಈ ಬಾರಿ ಅಧಿಕಾರವನ್ನು ತಮ್ಮದಾಗಿಸಿಕೊಳ್ಳಲೇಬೇಕೆಂಬ ಬಗ್ಗೆ ಸರ್ಕಾರ ಸಾಕಷ್ಟು ರಣತಂತ್ರ ರೂಪಿಸಿಕೊಂಡಿದ್ದು, ಇದೇ ಕಾರಣದಿಂದ ಈ ಬಾರಿಯ ಎಂಸಿಡಿಸಿಸಿ ಚುನಾವಣೆಯಲ್ಲಿ ಅಧಿಕಾರ ಹಿಡಿಯಲೇಬೇಕೆಂಬ ಕುರಿತಂತೆ ಹಠಕ್ಕೆ ಬಿದ್ದಿದ್ದಾರೆಂಬ ಮಾತುಗಳು ಕೇಳಿಬಂದಿದೆ.
ಎಂಸಿಡಿಸಿಸಿ ಬ್ಯಾಂಕ್ ಚುನಾವಣೆ ಇನ್ನೂ ಮುಗಿಯದಿದ್ದರೂ ಕಾಂಗ್ರೆಸ್ಸಿಗರು ಮಾತ್ರ ಈಗಾಗಲೇ ಪ್ರತಿಷ್ಠಿತ ಸಹಕಾರಿ ಬ್ಯಾಂಕಿನ ಕುರ್ಚಿ ಮೇಲೆ ಕಣ್ಣಿಟ್ಟಿದ್ದು, ಆ ಮೂಲಕ ಆಡಳಿತದ ಗದ್ದುಗೆ ಏರುವ ಕನಸಿನಲ್ಲಿದ್ದಾರೆ. ಪ್ರಮುಖವಾಗಿ ಎಂಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಪುಟ್ಟರಂಗಶೆಟ್ಟಿ, ಕಾಂಗ್ರೆಸ್‌ಹಿರಿಯ ಮುಖಂಡ ದೊಡ್ಡಸ್ವಾಮೇಗೌಡ, ಚಂದ್ರಶೇಖರ್, ಮಾಜಿ ಶಾಸಕ ನರೇಂದ್ರ ಹಾಗೂ ಎಂಸಿಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಸಿ. ಬಸವೇಗೌಡ ಅವರು ರೇಸ್ ನಲ್ಲಿದ್ದಾರೆ. ಇದರ ನಡುವೆ ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ ಹುದ್ದೆಗೆ ಶಾಸಕ ಅನಿಲ್ ಚಿಕ್ಕಮಾದು, ನರೇಂದ್ರ ಹಾಗೂ ಬಸವೇಗೌಡ ಅವರು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ. ಇವರ ನಡುವೆ ನಿಕಟಪೂರ್ವ ಅಧ್ಯಕ್ಷರಾದ ಜಿ.ಡಿ. ಹರೀಶ್ ಗೌಡ ಅವರ ನೇತೃತ್ವದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಸಹಕಾರಿಗಳು ಕಾಂಗ್ರೆಸ್ ಸ್ಪರ್ಧಿಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ಮೂಲಕ ತೀವ್ರ ಪೈಪೋಟಿ ನೀಡಲು ಸಜ್ಜಾಗಿದ್ದಾರೆ.
ಪ್ರತಿಷ್ಠಿತ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್‌ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ರಾಜ್ಯ ಸರ್ಕಾರ ಇದಕ್ಕಾಗಿ ಅಧಿಕಾರದ ದುರ್ಬಳಕೆ ಮಾಡಿಕೊಂಡು, ಹಿಂಬಾಗಿಲಿನ ಮೂಲಕ ಅಧಿಕಾರ ಹಿಡಿಯುವ ಪ್ರಯತ್ನದಲ್ಲಿದೆ. ಇದಕ್ಕಾಗಿ ಈ ಬಾರಿಯ ಚುನಾವಣೆಯಲ್ಲಿ ಶಾಸಕ ಜಿ.ಡಿ. ಹರೀಶ್ ಗೌಡ ಸೇರಿದಂತೆ ಹಲವು ಸ್ಪರ್ಧಿಗಳನ್ನು ಅನರ್ಹ ಮಾಡುವ ಮೂಲಕ ಸಹಕಾರಿ ಕ್ಷೇತ್ರದ ನಿಯಮ ಗಳನ್ನೆಲ್ಲಾ ಗಾಳಿಗೆ ತೂರಿದೆ. ಆ ಮೂಲಕ ಅಧಿಕಾರದ ದುರ್ಬಳಕೆ ಮಾಡಿಕೊಂಡು, ಸರ್ಕಾರ ಸಹಕಾರ ಕ್ಷೇತ್ರದ ಬ್ಯಾಂಕ್ ಚುನಾವಣೆ ನಡೆಸುತ್ತಿದೆ ಎಂಬ ಕುರಿತುಂತೆ ಈಗಾಗಲೇ ಎಲ್ಲ ಕಡೆಗಳಲ್ಲಿ ಚರ್ಚೆ ನಡೆಯುತ್ತಿದೆ.
ಒಬ್ಬರ ವಿರುದ್ಧ ಹಲವರ ಪೈಪೋಟಿ:ಈ ಬಾರಿಯ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್‌ಚುನಾವಣೆ ಓನ್‌ವರ್ಸಸ್‌ಸೋ ಮನಿ ಎನ್ನುವಂತಾಗಿದೆ. ಇದಕ್ಕೆ ಪೂರಕವೆಂಬಂತೆ ನಿಕಟಪೂರ್ವ ಅಧ್ಯಕ್ಷ ಜಿ.ಡಿ. ಹರೀಶ್ ಗೌಡ ಅವರು ಒಂದೆಡೆ ಏಕಾಂಗಿಯಾಗಿ ಸ್ಪರ್ಧೆಗೆ ಮುಂದಾಗಿದ್ದರೆ, ಇವರ ವಿರುದ್ಧ ಕಾಂಗ್ರೆಸ್‌ನ ಶಾಸಕರಾದ ಅನಿಲ್ ಚಿಕ್ಕಮಾದು (ಎಚ್.ಡಿ. ಕೋಟೆ), ಕೆ.ಆರ್.ನಗರ ಶಾಸಕ ಡಿ. ರವಿಶಂಕರ್ ಅವರ ತಂದೆ ದೊಡ್ಡಸ್ವಾಮಿಗೌಡ, ಸಚಿವ ಕೆ.ವೆಂಕಟೇಶ್ ಅವರ ನಿಕಟವರ್ತಿ ಸುನೀಲ್ (ಪಿರಿಯಾಪಟ್ಟಣ), ಶಾಸಕ ಪುಟ್ಟರಂಗಶೆಟ್ಟಿ (ಚಾಮರಾಜನಗರ), ಎಚ್.ಎಂ. ಗಣೇಶ್ ಪ್ರಸಾದ್ (ಗುಂಡ್ಲುಪೇಟೆ), ನರೇಂದ್ರ (ಕೊಳ್ಳೇಗಾಲ) ಅವರ ಜೊತೆಗೆ ಎಂಸಿಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಸಿ. ಬಸವೇಗೌಡ, ಚಂದ್ರಶೇಖರ್ ಹಾಗೂ ರಾಜಕೀಯ ವ್ಯಕ್ತಿಗಳ ನಿಕಟವರ್ತಿಗಳು ಚುನಾವಣಾ ಕಣದಲ್ಲಿದ್ದಾರೆ.