ಗಂಗಾವತಿ: ಕಾಂಗ್ರೆಸ್, ಬಿಜೆಪಿ ಪ್ರಮುಖರಿಂದ ಮತದಾನ

KannadaprabhaNewsNetwork |  
Published : May 08, 2024, 01:01 AM IST
ಫೋಟುಃ-7 ಜಿಎನ್ ಜಿ10 – ಗಂಗಾವತಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು  ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಮತಗಟ್ಟಿಯಲ್ಲಿ  ಮತದಾನ ಮಾಡಿದರು.7 ಜಿಎನ್ ಜಿ11- ಗಂಗಾವತಿ .  ಮಾಜಿ ಶಾಸಕಪರಣ್ಣ ಮುನವಳ್ಳಿ ಅವರು  ಟಿಎಪಿಸಿ ಎಂ ಎಸ್ಮತಗಟ್ಟಿಯಲ್ಲಿ ಮತದಾನ ಮಾಡಿದರರು.7ಜಿಎನ್ ಜಿ12- ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಮತ್ತು ಪತ್ನಿ ಅವರು ಜೇಸ್ಕಾಂ ಕಚೇರಿಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.ಫೋಟು—7 ಜಿಎನ್ ಜಿ13- ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರು  ಪಬ್ಲಿಕ್ ಕ್ಲಬ್ ಶಾಲೆಯ ಮತಗಟ್ಟೆಯಲ್ಲಿ ಮತದಾನಮಾಡಿದರು.ಫೋಟುಃ-7 ಜಿಎನ್ ಜಿ 14- ಗಂಗಾವತಿ ಮಾಜಿ ಸಂಸದ ಶಿವರಾಮಗೌಡ  ಮತ್ತು ಅವರ ಕುಟಂಬದ ಸದಸ್ಯರೊಂದಿಗೆ ಆಗಮಿಸಿ ಅವರುಜಿಲ್ಲಾ ಪಂಚಾಯಿತಿ   ಇಂಜನೀಯರಿಂಗ್ ಕಚೇರಿಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.  | Kannada Prabha

ಸಾರಾಂಶ

ನಗರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ತಮ್ಮ ವಾರ್ಡ್‌ಗಳ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸೇರಿ ಹಲವು ಗಣ್ಯರಿಂದ ಹಕ್ಕು ಚಲಾವಣೆ

ಕನ್ನಡಪ್ರಭ ವಾರ್ತೆ ಗಂಗಾವತಿ

ನಗರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ತಮ್ಮ ವಾರ್ಡ್‌ಗಳ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಮಾಜಿ ಶಾಸಕ ಪರಣ್ಣ ಮುನವಳ್ಳಿ ಟಿಎಪಿಸಿಎಂಎಸ್ ಮತಗಟ್ಟೆಯಲ್ಲಿ ಮತದಾನ ಮಾಡಿದರೆ, ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಮತ್ತು ಪತ್ನಿ ಜೆಸ್ಕಾಂ ಕಚೇರಿಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಪಬ್ಲಿಕ್ ಕ್ಲಬ್ ಶಾಲೆಯ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ಮಾಜಿ ಸಂಸದ ಶಿವರಾಮೇಗೌಡ ಕುಟಂಬದ ಸದಸ್ಯರೊಂದಿಗೆ ಆಗಮಿಸಿ ಅವರು ಜಿಪಂ ಎಂಜಿನಿಯರಿಂಗ್ ಕಚೇರಿಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.ಗಂಗಾವತಿಯ ಸಿದ್ದಾಪುರ ಬಡಾವಣೆಯ ನಿವಾಸಿ ಅಲ್ಲಮಪ್ರಭು ಪಾಟೀಲರ ಪುತ್ರ ಕಿರಣಕುಮಾರ ಮತ್ತು ಸೊಸೆ ಐಶ್ವರ್ಯ ದುಬೈದಿಂದ ಆಗಮಿಸಿ ಮತದಾನ ಮಾಡಿದರು.ಸಖಿ ಮತಗಟ್ಟೆಗಳಲ್ಲಿ ಪಿಂಕ್ ಕಲರ್ ಶರಬತ್ತು ನೀಡಿ ಸ್ವಾಗತ!:ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ತೆರೆಯಲಾದ ಪಿಂಕ್ ಮತಗಟ್ಟೆಯಲ್ಲಿ ಮತ ಚಲಾಯಿಸಲು ಬಂದವರಿಗೆ ತಾಪಂ ಇಒ ಲಕ್ಷ್ಮೀದೇವಿ ಪಿಂಕ್ ಕಲರ್ ಶರಬತ್ತು ನೀಡಿದರು.ಪಿಂಕ್ ಮತಗಟ್ಟೆಯಲ್ಲಿ ಶಾಮಿಯಾನ, ಸ್ವಾಗತ ಫಲಕ, ಸೆಲ್ಫಿಸ್ಟ್ಯಾಂಡ್, ಫಿಂಕ್ ಕಲರ್ ಶರಬತ್ತು, ಮಹಿಳಾ ಸಿಬ್ಬಂದಿ ಇರುವುದು ವಿಶೇಷವಾಗಿತ್ತು. ಸಖಿ ಮತಗಟ್ಟೆಯಲ್ಲಿ ಮತದಾರರು ಮತ ಚಲಾಯಿಸಿ ಖುಷಿಪಟ್ಟರು. ಸೆಲ್ಫಿ ಸ್ಟ್ಯಾಂಡ್ ಬಳಿ ಫೋಟೋ ಕ್ಲಿಕ್ಕಿಸಿಕೊಂಡರು. ಮತದಾರರಿಗೆ ನೆರಳಿನ ವ್ಯವಸ್ಥೆ, ನೀರು, ಶರಬತ್ತು ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ವೇಳೆ ಗ್ರಾಪಂ‌ ಅಭಿವೃದ್ಧಿ ಅಧಿಕಾರಿ ಸುರೇಶ ಚಲವಾದಿ, ತಾಲೂಕು ಐಇಸಿ ಸಂಯೋಜಕರು, ಗ್ರಾಪಂ ಸಿಬ್ಬಂದಿ, ನಿಯೋಜಿತ ಚುನಾವಣಾ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಈ ಬಾರಿ ಉತ್ತಮ ಮಳೆ, ಕೆರೆ ಭರ್ತಿ: ಮುಳ್ಳುಗದ್ದುಗೆ ಕಾರ್ಣಿಕ
ಡಬ್ಬಿ ಮೆಣಸಿನಕಾಯಿ ಕ್ವಿಂಟಾಲ್‌ಗೆ 90 ಸಾವಿರ ರು. ದಾಖಲೆಯ ದರ!