ಪೋಳ್ಯ: ‘ಪರಂಪರೆ 2026’ ಸಾಂಸ್ಕೃತಿಕ ಕಾರ್ಯಕ್ರಮ

KannadaprabhaNewsNetwork |  
Published : Aug 26, 2026, 03:00 AM IST
ಅದ್ಧೂರಿ | Kannada Prabha

ಸಾರಾಂಶ

ಪೋಳ್ಯದಲ್ಲಿರುವ ಇನ್‌ಸ್ಪಿರೇಶನ್‌ ಪಿಯು ಕಾಲೇಜು ಆವರಣದಲ್ಲಿ ಆ. 22ರಂದು ‘ಪರಂಪರೆ 2026’ ಸಾಂಸ್ಕೃತಿಕ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ಪುತ್ತೂರು: ಪೋಳ್ಯದಲ್ಲಿರುವ ಇನ್‌ಸ್ಪಿರೇಶನ್‌ ಪಿಯು ಕಾಲೇಜು ಆವರಣದಲ್ಲಿ ಆ. 22ರಂದು ‘ಪರಂಪರೆ 2026’ ಸಾಂಸ್ಕೃತಿಕ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.ಮಂಗಳೂರು ಡಿಡಿಪಿಯು ರಾಜೇಶ್ವರಿ ಉದ್ಘಾಟಿಸಿದರು. ಎಸ್‌ವಿಜಿ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್‌ ಸಂಸ್ಥಾಪಕ ವಿಶ್ವನಾಥ್ ಶೇಷಾಚಲ, ಕಾರ್ಯದರ್ಶಿ ಶ್ರುತಿ ಶಿವಣ್ಣ ವಿಶ್ವನಾಥ್, ಆನಂದ್, ಸಾಂದೀಪನಿ ಶಿಕ್ಷಣ ಸಂಸ್ಥೆಯ ಜಯರಾಮ ಕೆದಿಲಾಯ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ, ಡಾ. ರವೀಂದ್ರನಾಥ್ ಐತಾಳ್, ಡಾ. ಸೂರ್ಯನಾರಾಯಣ ಕೆ. ಮತ್ತಿತರರಿದ್ದರು.ಮೈಸೂರಿನ ಎಸ್‌ವಿಜಿ ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಪಿಯು ಕಾಲೇಜು ಪ್ರಾಂಶುಪಾಲೆ ಪುಷ್ಪಲತಾ, ಸಕಲೇಶಪುರದ ಪಯೋನಿರ್‌ ಪಬ್ಲಿಕ್‌ ಸ್ಕೂಲ್‌ ಮುಖ್ಯ ಶಿಕ್ಷಕ ಹರೀಶ್‌ಕುಮಾರ್, ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿದ್ಯಾರ್ಥಿಗಳ ಯಕ್ಷಗಾನ, ಭರತನಾಟ್ಯ, ಜನಪದ ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಲಂಗಾರಿನಲ್ಲಿ ಸಮಗ್ರ ಆರೋಗ್ಯ ಅಭಿಯಾನ: 120 ಮಂದಿಗೆ ಉಚಿತ ಆರೋಗ್ಯ ತಪಾಸಣೆ
ಕಸ್ತೂರಿರಂಗನ್ ವರದಿ ಗೊಂದಲ ನಿವಾರಣೆಗೆ ಆಗ್ರಹ